Belagavi News In Kannada | News Belgaum

ಅಂಬಾನಿ, RSS ಪದಾಧಿಕಾರಿಗಳ ಡೀಲ್ ಕ್ಲಿಯರ್ ಮಾಡಿದ್ರೆ 300 ಕೋಟಿ ಆಮಿಷ : ರಾಜ್ಯಪಾಲ ಸತ್ಯಪಾಲ್

🌐 Belgaum News :

ಹೊಸದಿಲ್ಲಿ : ಮೇಘಾಲಯದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ನಾನು ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ಅಂಬಾನಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪದಾಧಿಕಾರಿಯೋರ್ವರ ಡೀಲ್‌ ಗಳನ್ನು ಕ್ಲಿಯರ್‌ ಮಾಡಿದರೆ 300 ಕೋಟಿ ನೀಡುವುದಾಗಿ ಆಮಿಷವೊಡ್ಡಲಾಗಿತ್ತು ಎಂದು ಹೇಳಿದ್ದಾರೆ. 2018ರ ಆಗಸ್ಟ್‌ ನಿಂದ ಜಮ್ಮುಕಾಶ್ಮೀರದಲ್ಲಿ ರಾಜ್ಯಪಾಲರಾಗಿ ನಿಯುಕ್ತಿಗೊಂಡಿದ್ದ ಮಲಿಕ್‌ 2019ರ ಅಕ್ಟೋಬರ್‌ ನಲ್ಲಿ ಗೋವಾಗೆ ವರ್ಗಾವಣೆಗೊಂಡಿದ್ದರು.

“ನಾನು ಜಮ್ಮುಕಾಶ್ಮೀರಕ್ಕೆ ರಾಜ್ಯಪಾಲನಾಗಿ ನಿಯುಕ್ತಿಗೊಂಡ ಕೂಡಲೇ ನನ್ನ ಬಳಿ ಎರಡು ಫೈಲ್‌ ಗಳು ಬಂತು. ಒಂದರಲ್ಲಿ ಅಂಬಾನಿ ಭಾಗಿಯಾಗಿದ್ದರು. ಇನ್ನೊಂದರಲ್ಲಿ ಆರೆಸ್ಸೆಸ್‌ ನ ಪ್ರಮುಖ ಪದಾಧಿಕಾರಿಯೊಬ್ಬರಿದ್ದರು. ಇವುಗಳನ್ನು ಕ್ಲಿಯರ್‌ ಮಾಡಿದರೆ ಒಂದು ಫೈಲ್‌ ಗೆ 150ಕೋಟಿ ರೂ.ನಂತೆ ದೊರಕುತ್ತದೆ ಎಂದು ಕಾರ್ಯದರ್ಶಿಗಳು ನನಗೆ ಹೇಳಿದ್ದರು. ಆ ಸಂದರ್ಭದಲ್ಲಿ ʼನಾನಿಲ್ಲಿಗೆ ಬಂದಿದ್ದು 5 ಕುರ್ತಾ ಪೈಜಾಮದೊಂದಿಗೆ, ನಾನು ಅದರ ಜೊತೆಗೆ ಹಿಂದಿರುಗುತ್ತೇನೆʼ ಎಂದು ಹೇಳಿಕೆ ನೀಡಿದೆ. ಆ ಎರಡೂ ಫೈಲ್‌ ಗಳನ್ನು ರದ್ದುಗೊಳಿಸಿದೆ.” ಎಂದು ಅವರು ಹೇಳುತ್ತಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.//////

📱 Read Top News, Belgaum News Updates, Belagavi News in Kannada, Latest News on News Belgaum