Belagavi News In Kannada | News Belgaum

ಸಾಲಬಾದೆ ತಾಳಲಾರದೆ ನೇಣು ಹಾಕಿಕೊಂಡು ವ್ಯಕ್ತಿ ಸಾವು

🌐 Belgaum News :

ಹುಕ್ಕೇರಿ : ಸಾಲಬಾದೆ ತಾಳಲಾರದೆ ನೇಣು ಹಾಕಿಕೊಂಡು ವ್ಯಕ್ತಿ ಸಾವು ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದಲ್ಲಿ ಗುರುಶಾಂತಯ್ಯ ಶಿವಲಿಂಗಯ್ಯ ಮಠಪತಿ ಸಾಕೀನ್ ಅವರಗೋಳ ಎನ್ನುವ ವ್ಯಕ್ತಿ ಖಾಸಗಿ ಬ್ಯಾಂಕಗಳಲ್ಲಿ ಲಕ್ಷಗಟ್ಟಲೆ ಸಾಲ ಮಾಡಿದ್ದ ಅತಿವೃಷ್ಟಿ ಅನಾವೃಷ್ಟಿ ಬೆಳೆಹಾನಿ ಕೋರೋನೋ ಹಿನ್ನಲೆ ಮರಳಿ ಸಾಲ ತುಂಬಲಾಗದೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಒಳಗಿನ ಚಿಲಕ ಹಾಕಿಕೊಂಡು ನೇಣು ಬಿಗಿದುದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಮೃತ ವ್ಯಕ್ತಿಗೆ ಪತ್ನಿ ಓರ್ವ ಮಗ ಹಾಗೂ ಮಗಳು ಇದ್ದು ಕೈಗಡ್ನ ಖಾಸಗಿ ಬ್ಯಾಂಕ ಹೀಗೆ ಜೀವನ ನಡೆಸಲು ಅಲ್ಪ ಸ್ವಲ್ಪ ಮಾಡಿದ್ದ ಆದರೆ ಸಾಲದ ಬಗ್ಗೆ ಮರಳಿ ತುಂಬಲು ಆಗದ ಕಾರಣ ಮನನೊಂದು ನೇಣು ಹಾಕಿಕೊಂಡಿದ್ದಾನೆ.ಸ್ಥಳಕ್ಕೆ ಹುಕ್ಕೇರಿ ಪೊಲೀಸರು ಎಎಸ್ಐ ಪಿಂಜಾರ ಹಾಗೂ ಮುಸಾ ಅತ್ತಾರ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum