Belagavi News In Kannada | News Belgaum

ಲಸಿಕೆ ಪಡೆದು ಮನೆಗೆ ಮರಳುತ್ತಿದ್ದ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದು ಸಾವು

🌐 Belgaum News :

ಬೆಂಗಳೂರು : ದೇಶಾದ್ಯಂತ ಶತಕೋಟಿ ಲಸಿಕೀಕರಣದ ಸಂಭ್ರಮ ಆಚರಣೆಯಾದ ಬೆನ್ನಲ್ಲೇ ಲಸಿಕೆ ಪಡೆದ ಮಹಿಳೆಯೊಬ್ಬರು ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ.

ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿ ಮಂಗಳಾ (36) ಮೃತಪಟ್ಟವರು. ಶನಿವಾರ ಬೆಳಗ್ಗೆ ಹೆಗ್ಗನಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದು  ಮನೆಗೆ ಮರಳುತ್ತಿರುವ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಸಾರ್ವಜನಿಕರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳಾ ಮೃತಪಟ್ಟಿದ್ದಾರೆ. ಮಂಗಳ ಸಾವಿಗೆ ನಿಜವಾದ ಕಾರಣ ಏನು ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಲಸಿಕೆ ಪಡೆದ ಬಳಿಕ  ಈ ರೀತಿಯಾಗಿರುವುದರಿಂದ ಲಸಿಕೆಯಿಂದ ಘಟನೆಯಾಗಿರಬಹುದಾ  ಎಂದು ಹೇಳಲಾಗುತ್ತಿದೆ. ವೈದ್ಯಕೀಯ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಸಾವಿಗೆ ಏನು ಕಾರಣ ಅಂತ ನಿಖರವಾಗಿ ತಿಳಿಯಲಿದೆ.

ಸದ್ಯ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.//////

📱 Read Top News, Belgaum News Updates, Belagavi News in Kannada, Latest News on News Belgaum