Belagavi News In Kannada | News Belgaum

ಬಿಜೆಪಿಗೆ ಮತ್ತೊಂದು ಶಾಕ್ : ಪಕ್ಷ ತೊರೆದು ಟಿಎಂಸಿ ಸೇರ್ಪಡೆಯಾದ ಶಾಸಕ

🌐 Belgaum News :

ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ದೀದಿಗೆ ಸೋಲುಣಿಸಿಯೇ ಸಿದ್ಧ ಎಂದಿದ್ದ ಪ್ರಧಾನಿ ಮೋದಿ ಹಾಗೂ ಅಮಿತ್​ ಶಾ ಪಡೆಗೆ ಪದೇ ಪದೇ ಆಘಾತ ಎದುರಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸಾಕಷ್ಟು ಶಾಸಕರು ಬಿಜೆಪಿಯಿಂದ ಟಿಎಂಸಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಕಲಿಗಂಜ್​ ಬಿಜೆಪಿ ಶಾಸಕ ಸೌಮೇನ್​ ರಾಯ್​, ಮುಕುಲ್​ ರಾಯ್​, ತನ್ಮಯ್​ ಘೋಷ್ , ಬಿಸ್ವಜಿತ್​ ದಾಸ್​​ ಸೇರಿದಂತೆ ಸಾಕಷ್ಟು ಕೇಸರಿ ಪಾಳಯದ ನಾಯಕರು ಟಿಎಂಸಿ ಕಡೆಗೆ ಮುಖ ಮಾಡಿದ್ದರು. ಇದೀಗ ಈ ಸಾಲಿಗೆ ರಾಯಗಂಜ್​ನ ಬಿಜೆಪಿ ಶಾಸಕ ಕೃಷ್ಣ ಕಲ್ಯಾಣಿ ಕೂಡ ಸೇರಿದ್ದಾರೆ.

ಕಾಮ್ಯಾಕ್​ ಬೀದಿಯಲ್ಲಿರುವ ಸೆನೆಟರ್​ ಹೋಟೆಲ್​ನಲ್ಲಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥಸಾರಥಿ ಹಾಗೂ ಶಾಸಕ ವಿವೇಕ್​ ಗುಪ್ತಾ ಸಮ್ಮುಖದಲ್ಲಿ ಕೃಷ್ಣ ಕಲ್ಯಾಣಿ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ. ಕಲ್ಯಾಣಿ ಕೃಷ್ಣ ಈ ತಿಂಗಳ ಆರಂಭದಲ್ಲಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದರು.

ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಕಲ್ಯಾಣಿ ಕೃಷ್ಣ ಟಿಎಂಸಿ ಸೇರ್ಪಡೆಯಾಗಲಿದ್ದಾರೆ ಎಂಬ ವಿಚಾರವಾಗಿ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಇಂದು ಊಹಾಪೋಹಗಳಿಗೆ ತೆರೆ ಎಳೆದಿರುವ ಕೃಷ್ಣ ಕಲ್ಯಾಣಿ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.//////

📱 Read Top News, Belgaum News Updates, Belagavi News in Kannada, Latest News on News Belgaum