Belagavi News In Kannada | News Belgaum

ಲೇಖಕಿಯರ ಸಂಘದ ವತಿಯಿಂದ ಕೃತಿಗಳ ಲೋಕಾರ್ಪಣೆ.- ಕೃತಿಗಳು ಹೆಚ್ಚುತ್ತಿವೆಓದುಗರು ಹೆಚ್ಚುತ್ತಿಲ್ಲ – ಸಾಹಿತಿ ಬಿ. ಎಸ್. ಗವಿಮಠ

🌐 Belgaum News :

. 21ರಂದು ಗುರುವಾರ ನಗರದಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಸಾಹಿತಿರೇಣುಕಾಜಾಧವರವರು ರಚಿಸಿದ ಅವಳಿ ಕೃತಿಗಳ ಬಿಡುಗಡೆ ಸಮಾರಂಭಜರುಗಿತು. ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಲೇಖಕಿಯರ ಸಂಘದಅಧ್ಯಕ್ಷೆಡಾ. ಹೇಮಾವತಿ ಸೋನೋಳ್ಳಿ ಮಾತನಾಡಿ ಲೇಖಕಿಯರ ಸಂಘದ ಹಿರಿಯ ಸಾಹಿತಿಗಳ ಅನುಭವದಅಗರದಿಂದ ಸಾಮಾನ್ಯರಲ್ಲಿ ಸಾಮಾನ್ಯರು ಸಹ ಸಾಹಿತ್ಯದಕೃಷಿಯಲ್ಲಿತೊಡಗಿದ್ದಾರೆ.

ಮಹಿಳೆಯರ ಸಾಹಿತ್ಯ ಪ್ರೀತಿ ಹೆಮ್ಮರವಾಗಿ ಬೆಳೆಯುತ್ತಿದೆ ಎಂದರು. ಹಿರಿಯ ಸಾಹಿತಿಬಿ.ಎಸ್. ಗವಿಮಠರವರುರೇಣುಕಾಜಾಧವಅವರ ‘ಅಮ್ಮ’ ಮತ್ತು ‘ಓ ನನ್ನಕಂದಅರುಣ’ ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ ಇದೀಗ ಕೃತಿಗಳು ಹೆಚ್ಚುತ್ತಿವೆ,ಆದರೆಓದುಗರು ಹೆಚ್ಚುತ್ತಿಲ್ಲ. ಇದು ಸಾಹಿತ್ಯಕ್ಕೆಆತಂಕಕಾರಿ.

ಜೀವನದಲ್ಲಿ ನಂಬಿಕೆಯೇದೇವರು, ನಂಬಿದರೆಕಲ್ಲು ಸಹ ದೇವರು ನಂಬದಿದ್ದರೆದೇವರೇಕಲ್ಲು.ಅದರಲ್ಲೂಅಮ್ಮನೇ ಸಾಕ್ಷಾತ್‍ದೇವರು. ಆತ್ಮಕಥನಗಳು ನೈಜತೆಯನ್ನು ತಿಳಿಸುತ್ತವೆ. ಜಾಧವಅವರಅಮ್ಮ-ಮಗನ ಕುರಿತಾದಎರಡು ಕೃತಿಗಳು ನಿಜವಾಗಲೂ ಅಂತರಾಳದ ಭಾವನೆಗಳನ್ನು ವ್ಯಕ್ತಪಡಿಸುತ್ತವೆ.

