Belagavi News In Kannada | News Belgaum

ತಪಸ್ವಿ ಎಂದೆಲ್ಲಾ ಖ್ಯಾತಿ ಪಡೆದಿರುವ ‘ವಾಲ್ಮೀಕಿ’ ಒಂದು ರೀತಿಯಲ್ಲಿ ಸರ್ವತೋಮುಖ ಚಿಂತಕರಾಗಿದ್ದಾರೆ ಎಂದು ಪ್ರಾಚಾರ್ಯ

🌐 Belgaum News :

ಶೇಡಬಾಳ : ವಾಲ್ಮೀಕಿ ಪ್ರಪಂಚದ ಚರಿತ್ರೆಯಲ್ಲಿ ಮಿನುಗಿದ ದ್ರುವತಾರೆ, ಆದಿಕವಿ, ಕವಿಪುಂಗವ, ತಪಸ್ವಿ ಎಂದೆಲ್ಲಾ ಖ್ಯಾತಿ ಪಡೆದಿರುವ ‘ವಾಲ್ಮೀಕಿ’ ಒಂದು ರೀತಿಯಲ್ಲಿ ಸರ್ವತೋಮುಖ ಚಿಂತಕರಾಗಿದ್ದಾರೆ ಎಂದು ಪ್ರಾಚಾರ್ಯ ಪ್ರೊ.ವಿ.ಎಸ್.ತುಗಶೆಟ್ಟಿಯವರು ಅಭಿಪ್ರಾಯಿಸಿದರು.

ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ನಡೆದ ವಾಲ್ಮೀಕಿ ಜಯಂತಿಯ ಅಧ್ಯಕ್ಷತೆಯನ್ನು ವಹಿಸಿ ವಾಲ್ಮೀಕಿ ಹುಟ್ಟಿನಿಂದ ಬೇಡನಾಗಿದ್ದರು ಮುನಿಗಳ ಕೃಪಾರ್ಶೀವಾದದಿಂದ ಬದಲಾಗಿ ವಿಶ್ವವೇ ಹೆಮ್ಮೆಪಡುವ ಕೃತಿಯನ್ನು ರಚನೆಮಾಡಿದ್ದಾರೆ. ವಾಲ್ಮೀಕಿ ರಚಿತ ರಾಮಾಯಣವು 24000 ಸಾವಿರ ಶ್ಲೋಕಗಳಿಂದ ಹಾಗೂ ಏಳು ಕಾಂಡಗಳಿಂದ ಕೂಡಿದ ಶ್ರೇಷ್ಠ ಮಹಾಕಾವ್ಯವಾಗಿದೆ ಎಂದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಆರ್.ಎಸ್.ಕಲ್ಲೋಳಿಕರ ವಾಲ್ಮೀಕಿ ಓರ್ವ ದರೋಡೆಕೋರನಾಗಿದ್ದು ಮುಂದಿನ ಜೀವನದ ಬದಲಾವಣೆಯ ಸಮಯದಲ್ಲಿ ರಾಮಾಯಣವನ್ನು ಬರೆದಿದ್ದು ಜಗತ್ತಿನ ಮಹಾಕಾವ್ಯಗಳ ಸಾಲಿನಲ್ಲಿ ಇದಕ್ಕೆ ಪ್ರಮುಖ ಸ್ಧಾನ ಲಭಿಸಿದೆ. ವಾಲ್ಮೀಕಿಯ ಮುಖೇನ ರಾಮಾಯಣವನ್ನು, ರಾಮಾಯಣವನ್ನು ವಾಲ್ಮೀಕಿ ಮುಖೇನ ಅರ್ಥೈಯಿಸಿಕೊಳ್ಳಬೇಕಾದ ತುರ್ತು ಇಂದಿಗೆ ಅಗತ್ಯವಾಗಿದೆ. ಹೀಗಾಗಿ ರಾಮಾಯಣ ಕಾವ್ಯವು ಕೇವಲ ಪೌರಾಣಿಕ ಚಿತ್ರಗಳನ್ನಷ್ಟೆ ವಿವರಿಸಿಲ್ಲ ಸಾಂದರ್ಭಿಕವಾಗಿ ಪ್ರಸ್ತುತ ಚಿತ್ರಣವೂ ಒಳಗೊಂಡಿದ್ದು ಇಡೀ ರಾಮಾಯಣದ ತುಂಬ ಅಗಲಿಕೆಯನ್ನೇ ನೋಡುತ್ತೇವೆ. ಶಾಪ, ಶಾಪ ವಿಮೋಚನೆಗಾಗಿ ಪಾತ್ರಗಳು ಪರದಾಡಿದ ರೀತಿಯನ್ನು ಗಮನಿಸಿದರೆ ಪ್ರಸ್ತುತ ದಿನಮಾನದಲ್ಲಿಯೂ ವ್ಯಕ್ತಿಗಳು ಈ ರೀತಿಯ ತೊಳಲಾಟದಲ್ಲಿ ಇರುವದನ್ನು ಗಮನಿಸುತ್ತೇವೆ. ಮಾ ನಿಷಾದಃ ಎನ್ನುವ ಒಂದು ಮಾರ್ಮಿಕ ನುಡಿ ರಾಮಾಯಣವನ್ನೇ ಸೃಷ್ಟಿಸಿತು ಎಂದು ಹೇಳಿದರು.

ಸಮಾರಂಭದ ಪ್ರಾರಂಭದಲ್ಲಿ ಪ್ರಾಚಾರ್ಯರಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಮಹಾವಿದ್ಯಾಲಯದ ಪ.ಪೂ.ಪ್ರಾಚಾರ್ಯರಾದ ಪ್ರೊ.ಪಿ.ಬಿ.ನಂದಾಳೆ, ಪದವಿ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಡಾ.ಎಸ್.ಎ.ಕರ್ಕಿ ಒಳಗೊಂಡಂತೆ ಪ.ಪೂ. ಮತ್ತು ಪದವಿ ಮಹಾವಿದ್ಯಾಲಯಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕರಾದ ಡಾ.ಎಸ್.ಪಿ.ತಳವಾರ ವಂದಿಸಿದರು, ಡಾ.ಎ.ಎಂ. ಜಕ್ಕಣ್ಣವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

 

📱 Read Top News, Belgaum News Updates, Belagavi News in Kannada, Latest News on News Belgaum