Belagavi News In Kannada | News Belgaum

ಸಿದ್ದರಾಮಯ್ಯನವರಿಗೆ ಹೋರಾಟದ ಪುಸ್ತಕ ಕೊಟ್ಟ ಆಪ್ತ ಶಿಷ್ಯ ಅಯ್ಯಪ್ಪಗೌಡ ಗಬ್ಬೂರು.

🌐 Belgaum News :

ರಾಯಚೂರು : ಇಂದು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ನಿವಾಸದಲ್ಲಿ ರಾಯಚೂರು ಜಿಲ್ಲೆಯ ಯುವಕರ ಕಣ್ಮಣಿ,ಯುವ ಹೋರಾಟಗಾರ, ಸಮಾಜ ಸೇವಕ,ಶಿಕ್ಷಣ ಪ್ರೇಮಿ. ಅಖಿಲ ಕರ್ನಾಟಕ ಸಿದ್ದರಾಮಯ್ಯ ಯುವ ಬಿಗ್ರೇಡ್ ರಾಯಚೂರು ಜಿಲ್ಲಾಧ್ಯಕ್ಷರಾದ ಅಯ್ಯಪ್ಪಗೌಡ ಗಬ್ಬೂರು ರವರು ಕರ್ನಾಟಕ ರಾಜ್ಯದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಹೋರಾಟದ ಪುಸ್ತಕ ಕೊಟ್ಟರು.

ರಾಯಚೂರು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಯುವ ಬಿಗ್ರೇಡ್ ವತಿಯಿಂದ ಜಿಲ್ಲೆಯಲ್ಲಿ ಸಂಘಟನೆ, ಹೋರಾಟ,ಸರ್ಕಾರದ ವಿರುದ್ಧ ಧ್ವನಿ ಎತ್ತಿರುವ ಪತ್ರಿಕೆಯ ಪ್ರಕಟಣೆಗಳು, ಹಾಗೂ
ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಪಕ್ಷದ ಪರವಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಧ್ವನಿ ಎತ್ತಿರುವ ಪತ್ರಿಕೆಗಳು, ಹೋರಾಟದ ಭಾವಚಿತ್ರಗಳು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಜೊತೆ ಬೇಟಿ ಮಾಡಿದ ಭಾವಚಿತ್ರಗಳನ್ನು ಒಳಗೊಂಡಿರುವ ಹೋರಾಟದ ಪುಸ್ತಕ ಸಿದ್ದರಾಮಯ್ಯನವರಿಗೆ ಕೊಟ್ಟರು.

ಸಿದ್ದರಾಮಯ್ಯನವರು ಅಯ್ಯಪ್ಪಗೌಡ ಗಬ್ಬೂರಿಗೆ ಸಲಹೆ ನೀಡಿದರು. ಯುವಕ ಇದ್ದೀಯಾ ಹೋರಾಟ ಮಾಡು.ಯುವಕರು ಹೋರಾಟ ಮಾಡಿದಾಗ ಮಾತ್ರ ಸಮಾಜ ಬದಲಾವಣೆಯಾಗುತ್ತದೆ ಎಂದು ಸಿದ್ದರಾಮಯ್ಯನವರು ಅಯ್ಯಪ್ಪಗೌಡರಿಗೆ ಸಲಹೆ ನೀಡಿದರು.//////

📱 Read Top News, Belgaum News Updates, Belagavi News in Kannada, Latest News on News Belgaum