Belagavi News In Kannada | News Belgaum

ಹೆಣ್ಣು ಮಕ್ಕಳು ವಿದ್ಯಾವಂತರಾದರೆ ವರದಕ್ಷಿಣೆಗೆ ಮುಕ್ತಿ : ನ್ಯಾಯವಾದಿ ಯಲ್ಲಪ್ಪ

🌐 Belgaum News :

ಘಟಪ್ರಭಾ: “ಹೆಣ್ಣು  ಮಕ್ಕಳು ವರದಕ್ಷಿಣೆ ಎಂಬ ದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಂಡು ಶೋಷಣೆಗೆ ಒಳಗಾಗುತ್ತಿದ್ದಾರೆ. ಗ್ರಾಮೀಣ ಭಾಗದ ಜನತೆ ಹೆಚ್ಚಾಗಿದ್ದಾರೆ.  ಎಲ್ಲಾ ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಇದಕ್ಕೆ ಮುಕ್ತಿ ನೀಡಬಹುದು ಎಂದು” ನ್ಯಾಯವಾದಿ   ಯಲ್ಲಪ್ಪ  ಕಟ್ಟಿಕಾರ ಹೇಳಿದರು.

ತಾಲೂಕಾ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ,   ಮೂಡಲಗಿ  ನ್ಯಾಯಾಲಯ ಸಿವಿಲ್ & ಜೆಎಂಎಫ್ ಸಿ ,   ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ  ವತಿಯಿಂದ  ತುಕ್ಕಾನಟ್ಟಿ ಗ್ರಾಮದ  ಲಕ್ಷೀ ದೇವಿಯ ಸಭಾ ಭವನದಲ್ಲಿ  ಗುರುವಾರ ಆಯೋಜಿಸಲಾಗಿದ್ದ,   ಕಾನೂನು ಅರಿವು ನೆರವು ಶಿಬಿರ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

 

ಕಾನೂನಿನ ಅರಿವು ಅಗತ್ಯ:

ಸ್ತ್ರೀಯರು ಒಂದಲ್ಲಾ ಒಂದು ಸಮಸ್ಯೆಗಳಿಗೆ ಸಿಲುಕುತ್ತಿದ್ದಾಳೆ ಇದವುಗಳಿಂದ ನೊಂದ ಯುವತಿಯರಲ್ಲಿ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅವರಲ್ಲಿ ಕಾನೂನಿನ ಅರಿವು ಇಲ್ಲದಿರುವುದೇ ಕಾರಣವಾಗಿದೆ. ಕಾನೂನಿನ ಅರಿವು ಮೂಡಬೇಕಾದರೆ ಮಹಿಳೆಯರು ವಿದ್ಯಾವಂತರಾಗಬೇಕು.ಕಿರುಕುಳಕ್ಕೊಳಗಾದ ಮಹಿಳೆ ವಿದ್ಯಾವಂತಳಾಗಿದ್ದರೆ ಗಂಡ ಬಿಟ್ಟಹೋದರೂ ತಾನು ಸ್ವಾವಲಂಬಿಯಾಗಿ ಬದುಕುವ ಶಕ್ತಿಯನ್ನು ಹೊಂದಿರುತ್ತಾಳೆ.

ಹಳ್ಳಿಗಳಲ್ಲಿ ಮಹಿಳೆಯರ ಮೇಲೆ  ದೌರ್ಜನ್ಯ ಹೆಚ್ಚಾಗಿ ನಡೆಯುತ್ತವೆ. ಅವರು ಅವಿದ್ಯಾವಂತರಾಗಿದ್ದರಿಂದ ಸಮಸ್ಯೆ, ಈಗಿನ ಸಂಸ್ಕೃತಿ ಪೂರ್ಣ ಬದಲಾಗಿದೆ. ಪಾಲಕರು  ಹೆಣ್ಣು ಮಕ್ಕಳಿಗೆ ಸಂಪೂರ್ಣ ಜಬಾಬ್ದಾರಿ ನೀಡುವುದರಿಂದ ಸಮಸ್ಯೆ ಮತ್ತಷ್ಟೂ ಉದ್ಬವಾಗಿವೆ ಎಂದು.

ಬೈಕ್, ಮೊಬೈಲ್ ನೀಡುತ್ತಾರೆ, ಇವುಗಳಿಗೆ ಅಂಟಿಕೊಂಡು ಸಮಾಜದಲ್ಲಿ ಬಾಲ್ಯ ವಿವಾಹ ಹಾಗೂ ಮಹಿಳೆಯರು ದಾರಿತಪ್ಪುತ್ತಿದ್ದಾರೆ.  ಮಕ್ಕಳಿಗೆ ಯಾವುದೇ ಸೌಲಭ್ಯ ನೀಡಿದರು. ಪಾಲಕರು ಎಚ್ಚರಿಕೆಯಿಂದ ಇರಬೇಕೆಂದು ತಿಳಿ ಹೇಳಿದರು.

 

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ  ಇಂದಿರಾ ಭೋವಿ ಮಾತನಾಡಿ,  ಮಕ್ಕಳ ಕಲ್ಯಾಣ , ಬಾಲ್ಯ ವಿವಾಹ, ಕಾನೂನು ಅರಿವು ನೆರವು ಉಚಿತವಾಗಿ  ಪಡೆದುಕೋಳ್ಳಬೆಕು ಎಂದು ಹೇಳಿದರು.

ಅಂಗನವಾಡಿ  ಮೆಲ್ವಿಚಾರಕಿ ಡಿ. ಮೇಗೆರಿ, ಪಿಡಿಓ ವಿರಭಂದ್ರ ಗುಂಡಿ ಗ್ರಾ ಪಂ ಅಧ್ಯಕ್ಷ ಕುಮಾರ ಮರ್ದಿ, ಮಹಾದೇವಿ ಗದಾಡಿ,  ಸುನಂದಾ ಭಜಂತ್ರಿ, ತಿಪ್ಪಣ್ಣ ಹುಲಕುಂದ, ಗಂಗಪ್ಪ ಹಮ್ಮನ್ನವರ , ಗಾಯತ್ರಿ ಬಾಗೇವಾಡಿ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ, ಅಂಗನವಾಡಿ ಶಿಕ್ಷಕಿಯರು ಆಶಾ ಕಾರ್ಯಕರ್ತೆರು ಹಾಗೂ ಇತರರು ಇದ್ದರು.//////

📱 Read Top News, Belgaum News Updates, Belagavi News in Kannada, Latest News on News Belgaum