Belagavi News In Kannada | News Belgaum

ಈಜಲು ಹೋಗಿದ್ದ 11 ವರ್ಷದ ಇಬ್ಬರು ಬಾಲಕರು ಸಾವು

🌐 Belgaum News :

ರಾಮನಗರ : ತಾಲ್ಲೂಕಿನ ಕೆಂಚನಗುಪ್ಪೆ ಗ್ರಾಮದ ಕುಂಬಾರ ಕಟ್ಟೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವಿಗೀಡಾಗಿರುವ ಘಟನೆ ನಡೆದಿದೆ.

ಕೌಶಿಕ್ (11), ಕರಣ್ (12) ಮೃತ ಬಾಲಕರು. ಬಾಲಕರಿಬ್ಬರೂ ರಾಮನಗರ ‌ತಾಲೂಕಿನ ಬಿಡದಿ ಪಟ್ಟಣದ ನಿವಾಸಿಗಳು. ನಿನ್ನೆ ಗುರುವಾರ ಇಬ್ಬರೂ ಈಜಾಡಲು ಹೋಗಿದ್ದರು. ಕಟ್ಟೆಯಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ.

ರಾತ್ರಿ ಮನೆಗೆ ಬಾರದ ಹಿನ್ನೆಲೆ ಪೋಷಕರು ‌ಹುಡುಕಾಟ ನಡೆಸಿದ್ದರು. ಇಂದು ಕುಂಬಾರ ಕಟ್ಟೆಯಲ್ಲಿ ಬಾಲಕರ ಮೃತ ದೇಹಗಳು‌ ಪತ್ತೆಯಾಗಿವೆ. ಬಿಡದಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.///////

📱 Read Top News, Belgaum News Updates, Belagavi News in Kannada, Latest News on News Belgaum