Belagavi News In Kannada | News Belgaum

ಕನ್ನಡ ರಾಜ್ಯೋತ್ಸವವನ್ನುಅದ್ಧೂರಿಯಾಗಿ ಆಚರಿಸುತ್ತೇವೆ : ರಾಜ್ಯ ಸರ್ಕಾರಕ್ಕೆ ಬಸವರಾಜ ಕಾಣಪ್ಪನವರ ಎಚ್ಚರಿಕೆ

🌐 Belgaum News :

ಗೋಕಾಕ : ರಾಜ್ಯೋತ್ಸವಆಚರಣೆಗೆ ರಾಜ್ಯ ಸರ್ಕಾರ ತಡೆಯೊಡ್ಡಿದರು ಸಹ ಕರ್ನಾಟಕ ರಕ್ಷಣಾ ವೇದಿಕೆ ಅದ್ಧೂರಿಯಾಗಿ ಬೆಳಗಾವಿಯಲ್ಲಿ ಕನ್ನಡ ಹಬ್ಬವನ್ನು ಆಚರಿಸಲಾಗುತ್ತದೆ ಎಂದು  ಕರ್ನಾಟಕ ರಕ್ಷಣಾ ವೇದಿಕೆಯ ಗೋಕಾಕ ತಾಲ್ಲೂಕು ಅಧ್ಯಕ್ಷ ಬಸವರಾಜ ಕಾಣಪ್ಪನವರ ತಿಳಿಸಿದರು.

ಗಡಿ ಜಿಲ್ಲೆ ಬೆಳಗಾವಿಯಲ್ಲಿ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಡೆಯುತ್ತಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಬಿಜೆಪಿ ಸರ್ಕಾರಕ್ಕೆ ಸಾವಿರಾರು, ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ, ರೋಡ್ ಶೋ ನಡೆಸುವ ಮೂಲಕ ಉಪಚುನಾವಣೆ ಪ್ರಚಾರ ನಡೆಸಲಿಕ್ಕೆ ಅವಕಾಶ ಇದೆ. ರಾಜ್ಯೋತ್ಸವ ಆಚರಿಸಲಿಕ್ಕೆ ಏಕೆ ಇಲ್ಲ ಎಂದು ಪ್ರಶ್ನಿಸಿದರು.

ಕನ್ನಡ ಪರ ಸಂಘಟನೆಗಳು ಅದ್ಧೂರಿಯಿಂದ ಆಚರಿಸುವ  ಹಬ್ಬ ಕನ್ನಡ ರಾಜ್ಯೋತ್ಸವ. ಇದಕ್ಕೆ ಸರ್ಕಾರ ತಡೆಯೊಡ್ಡುತ್ತಿರುವುದು ಖಂಡನೀಯ. ರಾಜಕೀಯಕ್ಕಿಲ್ಲದ ಅಡ್ಡಿ ಕನ್ನಡಕ್ಕೆ ಏಕೆ ? ಕೊರೊನಾ  ನೆಪ ಹೇಳಿ ರಾಜ್ಯೋತ್ಸವ ಆಚರಣೆಗೆ ಸರ್ಕಾರ ಅಡ್ಡಿ ಉಂಟು ಮಾಡುತ್ತಿದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಮೇಲೆ,  ಕನ್ನಡಿಗರ ಮೇಲೆ ಕೇಸ್ ದಾಖಲಿಸಿದ್ರು ಸಹ ರಾಜ್ಯೋತ್ಸವವನ್ನು  ಅದ್ದೂರಿಯಾಗಿ ಆಚರಿಸುತ್ತೇವೆ. ಕನ್ನಡ ಭಾಷೆ, ನಾಡು ನುಡಿ ರಕ್ಷಣೆಗೆ ಹಾಗೂ ಕನ್ನಡಿಗರು ಬೆಳಗಾವಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum