Belagavi News In Kannada | News Belgaum

ಬೆಳಗಾವಿಯಲ್ಲಿ ಇಂದು ಎಂಇಎಸ್ ಪುಂಡಾಟಿಕೆ ಮೆರೆದ ಬೆನ್ನಲ್ಲೇ ನಗರದ ಎಲ್ಲಾ ಕನ್ನಡಪರ ಸಂಘಟನೆಗಳು ಎಂಇಎಸ್ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಡೆಸಿದವು.

🌐 Belgaum News :

ಬೆಳಗಾವಿಯಲ್ಲಿ ಇಂದು ಎಂಇಎಸ್ ಪುಂಡಾಟಿಕೆ ಮೆರೆದ ಬೆನ್ನಲ್ಲೇ ನಗರದ ಎಲ್ಲಾ ಕನ್ನಡಪರ ಸಂಘಟನೆಗಳು ಎಂಇಎಸ್ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಡೆಸಿದವು.


ಬೆಳಗಾವಿಯಲ್ಲಿಂದು ಎಮ್‍ಇಎಸ್ ಪ್ರತಿಭಟನೆ ಬೆನ್ನಲ್ಲೇ ಕನ್ನಡಪರ ಸಂಘಟನೆಗಳ ಪಿತ್ತ ನೆತ್ತಿಗೇರಿದೆ. ಇಂದು ಬೆಳಗಾವಿ ನಗರದ ಎಲ್ಲಾ ಕನ್ನಡಪರ ಸಂಘಟನೆಗಳು ಎಂಇಎಸ್ ವಿರುದ್ಧ ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಿ ಅದ್ಧೂರಿ ರಾಜ್ಯೋತ್ಸವಕ್ಕೆ ಅವಕಾಶ ನೀಡಬೇಕೆಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

 

ಈ ವೇಳೆ ಮಾತನಾಡಿದ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಮಾತನಾಡಿ, ಎಂಇಎಸ್‍ನವರು ಕರ್ನಾಕದ ವಿರುದ್ಧ ಎಷ್ಟೋ ಹೇಳಿಕೆಗಳನ್ನು ನೀಡಿದ್ದಾರೆ.

 

ಕಳೆದ 40 ನವರ್ಷಗಳಿಂದ ಕರ್ನಾಟಕದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಈ ಕುರಿತಂತೆ ಎಂಇಎಸ್‍ನವರಿಗೆ ಯಾವುದೇ ರೀತಿಯ ಶಿಕ್ಷೆಯಾಗಿಲ್ಲ. ಈ ಕುರಿತಂತೆ ಕರ್ನಾಟಕ ಸರಕಾರ ತಾನೇ ಆತ್ಮವಿಮರ್ಷೆ ಮಾಡಿಕೊಳ್ಳಬೇಕು. ಎಂಇಎಸ್ ನಾಯಕರ ಹೇಳಿಕೆ, ಅಪಪ್ರಚಾರ ಕುರಿತಂತೆ ಸರಕಾರ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಕಾನೂನಿನ ಕ್ರಮಗಳೇನಿದ್ದರೂ ನಮಗೇ ಹೇಳುತ್ತಾರೆಂದು ಆಕ್ರೋಶ ಹೊರಹಾಕಿದರು.

ಇನ್ನು ಬೆಳಗಾವಿಯ ರಾಜ್ಯೋತ್ಸವಕ್ಕೆ ಅದ್ಧೂರಿ ಮೆರವಣೆಗೆಗೆ ಅವಕಾಶ ನೀಡಬೇಕು. ಬೆಳಗಾವಿಯ ಜನತೆ ಸರಕಾರಕ್ಕೆ ಅಭೂತಪೂರ್ವ ಬೆಂಬಲವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಕನ್ನಡಿಗರ ಏಕೈಕ ನಾಡಹಬ್ಬ ರಾಜ್ಯೋತ್ಸವಕ್ಕೆ ಅದ್ಧೂರಿ ಮೆರವಣಿಗೆಗೆ ಅವಕಾಶವನ್ನು ಸರಕಾರ ತಾನಾಗಿಯೇ ನೀಡಬೇಕು. ಆದರೆ ನಾವಾಗಿಯೇ ಕೇಳಿ ಪಡೆಯುವಂತಾಗಿರುವುದು ದುರಾದೃಷ್ಟದ ಸಂಗತಿ ಎಂದರು.

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರರಾದ ಶ್ರೀನಿವಾಸ ತಾಳುಕರ್, ನಾವು ರಾಜ್ಯೋತ್ಸವ ಆಚರಣೆಗೆ ಯಾವ ಸರಕಾರದ ಅನಿಮತಿಯನ್ನೂ ಪಡೆಯುವುದಿಲ್ಲ. ಈಗಾಗಲೇ ಎರೆಡೆರಡು ಡೋಸ್ ಕೊರೊನಾ ಲಸಿಕೆಯನ್ನು ಪಡೆದಿದ್ದೇವೆ. ಇನ್ನು ರಾಜ್ಯೋತ್ಸವದ ದಿನದಂದು ಕೊರೊನಾ ನಿಯಮಗಳನ್ನು ಪಾಲಿಸಿ ಅದ್ಧೂರಿ ಮೆರವಣಿಗೆ ಮಾಡಲಾಗುವುದು. ರಾಜ್ಯದ ಎಲ್ಲಾ ಯುವಕರು ಕೊರೊನಾ ನಿಯಮಗಳನ್ನು ಪಾಲಿಸಿ ಕಾನೂನು ಚೌಕಟ್ಟಿನ ಒಳಗೆ ರಾಜ್ಯೋತ್ಸವವನ್ನು ಆಚರಿಸಬೇಕೆಂದು ಈ ದಮದರ್ಭದಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಆರ್‍ಟಿಐ ಕಾರ್ಯಕರ್ತರಾದ ಭೀಮಪ್ಪ ಗಡಾದ್, ದೀಪಕ್ ಗುಡಗನಟ್ಟಿ, ವಾಜೀದ್ ಹಿರೇಕೋಡಿ ಬಾಳಪ್ಪಾ ಗುಡಗೆನಟ್ಟಿ ಮಾಂತೆಶ ರಣಗಟಿಮಠ  ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum