Belagavi News In Kannada | News Belgaum

ಮರಾಠಿ ಶಿಕ್ಷಕ ವಿನಾಯಕ ಮೋರೆ ಕಂಠಸಿರಿಯಲ್ಲಿ ಕನ್ನಡ ಗೀತಗಾಯನ…

🌐 Belgaum News :

ನವೆಂಬರ್ ಕೊನೆಯ ವಾರ “ಕೈಗಾರಿಕಾ ಅದಾಲತ್”

ಬೆಳಗಾವಿ, ಅ.27 : ಬೃಹತ್ ಮತ್ತು ಮಾಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ ಇವರ ನೇತೃತ್ವದಲ್ಲಿ ಬೆಳಗಾವಿ ವಿಭಾಗ ಮಟ್ಟದ 7 ಜಿಲ್ಲೆಗಳ ಉದ್ದಿಮೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ” ಕೈಗಾರಿಕಾ ಅದಾಲತ್” ನ್ನು ನವೆಂಬರ್ 2021 ರ ಕೊನೆಯ ವಾರದಂದು ಏರ್ಪಡಿಸಲಾಗಿದೆ.
ಈ ಭಾಗದ ಉದ್ದಿಮೆಗಳ ಅಭಿವೃದ್ಧಿಗೆ ಹಾಗೂ ಸಮಸ್ಯೆಗಳ ನಿವಾರಣೆಗಾಗಿ ಸಂಬಂಧಪಟ್ಟ ಸರ್ಕಾರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಹಮ್ಮಿಕೊಳ್ಳಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 10 ಕೊನೆಯ ದಿನಾಂಕವಾಗಿದ್ದು, ಒಂದು ಅರ್ಜಿಯಲ್ಲಿ ಒಂದೇ ಸಮಸ್ಯೆಯನ್ನು ತಿಳಿಸಬೇಕು.

ಉದ್ದಿಮೆದಾರರು ಉದ್ದಿಮೆಗೆ ಸಂಬಂಧಿಸಿದ ಹಾಗೂ ಎದುರಿಸುತ್ತಿರುವ ಸಮಸ್ಯೆಗಳು/ ತೊಂದರೆಗಳು ಹಾಗೂ ಸಾಮಾನ್ಯ ಸಮಸ್ಯೆಗಳಾದ ನೀರು, ವಿದ್ಯುತ್ , ರಸ್ತೆ, ಒಳಚರಂಡಿ ಇತ್ಯಾದಿ ಮೂಲಭೂತ ಸೌಕರ್ಯಗಳ ಕುರಿತಂತೆ ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ಇನ್ನಿತರ ಸಮಸ್ಯೆಗಳು ಇದ್ದಲ್ಲಿ, ತಮ್ಮ ಸಮಸ್ಯೆಗಳನ್ನು ಈ ಕೈಗಾರಿಕಾ ಅದಾಲತ್ ನಲ್ಲಿ ಚರ್ಚಿಸಿ ಪರಿಹಾರ ಪಡೆಯಬಹುದು.
ಆದ್ದರಿಂದ, ಬೆಳಗಾವಿ ಜಿಲ್ಲೆಯ ಉದ್ದಿಮೆದಾರರು ತಮ್ಮ ಕೈಗಾರಿಕಾ ಘಟಕಗಳ ಸಮಸ್ಯೆಗಳ ಕುರಿತು ಸಂಪೂರ್ಣ ವಿವರಗಳನ್ನು ನಿಗದಿತ ನಮೂನೆ-1 ನ್ನು ಜಿಲ್ಲಾ ಕೈಗಾರಿಕಾ ಕೇಂದ್ರ, ಉದ್ಯಮಬಾಗ, ಬೆಳಗಾವಿ ಕಚೇರಿಯಲ್ಲಿ ಪಡೆದುಕೊಂಡು ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////

