Belagavi News In Kannada | News Belgaum

ಗಗನಮುಖಿಯಾದ ಡಿಸೇಲ್, ಪೆಟ್ರೋಲ್ ಬೆಲೆ : ನ.5ರಂದು ಲಾರಿ ಮಾಲೀಕರಿಂದ ವಿಧಾನಸೌಧ ಮುತ್ತಿಗೆ

🌐 Belgaum News :

ಬೆಂಗಳೂರು : ರಾಜ್ಯ ಸರ್ಕಾರ ಶೀಘ್ರವೇ ಡೀಸೆಲ್ ದರ ಇಳಿಕೆ ಮಾಡದಿದ್ದರೆ ನ.5ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಫೆಡರೇಷನ್ ಆಫ್‌ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್‌ ಆಂಡ್ ಏಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ  ಹೇಳಿದ್ದಾರೆ.

ಕರೊನಾದಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದರೂ ಪ್ರತಿ ನಿತ್ಯ ಡೀಸೆಲ್ ದರ ಏರಿಕೆಯಾಗುತ್ತಿದೆ. ಸದ್ಯ ಲೀ.ಡೀಸೆಲ್‌ಗೆ 103 ರೂ.ಇದೆ. 2019ರ ಸೆಪ್ಟೆಂಬರ್‌ನಿಂದ ಈವರೆಗೆ ಡೀಸೆಲ್ ಮೇಲೆ ಒಟ್ಟಾರೆ 35 ರೂ.ಹೆಚ್ಚಳವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದಕ್ಕೆ ಹೆಚ್ಚುವರಿ ತೆರಿಗೆ ಹಾಕುತ್ತಿವೆ. ಇದರಿಂದ ಪ್ರತಿ ಕಿಮೀಗೆ 12 ರೂ.ಹೆಚ್ಚಿನ ಹೊರೆ ಬೀಳುತ್ತಿದೆ. ಕೂಡಲೆ ದರವನ್ನು ಇಳಿಸದಿದ್ದರೆ ವಿಧಾನಸೌಧ ಹಾಗೂ ಸಾರಿಗೆ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.

ಹೊಸ ವಾಹನಗಳು, ಬಿಡಿಭಾಗಗಳು, ಡೀಸೆಲ್ ಮತ್ತು ಟೋಲ್ ಸೇರಿ ಹಲವು ತೆರಿಗಳ ಭಾರದಿಂದ ಸರಕು ಸಾಗಣೆ ಉದ್ಯಮ ನಷ್ಟದಲ್ಲಿದೆ. ಸಾವಿರಾರು ಮಾಲೀಕರು ವಾಹನಗಳ ದಾಖಲೆಗಳನ್ನೇ ಸಾರಿಗೆ ಇಲಾಖೆಗೆ ಹಿಂತಿರುಗಿಸುತ್ತಿದ್ದಾರೆ. ಸರಕು ಸಾಗಣೆ ಉದ್ಯಮ ಶೇ.70 ಡೀಸೆಲ್ ಮೇಲೆ ಆವಲಂಬಿತವಾಗಿದೆ. ದರ ಏರಿಕೆಯಿಂದ ಮಾಲೀಕರು, ಚಾಲಕರು, ಹಮಾಲಿಗಳು ಹಾಗೂ ಮೆಕಾನಿಕ್‌ಗಳ ಕುಟುಂಬಗಳು ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ. ಸಾಲ ಮಾಡಿ ವಾಹನ ಖರೀದಿಸುವವರು ಸ್ಥಿತಿಯಂತೂ ಹೇಳತೀರದಾಗಿದೆ.ಪೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಿದೆ ಎಂದು ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಕೆ.ಎನ್.ಅಶ್ವಥ್ ತಿಳಿಸಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum