Belagavi News In Kannada | News Belgaum

8 ವರ್ಷದ ಪ್ರೀತಿ ನಿರಾಕರಿಸಿದ ಯುವತಿ: ಸಾವಿನ ಮನೆಯ ಕದ ತಟ್ಟಿದ ಯುವಕ

🌐 Belgaum News :

ಕೊಡಗು: 8 ವರ್ಷದಿಂದ ಪರಸ್ಪರ  ಪ್ರೀತಿಸಿದ ಯುವತಿ ಕೈಕೊಟ್ಟಿದಕ್ಕೆ  ಯುವಕನೋರ್ವ ಮನನೊಂದು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ  ನಡೆದಿದೆ.

ಪೊನ್ನಂಪೇಟೆ ತಾಲೂಕಿನ ಸುಳುಗೋಡು ಗ್ರಾಮದ ದರ್ಶನ್(28) ಮೃತ ವ್ಯಕ್ತಿ. ಈತ ಮಧ್ಯಪ್ರದೇಶದ ಸಿಂಗ್ರೌಳಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಅಲ್ಲೇ ಡೆತ್​ನೋಟ್​ ಬರೆದಿಟ್ಟು ಸಾವಿನ ಮನೆಯ ಕದ ತಟ್ಟಿದ್ದಾನೆ. ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿದೆ.
ಸ್ವಗ್ರಾಮದ ಯುವತಿ ಮತ್ತು ದರ್ಶನ್​ ಇಬ್ಬರೂ 8 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ. ಇವರಿಬ್ಬರ ಮದುವೆಗೂ ಮನೆಯಲ್ಲಿ ಒಪ್ಪಿಗೆ ಸಿಕ್ಕಿತ್ತಂತೆ. ಯುವತಿಯೂ ಮದುವೆಗೆ ಓಕೆ ಅಂದಿದ್ದಳಂತೆ. 4 ತಿಂಗಳ ಹಿಂದೆ ಬೆಂಗಳೂರಿನ ಪೊಲೀಸ್​ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಯುವಕನೊಬ್ಬನ ಮೇಲೆ ಯುವತಿಗೆ ಪ್ರೀತಿಯಾಗಿದ್ದು, ಆತನನ್ನೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾಳೆ.

ಇದೇ ಕಾರಣಕ್ಕೆ ಯುವತಿ ದರ್ಶನ್ ಜತೆ ವಿವಾಹ ನಿರಾಕರಿಸಿದ್ದಾಳೆ. ಇದರಿಂದ ಮನನೊಂದ ದರ್ಶನ್, ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಸಾವಿಗೆ ಪ್ರೇಯಸಿ ಶಿಲ್ಪಾ ಮತ್ತು ಆಕೆಯ ಮನೆಯವರು ಕಾರಣ‌ ಎಂದು ಉಲ್ಲೇಖಿಸಿದ್ದಾನೆ./////

📱 Read Top News, Belgaum News Updates, Belagavi News in Kannada, Latest News on News Belgaum