ಆಂತರಿಕ – ಬಾಹ್ಯ ಸ್ವಚ್ಛತೆಯಿಂದ ಮಾನಸಿಕ ನೆಮ್ಮದಿ

ಬೆಳಗಾವಿ, ಅ.27 : ಸ್ವಚ್ಛಭಾರತ ಅಭಿಯಾನದಲ್ಲಿ ಎಲ್ಲರೂ ಕೈ ಜೋಡಿಸೋಣಾ, ಪರಿಸರವನ್ನು ಸ್ವಚ್ಛವಾಗಿ ಇಡಲು ಜನರಲ್ಲಿ ಜಾಗೃತಿ ಮೂಡಿಸೋಣಾ, ಆಂತರಿಕ – ಬಾಹ್ಯ ಸ್ವಚ್ಚತೆಯಿಂದ ಮಾನಸಿಕ ನೆಮ್ಮದಿ ಸಿಗುವುದು ಮತ್ತು ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದದ ಜಂಟಿ ಕಾರ್ಯಕ್ರಮ ಇದಾಗಿದು,್ದ ಪ್ರತಿಯೊಬ್ಬರು ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ಗ್ರಾಮದ ಸ್ವಚ್ಚತೆ ಕಾಪಾಡಬೇಕೆಂದು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಅರುಣ ನಾಥ ಬುವಾ ಹೇಳಿದರು.
ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಬೆಳಗಾವಿ, ಸುಗ್ರಾಮ ಯುವಕ ಸಂಘ, ಗ್ರಾಮ ಪಂಚಾಯತ ಹೊಸವಂಟಮೂರಿ ಇವುಗಳ ಸಂಯುಕ್ತಆಶ್ರಯದಲ್ಲಿ 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸ್ವಚ್ಛತಾ ಜಾಗೃತಿ ಮತ್ತು ಶ್ರಮದಾನ ಕಾರ್ಯಕ್ರಮಕ್ಕೆ ಮಂಗಳವಾರ(ಅ.26) ಚಾಲನೆ ನೀಡಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಯರಾದ ಬಿ ಎಮ್ ದೊಡ್ಡನ್ನವರ ಮಾತನಾಡಿ ಪ್ರತಿಯೊಬ್ಬರು ತಮ್ಮ ಮನೆ, ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಮಾಡಬೇಕು. ಯುವಕರು ಸಕ್ರಿಯವಾಗಿ ಭಾಗವಹಿಸಿ ಸರ್ಕಾರದ ಕಾರ್ಯಕ್ರಮವನ್ನು ಯಶಸ್ವಿಗಳಿಸಬೇಕೆಂದು ತಿಳಿಸಿದರು.
ಹೊಸವಂಟಮುರಿಯ ಪ್ರಾಥಮಿಕ ಆರೋಗ್ಯ ಕೇಂದದ್ರ ಆರೋಗ್ಯ ಅಧಿಕಾರಿಗಳಾದ ಡಾ. ಅಭಿನಂದನ ವಾಲಿ ಮಾತನಾಡಿ, ಪ್ಲ್ಯಾಸ್ಟಿಕ ಬಳಕೆ ಕಡಿಮೆ ಮಾಡಿ ಪ್ಲ್ಯಾಸ್ಟಿಕ ಮುಕ್ತ ಭಾರತ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸೊಣಾ ಜೊತೆಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕಾಗಿ ಸಲಹೆ ನೀಡಿದರು
ನೆಹರು ಯುವ ಕೇಂದ್ರ ಬೆಳಗಾವಿ ಸದಸ್ಯರಾದ ಮಲ್ಲಯ್ಯಾ ಕರಡಿ ಇವರು ಮಾತನಾಡಿ ನೆಹರು ಯುವ ಕೇಂದ್ರದ ಬಗ್ಗೆ, ಸ್ವಚ್ಚತಾ ಜಾಗೃತಿ ಮತ್ತು ಶ್ರಮದಾನ ಕಾರ್ಯಕ್ರಮ ಕೇವಲ ಸರ್ಕಾರದ ಇಲಾಖೆಯವರು ಮಾತ್ರ ಸ್ವಚ್ಚತೆ ಮಾಡಬೇಕೆಂಬ ಜನರ ಅಭಿಪ್ರಾಯವನ್ನು ತೆಗದುಹಾಕಬೇಕು, ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದುನ್ನು ನಿಲ್ಲಿಸಬೇಕು, ಯುವಕರು ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಹಕಾರ ನೀಡಬೇಕೆಂದು ಸಲಹೆ ನೀಡಿದರು.
ಈ ಸ್ವಚ್ಛತಾ ಅಭಿಯಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರಾದ ಸೌರಂಕ್ಷಣ, ಗ್ರಾಮ ಪಂಚಾಯತ ಅಧ್ಯಕ್ಷರಾದ ಮಹಾದೆವಿ ಮಾ ಚೌಗಲಾ, ರಾಮಪ್ಪ ಹಂಚಿನಮನಿ, ಎಮ್ ಎ ಮಾವುತ, ನಿಂಗಪ್ಪ ಬ ಪಾಟೀಲ, ಕೆಂಪಣ್ಣ ತಳವಾರ, ಗ್ರಾಮ ಪಂಚಾಯತ ಸದಸ್ಯರು, ಸಿಬ್ಬಂದಿ ವರ್ಗದವರು ಸೇರಿದಂತೆ ಸುಗ್ರಾಮ ಯುವಕ ಸಂಘದ ಸದಸ್ಯರು ಉಪಸ್ಥಿರಿದ್ದರು ಎಂದು ಬೆಳಗಾವಿಯ ನೆಹರು ಯುವಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ರೋಹಿತ ಕಲರಾ ಪ್ರಕಟಣೆಯಲ್ಲಿ ತಿಳಿಸಿದರು.////

