Belagavi News In Kannada | News Belgaum

ಭಾರತ ತಂಡ ಒತ್ತಡದಲ್ಲಿದೆ ಎಂಬ ಪಾಕ್ ನಾಯಕನ ಹೇಳಿಕೆಗೆ ಫೋಟೊ ಮೂಲಕ ಟಾಂಗ್ ಕೊಟ್ಟ ಕಿಂಗ್ ಕೊಹ್ಲಿ

🌐 Belgaum News :

ದುಬೈ: ಐಸಿಸಿ ಟಿ20 ವಿಶ್ವಕಪ್ 2021ರ ರೋಚಕ ಕದನ ಅಕ್ಟೋಬರ್ 24 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಹೀಗಾಗಿಯೇ ಉಭಯ ದೇಶಗಳ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರ ನಡುವೆ ಮಾತು ಸಮರ ಮುಂದುವರೆದಿದೆ.

ಅದರಲ್ಲೂ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಂ ಕೆಲ ದಿನಗಳ ಹಿಂದೆಯಷ್ಟೇ ಈ ಬಾರಿ ನಾವೇ ಗೆಲ್ಲಲಿದ್ದೇವೆ ಎಂದು ಸಾರಿದ್ದಾರೆ. ಅಷ್ಟೇ ಅಲ್ಲದೆ ಭಾರತ ಹೆಚ್ಚಿನ ಒತ್ತಡದಲ್ಲಿದೆ. ಹೀಗಾಗಿ ಭಾರತದ ವಿರುದ್ದ ಗೆದ್ದೇ ಗೆಲ್ಲುತ್ತೇವೆ ಎಂದಿದ್ದಾರೆ.

ಇತ್ತ ಭಾರತ ತಂಡ ಒತ್ತಡದಲ್ಲಿದೆ ಎಂಬ ಪಾಕ್​ ನಾಯಕನ ಹೇಳಿಕೆ ಬೆನ್ನಲ್ಲೇ, ಪಾಕಿಸ್ತಾನದ ಮಾಜಿ ಕ್ರಿಕೆಟರುಗಳು ಕೂಡ ಟೀಮ್ ಇಂಡಿಯಾ ಒತ್ತಡದಲ್ಲಿದೆ ಎಂಬುದಕ್ಕೆ ಧ್ವನಿಗೂಡಿಸಿದ್ದಾರೆ. ಈ ಹೇಳಿಕೆಗಳು ವೈರಲ್ ಆಗುತ್ತಿದ್ದಂತೆ ಇತ್ತ ಸೋಷಿಯಲ್ ಮೀಡಿಯಾ ಮೂಲಕ ವಿರಾಟ್ ಕೊಹ್ಲಿ ಒಂದು ಒಂದೇ ಒಂದು ಪೋಸ್ಟ್ ಮೂಲಕ ಉತ್ತರ ನೀಡಿದ್ದಾರೆ.

ಈ ರೋಚಕ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ತಮ್ಮ ಭಾವಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ  ಭಾನುವಾರ ಮಹತ್ವದ ಪಂದ್ಯವಿದೆ. ನೀವು ನರ್ವಸ್ ಆಗಿದ್ದೀರಿ ಅಲ್ವಾ? ಎಂದು ಕೇಳಿರುವ ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಕೊಹ್ಲಿ ರೋನ್​ ಟಿಶರ್ಟ್ ಧರಿಸಿದ ಫೋಟೋ ಹಾಕಿ ಉತ್ತರ ನೀಡಿದ್ದಾರೆ. ಅಂದರೆ ಖಂಡಿತವಾಗಿಯೂ ಇಲ್ಲ ಎನ್ನುವ ಮೂಲಕ ಕೊಹ್ಲಿ ಟೀಮ್ ಇಂಡಿಯಾ ನಾಯಕ ಹಾಗೂ ತಂಡ ಟೆನ್ಶನ್​ನಲ್ಲಿದೆ ಎಂಬ ಹೇಳಿಕೆಗಳಿಗೆ ಒಂದೇ ಒಂದು ಫೋಟೋ ಮೂಲಕ ಉತ್ತರ ನೀಡಿದ್ದಾರೆ.

ಅಂದಹಾಗೆ ರೋನ್​ ಎಂಬುದು ವಿರಾಟ್ ಕೊಹ್ಲಿಯ ಲೈಫ್​ಸ್ಟೈಲ್ ಬ್ರಾಂಡ್ ಕೂಡ ಹೌದು. ಈ ಮೂಲಕ ಹೇಳಿಕೆಗಳನ್ನು ನೀಡುವವರಿಗೆ ಉತ್ತರ ಹಾಗೂ ತನ್ನ ಬ್ರಾಂಡ್​ನ ಪ್ರಚಾರ ಎರಡನ್ನೂ ಕೊಹ್ಲಿ ಒಂದೇ ಪೋಸ್ಟ್ ಮೂಲಕ ಮಾಡಿ ಮುಗಿಸಿದ್ದಾರೆ.

ಟಿ20 ವಿಶ್ವಕಪ್‌ನ ಭಾರತ-ಪಾಕ್ 5 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಟೀಮ್ ಇಂಡಿಯಾ ಪಾಕಿಸ್ತಾನವನ್ನು 5 ಬಾರಿ ಕೂಡ ಸೋಲಿಸಿದೆ. ಇನ್ನು ಉಭಯ ತಂಡಗಳು ಟಿ20ಯಲ್ಲಿ ಒಟ್ಟು 8 ಪಂದ್ಯಗನ್ನು ಆಡಿದ್ದು, ಅದರಲ್ಲಿ ಟೀಮ್ ಇಂಡಿಯಾ 7ರಲ್ಲಿ ಗೆದ್ದಿದೆ. ಹೀಗಾಗಿ ಈ ಬಾರಿ ಕೂಡ ಗೆಲ್ಲುವ ಫೇವರೇಟ್ ತಂಡವಾಗಿ ಭಾರತ ಮುಂಚೂಣಿಯಲ್ಲಿದೆ.

📱 Read Top News, Belgaum News Updates, Belagavi News in Kannada, Latest News on News Belgaum