Belagavi News In Kannada | News Belgaum

ಅ.30ಕ್ಕೆ ಉಪಚುನಾವಣೆ: ಹಾನಗಲ್, ಸಿಂದಗಿ ಕ್ಷೇತ್ರಗಳ ಮತದಾರರ ಅಂಕಿ-ಅಂಶ; ಸಂಪೂರ್ಣ ವಿವರ ಇಲ್ಲಿದೆ

🌐 Belgaum News :

ಬೆಂಗಳೂರು: ರಾಜ್ಯದಲ್ಲಿ ಹಾನಗಲ್ ಹಾಗೂ ಸಿಂದಗಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30 ರಂದು ಉಪಚುನಾವಣೆ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳು ಗೆಲ್ಲುವ ಪಣತೊಟ್ಟು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ.

ಕಾಂಗ್ರೆಸ್ ಪರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸೇರಿ ಅನೇಕ ನಾಯಕರು ಪ್ರಚಾರ ಕಣದಲ್ಲಿ ಪಾಲ್ಗೊಂಡಿದ್ದಾರೆ. ಬಿಜೆಪಿ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್, ಪ್ರಲ್ಹಾದ್ ಜೋಶಿ ಸೇರಿದಂತೆ ಇಡೀ ಸಚಿವ ಸಂಪುಟದ ಸಚಿವರೇ ಪ್ರಚಾರದಲ್ಲಿ ತೊಡಗಿದ್ದಾರೆ. ಜೆಡಿಎಸ್ ಪರವಾಗಿ ಎಚ್​.ಡಿ. ಕುಮಾರಸ್ವಾಮಿ, ಎಚ್.ಡಿ. ದೇವೇಗೌಡ ಪ್ರಚಾರ ಮಾಡಿದ್ದಾರೆ.

ಚುನಾವಣೆ ನಡೆಯಲಿರುವ ಹಾವೇರಿ ಜಿಲ್ಲೆಯ ಹಾನಗಲ್, ವಿಜಯಪುರ ಜಿಲ್ಲೆಯ ಸಿಂದಗಿ, ಎರಡು ವಿಧಾನಸಭಾ ಕ್ಷೇತ್ರಗಳ ಮತದಾರರ, ಜಾತಿವಾರು ಲೆಕ್ಕಾಚಾರ ಹಾಗೂ ಇತರ ಅಂಕಿ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದ ಮತದಾರರ ವಿವರ ಮತ್ತು ಜಾತಿವಾರು ಲೆಕ್ಕಾಚಾರ:
ಪುರುಷ ಮತದಾರರು: 105405
ಮಹಿಳಾ ಮತದಾರರು: 98798
ಇತರೆ ಮತದಾರರು: 03
ಸೇವಾ ಮತದಾರರು: 83
ಒಟ್ಟು ಮತದಾರರು: 204289

ಜಾತಿವಾರು ಲೆಕ್ಕಾಚಾರ:

ಲಿಂಗಾಯತ: 76000
ಮುಸ್ಲಿಂ: 34000
ಗಂಗಾಮತ: 28000
ಪರಿಶಿಷ್ಟ ಜಾತಿ: 25000
ಪರಿಶಿಷ್ಟ ಪಂಗಡ: 17000
ಕುರುಬ: 8000
ಮರಾಠಾ: 6000
ಒಬಿಸಿ: 10000
ಜೈನ್: 2000

ಅಭ್ಯರ್ಥಿಗಳ ವಿವರ:

ಕಾಂಗ್ರೆಸ್- ಶ್ರೀನಿವಾಸ್ ಮಾನೆ

ಬಿಜೆಪಿ- ಶಿವರಾಜ್ ಸಜ್ಜನರ್

ಜೆಡಿಎಸ್- ನಿಯಾಜ್ ಶೇಖ್

=======================

ಸಿಂದಗಿ ಉಪಚುನಾವಣೆ ಸಮರ, ಕ್ಷೇತ್ರದ ಮತದಾರರ ವಿವರ ಮತ್ತು ಜಾತಿವಾರು ಲೆಕ್ಕಾಚಾರ:

ಪುರುಷ ಮತದಾರರು: 1,20,949
ಮಹಿಳಾ ಮತದಾರರು: 1,13,327
ಇತರೆ ಮತದಾರರು: 33

ಒಟ್ಟು ಮತದಾರರು: 2,34,309

ಕ್ಷೇತ್ರದಲ್ಲಿ ಜಾತಿವಾರು ಮಾಹಿತಿ:
ಕುರುಬ ಸಮಾಜ: 37,000
ಗಾಣಿಗ: 31,000
ಪಂಚಮಸಾಲಿ: 22,000
ಮುಸ್ಲಿಂ: 38,000
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ: 55,000
ಕೋಳಿ ಕಬ್ಬಲಿಗ: 21,000
ಬಣಜಿಗ: 11,500
ಆದಿ ಬಣಜಿಗ: 4,000
ಜಂಗಮ: 6,500
ಕುಡಒಕ್ಕಲಿಗ: 3,500
ರೆಡ್ಡಿ: 3,500

 

ಅಭ್ಯರ್ಥಿಗಳ ವಿವರ:

ಕಾಂಗ್ರೆಸ್- ಅಶೋಕ ಮನಗೂಳಿ

ಬಿಜೆಪಿ- ರಮೇಶ ಭೂಸನೂರು

ಜೆಡಿಎಸ್- ನಾಜಿಯಾ ಶಕೀಲಾ ಅಂಗಡಿ//////

📱 Read Top News, Belgaum News Updates, Belagavi News in Kannada, Latest News on News Belgaum