Belagavi News In Kannada | News Belgaum

ಅಸಂಘಟಿತ ವರ್ಗಗಳ ಕಾರ್ಮಿಕರ ನೊಂದಣಿಗೆ ಸೂಚನೆ

🌐 Belgaum News :

ಅಸಂಘಟಿತ ವರ್ಗಗಳ ಕಾರ್ಮಿಕರ ನೊಂದಣಿಗೆ ಸೂಚನೆ
ಬೆಳಗಾವಿ, ಅ.25 : ಕೇಂದ್ರ ಸರ್ಕಾರವು ಅಭಿವೃದ್ಧಿ ಪಡಿಸಿರುವ ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ ಕ್ರೋಡಿಕರಿಸಲು ಉದ್ದೇಶಿಸಿದ್ದು, ಅಕ್ಟೋಬರ್ 21 ರಿಂದ ಅಸಂಘಟಿತ ವರ್ಗಗಳ ಕಾರ್ಮಿಕರ ನೊಂದಣಿ ಪ್ರಾರಂಭವಾಗಿರುತ್ತದೆ.
ಆದ್ದರಿಂದ, ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಬರುವ ಚಮ್ಮಾರ ಕಾರ್ಮಿಕರು 16-59 ವಯೋಮಾನದ ಇ.ಎಸ್.ಎಪ್ ಸೌಲಭ್ಯ ಹೊಂದಿರದ ಹಾಗೂ ಆದಾಯ ತೆರಿಗೆ ಪಾವತಿಸದ ಚಮ್ಮಾರರು ಇಶ್ರಮ್      (esham.gov.in)

ಪೆÇೀರ್ಟಲ್ ನಲ್ಲಿ ಉಚಿತವಾಗಿ ನೊಂದಾಯಿಸಬಹುದು. ನೊಂದಣಿ ನಂತರ ಫಲಾನುಭವಿಗಳಿಗೆ ಸ್ಥಳದಲ್ಲೆ ಗುರುತಿನ ಚೀಟಿಯನ್ನು (Uಂಓ) ನ್ನು ಪಡೆಯಬಹುದು.
ನೊಂದಣಿ ಪ್ರಯೋಜನ:
ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳನ್ನು ಪಡೆಯಲು, ದತ್ತಾಂಶವು ಸರ್ಕಾರಕ್ಕೆ ಅಸಂಘಟಿತ ಕಾರ್ಮಿಕರಿಗೆ ವಿಶೇಷ ನೀತಿಗಳು ಹಾಗೂ ಯೋಜನೆಗಳನ್ನು ರೂಪಿಸಲು ಸಹಾಯಕ, ಒಂದು ವರ್ಷದ ಅವಧಿಗೆ ಪ್ರಧಾನ ಮಂತ್ರಿ ಸುರಕ್ಷಾ ಭಿಮ ಯೋಜನೆ ಪ್ರಯೋಜನ ಪಡೆಯಬಹುದು, ರಾಷ್ಟ್ರೀಯ ವಿಪತ್ತು ಅಥವಾ ಕೋವಿಡ್-19 ಸಾಂಕ್ರಾಮಿಕ ಪಿಡುಗಿನಂತ ಪರಿಸ್ಥಿತಿಯಲ್ಲಿ ಅರ್ಹ ಕಾರ್ಮಿಕರಿಗೆ ನೆರವು ನೀಡಲು ದತ್ತಾಂಶವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಡಾ. ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಮಂಡಳಿಯ ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಪ್ಲ್ಯಾಸ್ಟಿಕ ಮುಕ್ತ ಭಾರತ ಮಾಡಲು ಕೈ ಜೊಡಿಸೊಣಾ: ಜಿಲ್ಲಾ ಯುವ ಅಧಿಕಾರಿ ರೋಹಿತ ಕಲರಾ

ಬೆಳಗಾವಿ, ಅ.25 : ಪ್ಲ್ಯಾಸ್ಟಿಕ ಮುಕ್ತ ಭಾರತ ಮಾಡಲು ಎಲ್ಲರೂ ಕೈ ಜೋಡಿಸೊನಾ, ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛ ಮಾಡಿ, ಜನರಲ್ಲಿ ಜಾಗೃತಿ ಮೂಡಿಸೊನಾ, ನಿರುಪಯುಕ್ತ ಪ್ಲ್ಯಾಸ್ಟಿಕ ಸಂಗ್ರಹಿಸುವುದು ಈ ಅಭಿಯಾನದ ಉದ್ದೇಶ ಎಂದು ನೆಹರು ಯುವ ಕೇಂದ್ರ ಬೆಳಗಾವಿಯ ಜಿಲ್ಲಾ ಯುವ ಅಧಿಕಾರಿಗಳಾದ ರೋಹಿತ ಕಲರಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಬೆಳಗಾವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಳಗಾವಿ ಇವುಗಳ ಸಂಯುಕ್ತಾಶ್ರಯದಲ್ಲಿ 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸೋಮವಾರ(ಅ.25) ನಡೆದ ಸ್ವಚ್ಚ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಚ್ಛ ಭಾರತ ಅಭಿಯಾನವನ್ನು ನಮ್ಮ ದೇಶದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಅಕ್ಟೋಬರ್ 1 ರಿಂದ ಅಕ್ಟೋಬರ್ 31 ರ ವರೆಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಬಸವರಾಜ ವರವಟ್ಟಿ ಮಾತನಾಡಿ ಪ್ರತಿಯೊಬ್ಬರು ತಮ್ಮ ಮನೆ, ಕಛೇರಿ, ಸುತ್ತಮುತ್ತಲಿನ ಪರಿಸರ ಸ್ವಚ್ಛ ಮಾಡಿದರೆ ನಮ್ಮ ದೇಶ ಸ್ವಚ್ಚಗೊಳ್ಳುತ್ತದೆ. ಪ್ಲ್ಯಾಸ್ಟಿಕ ಬಳಕೆ ಕಡಿಮೆ ಮಾಡೋಣಾ, ಪ್ಲಾಸ್ಟಿಕ್ ಮರುಬಳಿಕೆ ಮಾಡಿ ಮುಕ್ತ ಭಾರತ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸೊಣಾ ಜೊತೆಗೆ ಜಾಗೃತಿ ಮೂಡಿಸುವ ಅಭಿಯಾನ ಎಲ್ಲರೂ ಪ್ರಮಾಣಿಕವಾಗಿ ಕೆಲಸಮಾಡಬೇಕಾಗಿದೆ, ಕೇವಲ ಒಂದು ದಿನ ಸ್ವಚ್ಚತೆ ಮಾಡದೆ ಪ್ರತಿದಿನವು ಸ್ವಚ್ಚತೆಯನ್ನು ಮಾಡಬೇಕು ಎಂದು ತಿಳಿಸಿದರು.
ಈ ಸ್ವಚ್ಛತಾ ಅಭಿಯಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರಾದ ಆದರ್ಶ, ಗಂಗಾಧರ, ಅಕ್ಷಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿರಿದ್ದರು ಎಂದು ಬೆಳಗಾವಿಯ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ರೋಹಿತ ಕಲರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum