Belagavi News In Kannada | News Belgaum

ನಾಲ್ವರು ಕುಖ್ಯಾತ ಕಳ್ಳರು ಬಂಧನ, 1.25 ಕೋಟಿ ಚಿನ್ನಾಭರಣ ವಶ

🌐 Belgaum News :

ಬೆಂಗಳೂರು:  ನಾಲ್ವರು ಕುಖ್ಯಾತ ಕನ್ನಗಳ್ಳರನ್ನು  ಪೊಲೀಸ್ ರು ಬಂಧಿಸಿ, ಕಿಡಿಗೇಡಿಗಳಿಂದ ಸುಮಾರು 1.25 ಕೋಟಿ ರೂ. ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು  ಬಾಣಸವಾಡಿ ಉಪ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಆರೋಪಿಗಳ ಬಂಧನ ಬಳಿಕ 30 ಕನ್ನಗಳ ಕಳವು ಪ್ರಕರಣಗಳು ಪತ್ತೆಯಾಗಿವೆ.

ಪಿಸ್ತೂಲ್ ತೋರಿಸಿ ಸುಲಿಗೆ: ಕಾರಿ ನಲ್ಲಿ ಬಂದು ಪಿಸ್ತೂಲ್ ತೋರಿಸಿ ಸುಲಿಗೆ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸಲು ಬಂಧಿಸಿ 5 ಜೀವಂತ ಗುಂಡುಗಳ ಸಮೇತ ಪಿಸ್ತೂಲ್‍ನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ನೀಡಿದ ಹೇಳಿಕೆ ಮೇರೆಗೆ ಸುಮಾರು 65 ಲಕ್ಷ ರೂ. ಬೆಲೆ ಬಾಳುವ 1 ಕೆ.ಜಿ 200 ಗ್ರಾಂ ತೂಕದ ಚಿನ್ನದ ಒಡವೆಗಳು , 5 ಕೆ.ಜಿ ಬೆಳ್ಳಿಯ ಒಡವೆಗಳು, ಒಂದು ಕಾರು , 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಬಂಧನದಿಂದ ಬಾಣಸವಾಡಿ ಪೊಲೀಸ್ ಠಾಣೆಯ 11 ಪ್ರಕರಣಗಳು, ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ 1 ಪ್ರಕರಣ, ಜೆ.ಸಿ.ನಗರ ಪೊಲೀಸ್ ಠಾಣೆ, ಪುಟ್ಟೇನಹಳ್ಳಿಪೊಲೀಸ್ ಠಾಣೆ, ಹೆಣ್ಣೂರು, ಕೋಲಾರ ನಗರ ಠಾಣೆ, ಅರಸೀಕೆರೆ ಟೌನ್ ಪೊಲೀಸ್ ಠಾಣೆ ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪೊಲೀಸ್ ಠಾಣೆಯ ತಲಾ 1 ಪ್ರಕರಣಗಳು ಸೇರಿದಂತೆ ಒಟ್ಟು 18 ಕನ್ನ ಕಳವು , ಕಾರು ಕಳ್ಳತನ ಪ್ರಕರಣಗಳು ಪತ್ತೆ ಹಚ್ಚಲಾಗಿದೆ./////

📱 Read Top News, Belgaum News Updates, Belagavi News in Kannada, Latest News on News Belgaum