Belagavi News In Kannada | News Belgaum

ನಿಧಿಯ ಆಸೆಗೆ ಪತ್ನಿಯನ್ನೇ ಬಲಿ ಕೊಟ್ಟ ವೈದ್ಯ : 9 ತಿಂಗಳ ನಂತರ ಬಯಲಾಯ್ತು ಡಾ.ಚನ್ನೇಶಪ್ಪ ಕಟ್ಟಿದ ಕತೆ

🌐 Belgaum News :

ದಾವಣಗೆರೆ : ನಿಧಿಯ ಆಸೆಗೆ ವೈದ್ಯನೋರ್ವ ಪತ್ನಿಯನ್ನೇ ಬಲಿ ಕೊಟ್ಟಿರುವ ಹೃದಯ ವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆ ರಾಮೇಶ್ವರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ ?

ಜಿಲ್ಲೆಯ ರಾಮೇಶ್ವರ ಗ್ರಾಮದ ಡಾ.ಚನ್ನೇಶಪ್ಪ ಮತ್ತು ಹಿರೇಕೆರೂರಿನ ಶಿಲ್ಪಾಗೆ ಎಂಬುವವರಿಗೆ 18 ವರ್ಷಗಳ ಹಿಂದೆ ಮದುವೆಯಾಗಿತ್ತು. ವೈದ್ಯನಾಗಿದ್ದರೂ ಕೂಡ ಪಾಪಿ ಪತಿಗೆ ನಿಧಿಯ ಆಸೆಗಾಗಿ 9 ತಿಂಗಳ ಹಿಂದೆಯೇ ವಾಮಾಚಾರದಿಂದ ಪತ್ನಿಯನ್ನು ಕೊಂದಿದ್ದಾನೆ ಎನ್ನಲಾಗಿದೆ.

ವೈದ್ಯನಿಗೆ ಕುಡಿತ, ಕ್ಯಾಸಿನೊ ಚಟ ಅಂಟಿಸಿಕೊಂಡಿದ್ದ ಆರೋಪಿ ಪತಿ ನಿಧಿ ಪಡೆದುಕೊಳ್ಳೊವ ಆಸೆಗೆ ಬಿದ್ದಿದ್ದನಂತೆ. ಇದರಿಂದ ಕೆಲ ಪೂಜಾರಿಗಳು ನಿಧಿಗಾಗಿ ಮಹಿಳೆ ಬಲಿಬೇಕು ಎಂದಿದ್ದರಂತೆ. ಇದಕ್ಕೆ ಒಪ್ಪಿಕೊಂಡ ಚನ್ನೆಶಪ್ಪ ತನ್ನ ಪತ್ನಿಯನ್ನೇ ಬಲಿ ಕೊಡಲು ಸಜ್ಜಾಗಿದ್ದ ಎನ್ನಲಾಗಿದೆ.

ಪತ್ನಿಯನ್ನು ಬಲಿ ಕೊಡಲು ಸಜ್ಜಾಗಿದ್ದ ಆರೋಪಿ ವೃತ್ತಿಯಲ್ಲಿ ವೈದ್ಯನಾಗಿದ್ದರಿಂದ ಔಷಧಿಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದ. ಈ ವೇಳೆ ಪತ್ನಿಗೆ ಹೈಡೋಸ್ ಇಂಜೆಕ್ಷನ್ ನೀಡಿ ಸಾಯಿಸಿದ್ದ. ಆ ಬಳಿಕ ತನ್ನ ಪತ್ನಿ ಲೋ ಬಿಪಿಯಿಂದಾಗಿ ಸಾವನ್ನಪ್ಪಿದ್ದಾಳೆ ಎಂದು ಕತೆ ಕಟ್ಟಿದ್ದ ಎನ್ನಲಾಗಿದೆ.

ಸಿಕ್ಕಿಬಿದ್ದಿದ್ದು ಹೇಗೆ ?

ವೈದ್ಯ ಡಾ.ಚನ್ನೇಶಪ, ನಿಮ್ಮ ಮಗಳು ತೀರಿ ಹೋಗಿದ್ದಾಳೆ ಅಂತಾ ಹೆಂಡತಿಯ ಪೋಷಕರಿಗೆ ಕರೆ ಮಾಡಿ ಹೇಳಿದ್ದಾನೆ. ಶಿಲ್ಪಾ ಪೋಷಕರು ಬಂದು ನೋಡಿದಾಗ ಭುಜಕ್ಕೆ ಸೂಜಿ ಚುಚ್ಚಿದ ಗಾಯಗಳಾಗಿರುವುದನ್ನು ಗಮನಿಸಿದ್ದಾರೆ. ಅನುಮಾನದಿಂದ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷೆ ಸೂಚಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದಾಗ ಸತ್ಯ ಬಯಲಾಗಿದೆ.//////

📱 Read Top News, Belgaum News Updates, Belagavi News in Kannada, Latest News on News Belgaum