Belagavi News In Kannada | News Belgaum

ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಆರೋಪಿ ಅಂಧರ್ : 1.5 ಲಕ್ಷ ರೂ. ಮೌಲ್ಯದ ಆಭರಣ ವಶಕ್ಕೆ

🌐 Belgaum News :

ಚಾಮರಾಜನಗರ: ಮನೆ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳು  ಮೂರು ತಿಂಗಳ ಬಳಿಕ ಪೊಲೀಸ್  ಕೈಗೆ ತಗಲಾಕೊಂಡಿದ್ದಾರೆ.  1.5 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ನಗರದ ಹೌಸಿಂಗ್‌ ಬೋರ್ಡ್‌ ಬಡಾವಣೆ ಯಲ್ಲಿ ಸೆ.7ರಂದು ಮನೆ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದರು.  ಪೊಲೀಸರು ತನಿಖೆ ಚುರುಕುಗೊಳಿಸಿ  ಮನೆಯಲ್ಲಿ ಕಳ್ಳತನ ಮಾಡಿದ್ದ
ಗಾಳಿಪುರ ಬಡಾವಣೆಯ ಸುಹೇಲ್ ಪಾಷ  ಬಂಧಿಸಿದ್ದಾರೆ.

ಈತನಿಂದ ಒಂದು ಜೊತೆ ಓಲೆ-ಜುಮುಕಿ, ಎರಡು ಉಂಗುರ, ಒಂದು ಸಿಂಗಲ್ ಓಲೆ, ಬೆಳ್ಳಿಯ ಕಾಲಿನ ಚೈನು, ಮೊಬೈಲ್, ಒಂದು ತಾಮ್ರದ ಬಿಂದಿಗೆ, ತಾಮ್ರದ ತಟ್ಟೆ, ಎರಡು ದೊಡ್ಡ ದೀಪಾಲೆ ಕಂಬ, ಗೋಲಕದಲ್ಲಿದ್ದ ಚಿನ್ನದ ನಾಣ್ಯ ಹಾಗೂ ಒಂದು ಕುಟಾಣಿ ಗೃಹಪಯೋಗಿ ವಸ್ತು ಸೇರಿದಂತೆ  1.5 ಲಕ್ಷ ರೂ . ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ ದಾಖಲಾಗಿ ಒಂದೂವರೆ ತಿಂಗಳಾದರೂ ಆರೋಪಿ ಪೊಲೀಸ್‌ ಕೈಗೆ ಸಿಕ್ಕಿರಲಿಲ್ಲ. ಇದೇ 23ರಂದು ಅಪರಾಧ ವಿಭಾಗದ ಸಿಬ್ಬಂದಿ ಗಸ್ತಿನಲ್ಲಿ ಇದ್ದ ಸಂದರ್ಭದಲ್ಲಿ ನಗರದ ಬುದ್ಧನಗರ ನೀರಿನ ಟ್ಯಾಂಕ್‌ ಹತ್ತಿರ, ಗಾಳಿಪುರ ಬಡಾವಣೆಯ ಸುಹೇಲ್‌ ಪಾಷ ಅನುಮಾನಸ್ಪದವಾಗಿ ಓಡಾಡುತ್ತಿದ್ದ.

ಪೊಲೀಸ್‌ ಸಿಬ್ಬಂದಿ ಅವರನ್ನು ತಡೆದು ವಿಚಾರಣೆಗೆ ಒಳಪಡಿಸಿದಾಗ ರೇವಣ್ಣ ಮನೆಯಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂತು. ಇದಲ್ಲದೇ ನಾಗೇಶ್‌, ವಿ.ಫಣೀಶ್‌ ಮನೆಗಳಲ್ಲಿ ಗೃಹಬಳಕೆ ವಸ್ತುಗಳನ್ನು ಕಳ್ಳತನ ಮಾಡಿರುವ ಬಗ್ಗೆ ಆರೋಪಿ ಬಾಯಿ ಬಿಟ್ಟರು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///////

📱 Read Top News, Belgaum News Updates, Belagavi News in Kannada, Latest News on News Belgaum