Belagavi News In Kannada | News Belgaum

ನೂತನ ಶಾಲಾಕೊಠಡಿಗಳ ಉದ್ಘಾಟಿಸಿದ ಶಾಸಕ ಶ್ರೀಮಂತ ಪಾಟೀಲ್

🌐 Belgaum News :

 

ಕಾಗವಾಡ: ಮತಕ್ಷೇತ್ರದ ವ್ಯಾಪ್ತಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಲೋಕುರ ಗ್ರಾಮದಲ್ಲಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನೂತನ 3 ಕೋಣೆ ಹಾಗೂ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ 1 ಕೋಣೆಗಳ ಕಟ್ಟಡದ ಉದ್ಘಾಟನೆ ಹಾಗೂ ಫರೀದಖಾನವಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರು ಕೋಣೆ ಹಾಗೂ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೋಣೆಗಳ ಉದ್ಘಾಟನಾ ಸಮಾರಂಭವನ್ನು ಕಾಗವಾಡ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀಮಂತ ಪಾಟೀಲ ಅವರು ಭಾಗವಹಿಸಿ, ಉದ್ಘಾಟನೆ ನೆರವೇರಿಸಿದರು

ಈ ವೇಳೆ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಶಾಸಕರು,ನಾನು ಶಾಸಕನಾದ ನಂತರ ಶಾಲೆಗಳ ಕೊಠಡಿಗಳನ್ನು ನೋಡಿ ಮೊದಲು ಶಿಕ್ಷಣಕ್ಕಿಂತ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಕಾಗವಾಡ ಮತಕ್ಷೇತ್ರದಲ್ಲಿಯೇ ಅತೀ ಹೆಚ್ಚು ಶಾಲಾಕೊಠಡಿಗಳನ್ನ ಸರ್ಕಾರದಿಂದ ಮಂಜೂರು ಮಾಡಿಸಿ ಒಳ್ಳೆಯ ಶಿಕ್ಷಣಕ್ಕಾಗಿ ಈಗ ಈ ಕೊಠಡಿಗಳನ್ನ ಉಪಯೋಗಕ್ಕೆ ಬರುತ್ತಿದ್ದು,ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ ನನ್ನ ಮತಕ್ಷೇತ್ರದಲ್ಲಿ ವಿಶೇಷವಾಗಿ ಮಕ್ಕಳ ಶಿಕ್ಷಣದ ಬಗ್ಗೆ ನಾನು ಶಾಸಕನಾದ ಮೇಲೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಇದರಿಂದ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಇದು ನನ್ನ ಕನಸು ಕೂಡ ಆಗಿದೆ ಇದರ ಜೊತೆಗೆ ಪ್ರತಿ ಶಾಲೆಗಳಲ್ಲಿ ಶಾಲೆಯ ಮಕ್ಕಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಉದ್ದೇಶದಿಂದ ಪ್ರತಿಯೊಂದು ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಂಜೂರುಗೊಳಿಸಿ,ಲೋಕುರ,ಫರೀದಖಾನವಾಡಿ ಶಾಲೆಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ ಎಂದರು

ಈ ಸಮಯದಲ್ಲಿ ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಮ್ ಆರ್ ಮುಂಜೆ,ದೈಹಿಕ ಪರೀವೀಕ್ಷಕ ಸಿ.ಎಂ.ಸಾಂಗ್ಲಿ, ತಾಲೂಕು ಪಂಚಾಯತ್ ಸದಸ್ಯರಾದ ಸುಧಾಕರ ಭಗತ್,ಪಿಂಟು ಕಾಂಬಳೆ,ಪ್ರಫುಲ್ ಥೋರುಸೆ,ಸುನೀಲ ಕಟಗೇರಿ,ದಯಾನಂದ ಪಾಟೀಲ್,ಮುಖ್ಯೋಪಾಧ್ಯಾಯರಾದ ಬಿ.ಎಸ.ಜುಗುಳೆ.ಎಸ್.ಮಾಳಿ,ಅರುಣ ಜಯಗೊಂಡೆ,ಅಶೋಕ ಥೋರುಸೆ,ಸುರೇಶ ಶಿಂದೆ ನಾಗೇಶ ದಾನೋಳಿ,ಪರಶುರಾಮ ನಾಯಕ,ಸಚಿನ್ ಥೋರುಸೆ ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum