Belagavi News In Kannada | News Belgaum

ಕಾಳಿ ನದಿ: ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ ಶವ ಪತ್ತೆ

🌐 Belgaum News :

ದಾಂಡೇಲಿ:  ಕಾಳಿ ನದಿ ತೀರದಲ್ಲಿ ಮೀನು ಹಿಡಿಯಲು ನಾಪತ್ತೆಯಾದ ಯುವಕ ಮೃತದೇಹ ಪತ್ತೆಯಾಗಿದ್ದು,  ಮೊಸಳೆ ಬಾಯಲ್ಲಿ ಇದ್ದ ಬಾಲಕನ ಮೃತದೇಹವನ್ನು ಮೇಲಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ದಾಂಡೇಲಿಯ ವಿನಾಯಕ ನಗರದ ಬಾಲಕ ಮೋಹಿನ್ ಮೆಹಬೂಬ್ (15) ಈತನ ಮೃತ ದೇಹವನ್ನು ಮೂರು ದಿನಗಳ ನಂತರ ರಾಪ್ಟಿಂಗ್ ಪರಿಣಿತರ ತಂಡ ಪತ್ತೆ ಹಚ್ಚಲಾಗಿದೆ.  ರವಿವಾರ ಮಧ್ಯಾಹ್ನ ಮೀನು ಹಿಡಿಯಲು ಗಾಳ ಹಾಕಿ ಕುಳಿತ ಬಾಲಕನನ್ನು ಮೊಸಳೆ ಎಳೆದುಕೊಂಡು ಹೋಗಿದ್ದರಿಂದ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಜಂಗಲ್ ಲಾಡ್ಜ್ ತಂಡ ಹಾಗೂ ವಿಶೇಷ ಪರಿಣತಿ ಪಡೆದ ರಾಪ್ಟಿಂಗ್ ತಂಡ ರವಿವಾರ ಮತ್ತು ಸೋಮವಾರ ಹಗಲು ರಾತ್ರಿ ಸತತ ಕಾರ್ಯಾಚರಣೆ ನಡೆಸಿದರೂ ಬಾಲಕನ ಸುಳಿವು ದೊರಕಿರಲಿಲ್ಲ ಸೋಮವಾರ ಬೆಳಗ್ಗೆ ಕಾರ್ಯಾಚರಣೆಗೆ ಡ್ರೋನ್ ಕ್ಯಾಮೆರಾ ಸಹ ಬಳಕೆ ಮಾಡಲಾಗಿದ್ದು, ರಾಪ್ಟಿಂಗ್ ಪರಿಣಿತ ಯುವಕರ ತಂಡಕ್ಕೆ ಮೊಸಳೆ ಬಾಯಲ್ಲಿ ಇರುವ ಬಾಲಕನ ದೇಹ ಕಂಡು ಬಂದಿದ್ದು ವಿಶೇಷ ರೀತಿಯ ಸಾಹಸ ಕಾರ್ಯಾಚರಣೆ ಮೂಲಕ ಒಂದು ಕೈ ತುಂಡಾಗಿರುವ ಸ್ಥಿತಿಯಲ್ಲಿದ್ದ ಮೃತ ದೇಹವನ್ನು ಮೊಸಳೆ ಬಾಯಿಂದ ತಪ್ಪಿಸಿ ತರಲಾಗಿದೆ.

ನದಿ ತೀರದಲ್ಲಿ ನೂರಾರು ಜನ ಗ್ರಾಮಸ್ಥರು ಜಮಾವಣೆಗೊಂಡಿದ್ದು ಬಾಲಕನ ಕುಟುಂಬದವರ ರೋದನ ಮನ ಕಲುಕುವಂತಿತ್ತು. ಕಾರ್ಯಾಚರಣೆ ನಡೆಸಿದ ಯುವಕರ ಸಾಹಸಕ್ಕೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.///////

📱 Read Top News, Belgaum News Updates, Belagavi News in Kannada, Latest News on News Belgaum