Belagavi News In Kannada | News Belgaum

ಮಕ್ಕಳಿಗೆ ಶಿಕ್ಷಣ ಜತೆ ಸಂಸ್ಕಾರ ನೀಡಿ: ಶಿವಾನಂದ ಶ್ರೀ

🌐 Belgaum News :

ಚಿಕ್ಕೋಡಿ : ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆ  ಪಾಲಕರು ಒಳ್ಳೆಯ ಸಂಸ್ಕಾರ ಕಲಿಸಬೇಕು ಎಂದು ಎಂದು ಡೋಣವಾಡದ ದುರದುಂಡೇಶ್ವರಮಠದ ಶಿವಾನಂದ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಡೋಣವಾಡ ದುರದುಂಡೇಶ್ವರಮಠದಲ್ಲಿ ಶುಕ್ರವಾರ ಮಹಾನವಮಿಯ ನಿಮಿತ್ಯ ಹಮ್ಮಿಕೊಂಡಿದ್ದ,  ಶಾಂಭವಿದೇವಿಯ ಉಡಿ ತುಂಬುವುದು ಮತ್ತು ಮುತೈದೆಯರ ಉಡಿ ತುಂಬುವ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಮಠ,ಮಂದಿರಗಳಿಗೆ ಹೋಗುವುದರಿಂದ ಮಾನವನಲ್ಲಿ ಭಕ್ತಿ ಭಾವದ ಜತೆಗೆ ಉತ್ತಮ ಸಂಸ್ಕಾರ ಬೆಳೆಯುತ್ತದೆ. ಮಠಾಧೀಶರ ಮಾತು ಕೇಳಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಬದುಕು ಸಾಗಿಸಲು ಮುಂದಾಗಬೇಕು ಎಂದು ಹೇಳಿದರು.  ತಾಯಂದಿರು ಆಧಿ ಶಕ್ತಿಯ ಸ್ವರೂಪ. ತಾಯಂದಿರಲ್ಲಿ ಅದ್ಬುತ ಶಕ್ತಿ ಅಡಗಿದೆ ಎಂದರು.

ಮುರಗೋಡದ ಎಸ್.ಎಂ.ಪಟಾಥರ ಮಾತನಾಡಿ, ಡೋಣವಾಡದ ಶಿವಾನಂದ ಮಹಾಸ್ವಾಮಿಗಳು ಸರ್ವ ಸಮಾಜದ ಏಳ್ಗೆಗಾಗಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಸದಾ ಭಕ್ತರ ಒಳಿತನ್ನೇ ಬಯಸುತ್ತಿದ್ದಾರೆ. ಅಂತಹ ಶಿವಾನಂದ ಮಹಾಸ್ವಾಮಿಗಳ ದುರದುಂಡೇಶ್ವರ ಮಠಕ್ಕೆ ಭಕ್ತರ ಒಂದು ಸಮಿತಿ ಮಾಡಿಕೊಂಡು ಎಲ್ಲ ಭಕ್ತರು ಕೂಡಿಕೊಂಡು ಒಂದು ಬೃಹತ್ ಆಶ್ರಮ ನಿರ್ಮಾಣ ಮಾಡಲು ಸಂಕಲ್ಪ ಮಾಡೋಣ ಎಂದು ಹೇಳಿದರು.

ಮಾಜಿ ಗ್ರಾ.ಪಂ.ಸದಸ್ಯ ವಿರೂಪಾಕ್ಷಿ ಕವಟಗಿ ಮಾತನಾಡಿದರು. ಉದ್ಯಮಿ ಮಹಾದೇವ ಪಾಶ್ಚಾಪೂರೆ, ಸುರೇಶ ಪಾಟೀಲ, ದುಂಡಪ್ಪಾ ಸಂಬಾಜಿ, ನಾಗಪ್ಪಾ ಮಗದುಮ್ಮ, ಸದಾಶಿವ ಸವದಿ, ಸದಾಶಿವ ಬಾಗೇವಾಡಿ, ಪರಶುರಾಮ ಕವಟಗಿ ಮುಂತಾದವರು ಉಪಸ್ಥಿತರಿದ್ದರು. ಬಸವರಾಜ ಮಂಟೂರ ಸ್ವಾಗತಿಸಿ, ನಿರೂಪಿಸಿದರು./////

📱 Read Top News, Belgaum News Updates, Belagavi News in Kannada, Latest News on News Belgaum