Belagavi News In Kannada | News Belgaum

ಕಿತ್ತೂರು ಸಂಸ್ಥಾನ ಮತ್ತು ನಿರ್ಲಕ್ಷಿತ ಯೋಧರು ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ

🌐 Belgaum News :

ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠಗಳು ಸಂಯುಕ್ತವಾಗಿ ದಿನಾಂಕ 22.10.2021ರಂದು ಶುಕ್ರವಾರ ಬೆಳಗಿನ 10 ಗಂಟೆಯಿಂದ ಸಂಗೊಳ್ಳಿ ರಾಯಣ್ಣ ಪ್ರಥಮದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಕಿತ್ತೂರು ಉತ್ಸವದ ಬೆಳ್ಳಿ ಹಬ್ಬದ ಮತ್ತು ಭಾರತದ ಸ್ವಾಂತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ‘ಕಿತ್ತೂರು ಸಂಸ್ಥಾನ ಮತ್ತುÀ ನಿರ್ಲಕ್ಷಿತ ಯೋಧರು’ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ವಿಚಾರ ಸಂಕಿರಣವನ್ನು ಕಿತ್ತೂರು ಸಂಸ್ಥಾನದ ಸರ್ದಾರ ಗುರುಸಿದ್ಧಪ್ಪ ಅವರ ವಂಶಸ್ತರಾದ ಜಯಶ್ರೀ ಪಾಟೀಲ ಉದ್ಘಾಟಿಸಲಿದ್ದಾರೆ. ಅರವಿಂದ ಯಾಳಗಿ ಅವರು ಆಶಯಭಾಷಣವನ್ನು ನಡೆಸಿಕೊಡಲಿದ್ದಾರೆ.

 

ಕುಲಪತಿಗಳಾದ ಪ್ರೊ. ಎಂ. ರಾಮಚಂದ್ರಗೌಡ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪ್ರಾಚಾರ್ಯರಾದ ಪ್ರೊ. ಎಂ. ಜಯಪ್ಪ ಪ್ರಾಸ್ತಾವಿಕ ಭಾಷಣ ನಡೆಸಿಕೊಡಲಿದ್ದಾರೆ. ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ ಅವರು ಸಮಾರೋಪ ಭಾಷಣಮಾಡಲಿದ್ದಾರೆ. ಎಲ್ಲಾ ಗೊಷ್ಠಿಗಳ ಅಧ್ಯಕ್ಷತೆಯನ್ನು ಪ್ರೊ. ಎಸ್ ಎಂ ಗಂಗಾಧರಯ್ಯ ವಹಿಸಲಿದ್ದಾರೆ.

ವಿಚಾರ ಸಂಕಿರಣದಲ್ಲಿ ಒಟ್ಟು ಎಂಟು ಗೋಷ್ಠಿಗಳು ನಡೆಯಲಿವೆ. ಶ್ರೀ. ಯ.ರು. ಪಾಟೀಲ ಅವರು ಅಮಟೂರು ಬಾಳಪ್ಪನ ಕುರಿತು, ಡಾ. ಅಮರೀಶ ಯತಗಲ್ ಅವರು ಗಜವೀರ ಮತ್ತು ವಡ್ಡರ ಯಲ್ಲಪ್ಪನ ಕುರಿತು, ಡಾ. ಆರ್. ಎಂ. ಷಡಕ್ಷರಯ್ಯ ಅವರು ಸರ್ದಾರ ಗುರುಸಿದ್ಧಪ್ಪನ ಕುರಿತು, ಡಾ. ಎಚ್.ಎಸ್. ಮೇಲಿನಮನಿ ಅವರು ಬಿಚ್ಚುಗತ್ತಿ ಚನ್ನಬಸಪ್ಪನನ್ನು ಕುರಿತು, ಡಾ. ಎ.ಬಿ. ವಗ್ಗರ ಅವರು ರಾಯಣ್ಣನ ನಂತರದ ಕಿತ್ತೂರ ಕಲಿಗಳ ಕುರಿತು ಹೊಸ ವಿಷಯಗಳನ್ನು ಬಯಲಿಗೆ ತಂದಿದ್ದಾರೆ.

 

ಶ್ರೀ. ಬಸವರಾಜ ಕಮತ ಅವರು ರಾಯಣ್ಣನ ತಾಯಿ ಕೆಂಚಮ್ಮನನ್ನು ಕುರಿತು, ಶ್ರೀ. ಮಹೇಶ ಚನ್ನಂಗಿ ಅವರು ರಾಣಿ ವೀರಮ್ಮನ ಕುರಿತು, ಡಾ. ಸರಸ್ವತಿ ಭಗವತಿ ಅವರು ರಾಣಿ ರುದ್ರಮ್ಮನನ್ನು ಕುರಿತು ಹೊಸ ಅಂಶಗಳ ಮೇಲೆ ಬೆಳಕು ಚಲ್ಲಲಿದ್ದಾರೆ. ಡಾ. ಶೋಭಾ ನಾಯಕ ಹಾಗೂ ಡಾ. ರಮೇಶ ಎನ್. ಎಂ ರಮೇಶ ಅವರು ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ.

ವಿಚಾರ ಸಂಕಿರಣದಲ್ಲಿ ಡಾ. ಗಜಾನನನಾಯ್ಕ, ಡಾ. ಮಹೇಶ ಗಾಜಪ್ಪನವರ, ಡಾ ಹನುಮಂತಪ್ಪ ಸಂಜೀವಣ್ಣನವರ, ಡಾ. ಪಿ ನಾಗರಾಜ, ಡಾಸಾವಕಾರ ಕಾಂಬಳೆ, ಡಾ. ನಾರಾಯಣ ನಾಯ್ಕ, ಡಾ. ಯಲ್ಲಪ್ಪ ಜಕ್ಕಣ್ಣವರ, ಡಾ ಸದಾಶಿವ ಮುಗಳಿ, ಡಾ. ಬಿ. ಆರ್ ರಾಧಾ ಅವರು ಭಾಗವಹಿಸಲಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum