Belagavi News In Kannada | News Belgaum

ಹಣದ ಆಸೆಗೆ ಜಲಾಂತರ್ಗಾಮಿ ಮಾಹಿತಿ ಸೋರಿಕೆ : ಕಮಾಂಡರ್‌ ಸೇರಿ 5 ಮಂದಿಯ ಬಂಧನ

🌐 Belgaum News :

ದೆಹಲಿ : ಭಾರತದ ಭವಿಷ್ಯದ ಜಲಾಂತರ್ಗಾಮಿ ಆಧುನಿಕರಣ ಯೋಜನೆಯ ಮಹತ್ವದ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನೌಕಾಪಡೆಯ ಕಮಾಂಡರ್‌ ಸೇರಿ ಐವರನ್ನು ಸಿಬಿಐ ಬಂಧಿಸಿದೆ. ಹಣದ ಆಸೆಯಿಂದ ದೇಶದ ಭದ್ರತೆಯ ಮಾಹಿತಿಯನ್ನು ಸೋರಿಕೆ ಮಾಡಿರುವ ಆರೋಪ ಇದೀಗ ಕೇಳಿಬಂದಿದೆ.

ಮುಂಬೈನಲ್ಲಿರುವ ಪಶ್ಚಿಮ ನೌಕಾ ಕಮಾಂಡ್‌ ನಲ್ಲಿ ಕಮಾಂಡರ್‌ ಆಗಿರುವ ಬಂಧಿತ ಆರೋಪಿಯು ಕಿಲೋ ಕ್ಲಾಸ್‌ ಜಲಾಂತರ್ಗಾಮಿ ನೌಕೆಯ ಆಧುನಿಕರಣ ಕುರಿತಾದ ಮಹತ್ವದ ಮಾಹಿತಿಯನ್ನು ಹಣಕ್ಕಾಗಿ ಅಕ್ರಮವಾಗಿ ಸೋರಿಕೆ ಮಾಡಿದ ಆರೋಪ ಕೇಳಿಬಂದಿದೆ. ನೌಕಾಪಡೆಯ ಕಮಾಂಡರ್‌ ರಾರಯಂಕ್‌ ಹಣಕ್ಕಾಗಿ ಮಾಹಿತಿ ಸೋರಿಕೆಯ ವಿಷಯವನ್ನು ಇಬ್ಬರು ನಿವೃತ್ತ ನೌಕಾ ಸಿಬ್ಬಂದಿ ಹಾಗೂ ಇಬ್ಬರು ಖಾಸಗಿ ವ್ಯಕ್ತಿಗಳ ಜೊತೆ ಚರ್ಚಿಸಿದ್ದಾನೆ. ಈ ಕುರಿತು ಮಾಹಿತಿ ತಿಳಿಯುತ್ತಿದಂತೆ ಸಿಬಿಐ ಅಧಿಕಾರಿಗಳು ಕಳೆದ 1 ತಿಂಗಳಿನಿಂದ ಖಾಸಗಿ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಕಳೆದ 1 ತಿಂಗಳಿನಿಂದ ವಿಚಾರಣೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ದೆಹಲಿ, ಮುಂಬೈ, ಹೈದರಾಬಾದ್‌ ಸೇರಿದಂತೆ 19 ಕಡೆಗಳಲ್ಲಿ ಶೋಧ ಕಾರ್ಯಚರಣೆಯನ್ನು ನಡೆಸಿದ್ದಾರೆ. ನಂತರ ಈ ಪ್ರಕರಣದ ಪ್ರಮುಖ ದಾಖಲೆ ಹಾಗೂ ಸಾಕ್ಷಾಧಾರಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಬಂಧಿತರ ಜೊತೆ ನಿರಂತರ ಸಂಪರ್ಕ ಹೊಂದಿರುವ ಹಲವು ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.//////

📱 Read Top News, Belgaum News Updates, Belagavi News in Kannada, Latest News on News Belgaum