ಇಂತಹ ಕೃತಿಗಳು ಹೊರಬರಲಿ ಎಂದರು. ಇದೇ ಸಂದರ್ಭದಲ್ಲಿಚುಟುಕು ಸಾಹಿತ್ಯಕ್ಕೆ ಪೆÇ್ರೀತ್ಸಾಹ ನೀಡಲು ವೈಯಕ್ತಿಕವಾಗಿ ಲೇಖಕಿಯರ ಸಂಘಕ್ಕೆ 25000 ರೂಪಾಯಿಗಳ ದತ್ತಿ ನಿಧಿಯನ್ನುದಾನವಾಗಿ ನೀಡಿ ಮುಂಬರುವ ದಿನಗಳಲ್ಲಿ ಇದನ್ನು ವಿಶೇಷವಾಗಿಚುಟುಕು ಸಾಹಿತ್ಯವನ್ನು ಪೆÇ್ರೀತ್ಸಾಹಿಸಲು ಬಳಕೆಮಾಡಿ ಎಂದರು. ರಾಣಿಚೆನ್ನಮ್ಮ ವಿಶ್ವವಿದ್ಯಾಲಯದಕನ್ನಡ ಪ್ರಾಧ್ಯಾಪಕಿಡಾ.

ಶೋಭಾ ನಾಯಕ ‘ಅಮ್ಮ’ ಕೃತಿಯನ್ನು ಪರಿಚಯಿಸುತ್ತಾ ಮಾತನಾಡಿ ಬದುಕೇ ಬರಹಆದರೆಜೀವನದರ್ಶನವಾಗುತ್ತದೆ. ಅಮ್ಮನಅನುಭವ,ಪುನರ್ಜನ್ಮಕುರಿತಕುತೂಹಲ,ಅಮ್ಮನಆಚರಣೆ ಸಂಸ್ಕøತಿ, ಆತ್ಮ ಮತ್ತು ಜೀವಗಳ ಬೆಸುಗೆ ಕೃತಿಯಲ್ಲಿಅಡಗಿದೆ. ಆತ್ಮ ನಸಿಸುವದಿಲ್ಲ ಜೀವ ನಶಿಸುತ್ತದೆ. ಅಮ್ಮನಜಾಗೃತರೂಪ ನಿಜಕ್ಕೂಇಲ್ಲಿಜೀವಂತಿಕೆ ಪಡೆದಿದೆ. ಅಮ್ಮನವರಿಗೆಧಾರ್ಮಿಕ-ಸಾಮಾಜಿಕ, ಅನುಭವಗಳ ಆಗರವೇಅಮ್ಮನಲ್ಲಿಅಡಗಿದೆಎಂದುಕೃತಿ ಪರಿಚಯಿಸಿದರು. ‘ಓ ನನ್ನಕಂದ’ ಕವನ ಸಂಕಲನ ಪರಿಚಯಿಸಿ ಮಾತನಾಡಿದಡಾ.

ಭಾರತಿ ಮಠದಅಮ್ಮನ ಬದುಕಿನಚೇತನವೇಆಕೆಯ ಮಗ. ಮಗನಿಲ್ಲದ ನೋವನ್ನುಅಕ್ಷರದಲ್ಲಿ ತಿಳಿಸಿದ್ದಾರೆ. ಕವನ ಸಂಕಲನದಲ್ಲಿ ಪ್ರತಿ ಕವನಗಳು ಮಗನ ಕುರಿತಾದಅಂತಃಕರಣವನ್ನುಓದುಗನ ಮನವನ್ನುತದಕುತ್ತವೆಎಂದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಸಾಹಿತಿಡಾ.

ಗುರುದೇವಿ ಹುಲೆಪ್ಪನವರಮಠಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಲೇಖಕಿಯರಕೃತಿ ಮತ್ತು ಭಾವನೆಗಳನ್ನು ಅವರ ಆಶಯಗಳು ಮತ್ತು ಗುರಿಗಳನ್ನು ವಿಶಿಷ್ಟ ರೀತಿಯಲ್ಲಿ ಲೇಖಕಿಯರ ಸಂಘ ಪೆÇೀಷಿಸುತ್ತಿದೆ. ಅದಕ್ಕೆತಕ್ಕಂತೆ ಲೇಖಕಿಯರು ಸಹ ಶ್ರದ್ಧೆಯಿಂದ ಸಂಘವನ್ನು ಬೆಳೆಸುತ್ತಿದ್ದಾರೆ.

ಅದೇರೀತಿ ದಿನೇದಿನೇ ನಮ್ಮ ಸಂಘಕ್ಕೆ ದತ್ತಿ ದಾನಿಗಳ ಬೆಂಬಲ ಸಿಗುತ್ತಿದ್ದು ಹೀಗೆ ಮುಂದುವರಿಯಲಿ ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ಶಾಂತಾದೇವಿ ಹುಲೆಪ್ಪನವರಮಠದಾನಮಾಡುವ ಬಿ. ಎಸ್. ಗವಿಮಠರಂತಹ ಸಹೃದಯಿಗಳ ಕೈಗಳು ಶಕ್ತಿಯುತವಾಗಲಿ ಸಾಹಿತ್ಯದ ಬೆಳಕು ಬೆಳಗಲಿ ಎಂದರು. ಕೃತಿ ರಚಿಸಿದ ರೇಣುಕಾಜಾಧವ ಮಾತನಾಡಿ ನನ್ನ ಕೃತಿಗಳು ನಾನು ಎದುರಿಸಿದ ಜೀವನದ ಅನುಭವಗಳ ಆಗರವೇ ಈ

ಕೃತಿಯಲ್ಲಿಅಡಗಿವೆ. ಇದಕ್ಕೆ ನನ್ನ ಮನದಾಳದ ನೆನಪುಗಳು ಮತ್ತು ಹಲವಾರು ಹಿರಿಯರ ಆಶೀರ್ವಾದ ಕೃತಿರಚಿಸಲು ಸಹಕಾರಿಯಾಗಿದೆಎನ್ನುತ್ತಾ ಹಿರಿಯರನ್ನು ಲೇಖಕಿಯರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ನೀಲಗಂಗಾ ಚರಂತಿಮಠ,ಸುನಂದಾಎಮ್ಮಿ, ಜಯಶೀಲಾ ಬ್ಯಾಕೋಡ, ಇಂದಿರಾ

ಮೋಟೆಬೆನ್ನೂರ, ಜ್ಯೋತಿ ಬದಾಮಿ, ಶಾಲಿನಿ ಚೀನಿವಾಲರ, ಶೈಲಜಾ ಭಿನ್ಗೆ, ಜಯಶ್ರೀ ನಿರಾಕಾರಿ,ಸುಮಾಕಿತ್ತೂರ,ಸರ್ವಮಂಗಲಾ ಅರಳಿಮಟ್ಟಿ, ಸೋನಿ ಜಾಧವ,ಭುವನೇಶ್ವರಿ,ಉಮಾ ಸೋನೋಳ್ಳಿ, ಅನ್ನಪೂರ್ಣ ಹಿರೇಮಠ, ಶ್ರೀರಂಗ ಜೋಷಿ ಬಸವರಾಜಗಾರ್ಗಿ, ಆರ್. ಎಸ್. ಚಾಪಗಾವಿ,ಎಂ.ವೈ.

ಮೆಣಸಿನಕಾಯಿ, , ಎ.ಎ. ಜಾಧವ, ಮಧುಕರಗುಂಡೇನಟ್ಟಿ, ಆತ್ರೆಯ, ಆತ್ರಿಕೆ, ಶಿವಾನಂದ ತಲ್ಲೂರ,ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದಆರಂಭದಲ್ಲಿ ಮಹಾನಂದಾ ಪಾರುಶೆಟ್ಟಿ ಪ್ರಾರ್ಥಿಸಿದರು. ರಾಜನಂದಾಘಾರ್ಗಿ ಸ್ವಾಗತಿಸಿದರು. ಆಶಾ ಯಮಕನಮರಡಿಕಾರ್ಯಕ್ರಮವನ್ನು ನಿರೂಪಿಸಿದರು. ಇಂದಿರಾ ಮೋಟೆಬೆನ್ನೂರ ವಂದಿಸಿದರು.

📱 Read Top News, Belgaum News Updates, Belagavi News in Kannada, Latest News on News Belgaum