Belagavi News In Kannada | News Belgaum

ಹಾನಗಲ್ ಉಪಚುನಾವಣಾ ಅಖಾಡಕ್ಕಿಳಿದ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ

🌐 Belgaum News :

 

ಹಾನಗಲ್: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಪುತ್ರ ಹಾಗೂ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿಯವರು ಇಂದಿನಿಂದ ಹಾನಗಲ್ ಉಪಚುನಾವಣಾ ಅಖಾಡಕ್ಕಿಳಿದಿದ್ದಾರೆ.

ಹಾನಗಲ್ ಮತಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ತಂದೆ ಸತೀಶ ಜಾರಕಿಹೊಳಿಯವರಿಗೆ ಪುತ್ರ ರಾಹುಲ್ ನೆರವಾಗುತ್ತಿದ್ದಾರೆ. ತಂದೆಯೊಂದಿಗೆ ಎಲ್ಲೆಡೆಯೂ ಪ್ರಚಾರದಲ್ಲಿ ತೊಡಗಿದ್ದಾರೆ.

ಯುವ ಮತಗಳನ್ನು ಸೆಳೆಯುತ್ತಿರುವ ರಾಹುಲ್:
ರಾಹುಲ್ ಅವರು ಇಂದು ಮತಕ್ಷೇತ್ರದ ಬೊಮ್ಮನಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಾದಾಮಗಟ್ಟ, ಅಕ್ಕಿಆಲೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಅಕ್ಕಿವಳ್ಳಿ ಗ್ರಾಮ ಸೇರಿ ವಿವಿಧ ಗ್ರಾಮಗಳಲ್ಲಿ ನಡೆದ ಪ್ರಚಾರ ಸಭೆಯಲ್ಲಿ ತಂದೆ ಸತೀಶ ಜಾರಕಿಹೊಳಿಯವರೊಂದಿಗೆ ಪಾಲ್ಗೊಂಡಿದ್ದರು.

ಪ್ರಚಾರದಲ್ಲಿ ರಾಹುಲ್ ಅವರು ಯುವ ಮತಗಳನ್ನು ಸೆಳೆಯುವ ಕಾರ್ಯ ಮಾಡುತ್ತಿದ್ದು, ಪ್ರಚಾರಕ್ಕೆ ಹೋದೆಲ್ಲೆಲ್ಲ ಅವರು ಯುವಕರನ್ನು ಆಕರ್ಷಿಸುತ್ತಿದ್ದಾರೆ. ಜೊತೆಗೆ ಆಯಾ ಗ್ರಾಮಗಳಲ್ಲಿನ ಯುವಕರೊಂದಿಗೆ ಚರ್ಚಿಸಿ, ಯುವ ನೇತಾರರಾದ ಶ್ರೀನಿವಾಸ್ ಮಾನೆ ಅವರಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಪಕ್ಷದ ಯುವ ಕಾರ್ಯಕರ್ತರಲ್ಲೂ ಕೂಡ ರಾಹುಲ್ ಅವರು ಉತ್ಸಾಹ ತುಂಬುತ್ತಿದ್ದಾರೆ. ತಮಗೆ ಗೊತ್ತಿರುವ ಕೆಲವು ವಿಷಯಗಳನ್ನು ಅವರು ಕಾರ್ಯಕರ್ತರಿಗೆ ತಿಳಿಸಿದರೇ, ತಮಗೆ ಗೊತ್ತಿರದ ವಿಷಯಗಳನ್ನು ಕಾರ್ಯಕರ್ತರಿಂದ ಕೇಳಿ ತಿಳಿದುಕೊಳ್ಳುತ್ತಿದ್ದಾರೆ.

ಚುನಾವಣಾ ಅಖಾಡಕ್ಕೆ ರಾಹುಲ್ ಅವರ ಆಗಮನದಿಂದ ಹಾನಗಲ್ ಯುವ ಕಾಂಗ್ರೆಸ್ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಯುವ ಕಾರ್ಯಕರ್ತರು ಕೂಡ ಉತ್ಸಾಹದಿಂದ ಪ್ರಚಾರದಲ್ಲಿ ತೊಡಗಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum