Belagavi News In Kannada | News Belgaum

ಬಸವರಾಜ ಕಟ್ಟೀಮನಿಯವರ ಹುಟ್ಟೂರಿಗೆ ಸಾಹಿತಿ ಸರಜೂ ಕಾಟ್ಕರ್ ಭೇಟಿ : ಪುತ್ಥಳಿಗೆ ಮಾಲಾರ್ಪಣೆ

🌐 Belgaum News :

ಬೆಳಗಾವಿ : ಕನ್ನಡದ ಕ್ರಾಂತಿಕಾರ ಕಾದಂಬರಿಕಾರರೆಂದೇ ಪ್ರಖ್ಯಾತರಾಗಿರುವ ಬಸವರಾಜ ಕಟ್ಟೀಮನಿ ಅವರ ಹುಟ್ಟೂರಾದ ಗೋಕಾಕ ತಾಲ್ಲೂಕಿನ ಮಲಾಮರಡಿ ಗ್ರಾಮದಲ್ಲಿರುವ ಮನೆಗೆ ಸರಜೂ ಕಾಟ್ಕರ್ ಶನಿವಾರ ಭೇಟಿ ನೀಡಿ, ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಬಸವರಾಜ ಕಟ್ಟೀಮನಿಯವರ ಮಹಾ ನಿರ್ಗಮನದ ದಿನವಿಂದು. ಕಟ್ಟೀಮನಿಯವರು ಅಕ್ಟೋಬರ್ 23, 1989 ರಂದು ಈ ಜಗತ್ತಿಗೆ ಅಂತಿಮ ವಿದಾಯ ಹೇಳಿದ್ದರು. ಈ ದಿನ ಇತ್ತೀಚೆಗೆ ಪ್ರಕಟಗೊಂಡ ಸರಜೂ ಕಾಟ್ಕರ್ ಅವರ ಪುಸ್ತಕಗಳನ್ನು ಪುತ್ಥಳಿ ಎದುರು ಇಟ್ಟು ನಮಸ್ಕರಿಸಿದರು.

ನಾನು ವಿದ್ಯಾರ್ಥಿಯಾಗಿದ್ದಾಗ ಕಟ್ಟೀಮನಿ ಮತ್ತು ನಿರಂಜನ ಅವರ ಸಾಹಿತ್ಯದಿಂದ ಪ್ರಭಾವಿತನಾದವನು. ನನ್ನ ಬರವಣಿಗೆಯಲ್ಲಿ ಇವರಿಬ್ಬರ ಪ್ರಭಾವವು ಸಾಕಷ್ಟಿದೆ ಎಂದು ಸರಜೂ ಕಾಟ್ಕರ್ ಹೇಳಿದರು.

ಈ ಸಂದರ್ಭದಲ್ಲಿ ಡಾ ರಾಮಕೃಷ್ಣ ಮರಾಠೆ, ಶಿರೀಷ ಜೋಷಿ, ಡಾ ಎ.ಬಿ. ಘಾಟಗೆ, ಪ್ರೊ ಚಂದ್ರಶೇಖರ ಅಕ್ಕಿ, ಶಿವಕುಮಾರ ಕಟ್ಟೀಮನಿ ಹಾಗೂ ರಾಯನಗೌಡರ್, ವಿಠ್ಠಲ ಮಾಳಿಗಿ ಇದ್ದರು./////

📱 Read Top News, Belgaum News Updates, Belagavi News in Kannada, Latest News on News Belgaum