Belagavi News In Kannada | News Belgaum

ಹವಾಮಾನ ವೈಪರಿತ್ಯದಿಂದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ : ಶಾಸಕ ಭೈರತಿ ಸುರೇಶ್ ಪ್ರಾಣಾಪಾಯದಿಂದ ಪಾರು

🌐 Belgaum News :

ಹಾವೇರಿ :  ಶಾಸಕ ಭೈರತಿ ಸುರೇಶ್ ಅವರ, ಹೆಲಿಕಾಪ್ಟರ್ ಹವಾಮಾನ ವೈಪರಿತ್ಯದಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ. ಈ ಮೂಲಕ ಶಾಸಕ ಭೈರತಿ ಸುರೇಶ್ ಪ್ರಣಾಪಾಯದಿಂದ ಪಾರಾಗಿದ್ದಾರೆ.

ಉಪ ಚುನಾವಣೆಯ ಪ್ರಚಾರಕ್ಕಾಗಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೆಲಿಕ್ಯಾಪ್ಟರ್ ನಲ್ಲಿ ತೆರಳುತ್ತಿದ್ದಂತ ಈ ವೇಳೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಸವನಾಳ ಗ್ರಾಮದ ಆಟದ ಮೈದಾನದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಹೀಗೆ ಹವಾಮಾನ ವೈಪರೀತ್ಯದಿಂದಾಗಿ ಅರ್ಧದಲ್ಲೇ ಬಸವಾಳ ಗ್ರಾಮದ ಆಟದ ಮೈದಾನದಲ್ಲಿ ಲ್ಯಾಂಡ್ ಆಗಿದ್ದರಿಂದ ಶಾಸಕ ಭೈರತಿ ಸುರೇಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಿಢೀರ್ ತಮ್ಮೂರಿನ ಆಟದ ಮೈದಾನದಲ್ಲಿ ಇಳಿದಂತ ಹೆಲಿಕ್ಯಾಪ್ಟರ್ ನೋಡಲು ಗ್ರಾಮಸ್ಥರ ದಂಡೇ ಬಸವನಾಳ ಗ್ರಾಮದಲ್ಲಿ ನೆರೆದಿತ್ತು.///////

📱 Read Top News, Belgaum News Updates, Belagavi News in Kannada, Latest News on News Belgaum