ಕಾಲೇಜು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ತರಬೇತಿ

ಬೆಳಗಾವಿ, ಅ.27 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ”ದ ವತಿಯಿಂದ ಕರ್ನಾಟಕ ಸರ್ಕಾರ ನಡೆಸಲಿರುವ ‘ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ’ಗೆ 45 ದಿನಗಳ ವಿಶೇಷ ತರಬೇತಿ ಶಿಬಿರವನ್ನು ನಡೆಸಲಾಗುವುದು.
ಆಸಕ್ತರು ನವೆಂಬರ್ 6 ರ ಒಳಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ ದ ಕಛೇರಿಯಲ್ಲಿ ಬೆಳಿಗ್ಗೆ 10.00 ರಿಂದ ಸಂಜೆ 4.00 ಗಂಟೆಯವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2515944 ಗೆ ಸಂಪರ್ಕಿಸಬಹುದು ಎಂದು ಕರಾಮುವಿ ಕುಲಸಚಿವರಾದÀ ಪ್ರೊ. ಆರ್. ರಾಜಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಹಿಂಗಾರು-2021ರ ಹಂಗಾಮಿಗೆ ತೋಟಗಾರಿಕೆ ಬೆಳೆಗಳಿಗೆ ವಿಮೆ ಪಾವತಿ

ಬೆಳಗಾವಿ, ಅ.27 : ಹಿಂಗಾರು-2021 ನೇ ಹಂಗಾಮಿಗೆ ಜಿಲ್ಲೆಯ ರೈತರಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಬೆಳಗಾವಿ ಜಿಲ್ಲೆಯ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹೋಬಳಿಗಳಿಗೆ ಈರುಳ್ಳಿ, ಬೈಲಹೊಂಗಲ ತಾಲೂಕಿನ ಹೋಬಳಿಗಳಿಗೆ ಟೊಮ್ಯಾಟೊ, ಹಿರೇಬಾಗೇವಾಡಿ ತಾಲೂಕಿನ ಟೊಮ್ಯಾಟೋ, ಆಲೂಗಡ್ಡೆ, ಸವದತ್ತಿ ತಾಲೂಕಿನ ಹೋಬಳಿಗಳಿಗೆ ಟೊಮ್ಯಾಟೊ ಬೆಳೆಗೆ ವಿಮಾ ಅಧಿಸೂಚನೆ ಹೊರಡಿಸಿದ್ದು, ಪ್ರತಿ ಹೆಕ್ಟೇರಿಗೆ ಈರುಳ್ಳಿ (ನೀ) ರೂ.3750, ಟೊಮ್ಯಾಟೊ (ನೀ) ರೂ.5900 /- ಹಾಗೂ ಆಲೂಗಡ್ಡೆ (ನೀ) ಬೆಳೆಗೆ ರೂ.4524/- ರ ವಿಮಾ ಕಂತಿನ ಮೊತ್ತವಾಗಿರುತ್ತದೆ.
ಹವಾಮಾನ ಆಧಾರಿತ ಬೆಳೆ ವಿಮಾ ಯೊಜನೆಯಡಿ ಬೈಲಹೊಂಗಲ ತಾಲೂಕಿಗೆ ಮಾವು ಹಾಗೂ ಹಸಿಮೆಣಸಿನಕಾಯಿ (ನೀ), ಬೆಳಗಾವಿ ತಾಲೂಕಿನ ಬೆಳಗಾವಿ, ಹಿರೇಬಾಗೆವಾಡಿ, ಹಾಗೂ ಉಚಗಾಂವ ಹೋಬಳಿಗಳಿಗೆ ಹಸಿಮೆಣಸಿನಕಾಯಿ (ನೀ) ಮತ್ತು ಹಿರೇಬಾಗೆವಾಡಿ ಹಾಗೂ ಉಚಗಾಂವ ಹೋಬಳಿಗಳಿಗೆ ಮಾವು, ಚಿಕ್ಕೋಡಿ ತಾಲೂಕಿನ ಚಿಕ್ಕೋಡಿ, ಸದಲಗಾ, ನಿಪ್ಪಾಣಿ ಹೋಬಳಿಗಳಿಗೆ ಹಸಿ ಮೆಣಸಿನಕಾಯಿ (ನೀ) ಬೆಳೆಗಳಿಗೆ ವಿಮೆ ಪಾವತಿಸಬಹುದಾಗಿದೆ.
ಅದೇ ರೀತಿ ಗೋಕಾಕ ತಾಲೂಕಿನ ಗೋಕಾಕ ಹೋಬಳಿಗಳಿಗೆ ಮಾವು ಹಾಗೂ ಗೋಕಾಕ, ಅರಭಾಂವಿ ಮತ್ತು ಕೌಜಲಗಿ ಹೋಬಳಿಗಳಿಗೆ ಹಸಿ ಮೆಣಸಿನಕಾಯಿ (ನೀ), ಖಾನಾಪುರ ತಾಲೂಕಿನ ಖಾನಾಪುರ, ಬೀಡಿ ಹೋಬಳಿಗಳಿಗೆ ಮಾವು ಹಾಗೂ ರಾಯಬಾಗ ತಾಲೂಕಿಗೆ ಹಸಿ ಮೆಣಸಿನಕಾಯಿ(ನೀ), ಸವದತ್ತಿ ತಾಲೂಕಿಗೆ ಹಾಸಿ ಮೆಣಸಿನಕಾಯಿ (ನೀ), ಬೆಳೆಗಳಿಗೆ ವಿಮಾ ಪಾವತಿಸಬಹುದಾಗಿದ್ದು, ಪ್ರತಿ ಹೆಕ್ಟೇರಿಗೆ ಮಾವು ಬೆಳೆಗೆ ರೂ.4000/- ಹಾಗೂ ಹಸಿಮೆಣಸಿನಕಾಯಿ (ನೀ) ಬೆಳೆಗೆ ರೂ.3550/- ರಂತೆ ರೈತರ ವಂತಿಕೆಯ ವಿಮಾ ಕಂತು ನಿಗದಿಯಾಗಿದೆ ಎಂದು ತಿಳಿಸಿದ್ದಾರೆ.
ಅಸಕ್ತ ರೈತರು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ನವ್ಹೆಂಬರ್ 15 ಹಾಗೂ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ)ಯೋಜನೆಯಡಿ ಈರುಳ್ಳಿ (ನೀ) ಬೆಳೆಗೆ ನವ್ಹೆಂಬರ್ 30 ಹಾಗೂ ಆಲೂಗಡ್ಡೆ, ಟೊಮ್ಯಾಟೊ ಬೆಳೆಗಳಿಗೆ ಡಿಸೆಂಬರ್ 16 ರೊಳಗಾಗಿ ವಿಮೆ ಕಂತು ಪಾವತಿಸಲು ಹತ್ತಿರದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದು.
ಜಿಲ್ಲೆಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಯುನಿವರ್ಸಲ್ ಸೊಂಪೆÇ ಜನರಲ್ ಇನ್ಶುರೆನ್ಸ್ ಕಂ.ಲಿ ಅಧಿಸೂಚಿತ ವಿಮಾ ಸಂಸ್ಥೆಗಳಾಗಿವೆ ರೈತರು ಈ ಯೋಜನೆಯ ಸದುಪಯೋಗ ಪಡೆಯುವಂತೆ ಬೆಳಗಾವಿ ಜಿಲ್ಲಾ ಪಂಚಾಯತನ ತೋಟಗಾರಿಕೆಯ ಉಪನಿರ್ದೇಶಕರಾದ ಮಹಂತೇಶ ಮುರಗೋಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಹೋಬಳಿ / ತಾಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಅಥಣಿ:08289-285099 ಚಿಕ್ಕೋಡಿ: 08338-274943 ಖಾನಾಪೂರ:08336-223387 ಬೈಲಹೊಂಗಲ: 08288-233758ಗೋಕಾಕ:08332-229382 ರಾಯಬಾಗ: 08331-225049 ಸವದತ್ತಿ:08330-222082 ಬೆಳಗಾವಿ: 0831-2431559 ಹುಕ್ಕೇರಿ:08333-265915 ರಾಮದುರ್ಗ: 08335-241512 ಗೆ ಸಂಪರ್ಕಿಸಬಹುದು.

ಮರಾಠಿ ಶಿಕ್ಷಕ ವಿನಾಯಕ ಮೋರೆ ಕಂಠಸಿರಿಯಲ್ಲಿ ಕನ್ನಡ ಗೀತಗಾಯನ…

ಬೆಳಗಾವಿ, ಅ.27: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗುತ್ತಿರುವ “ಲಕ್ಷ ಕಂಠಗಳಲ್ಲಿ” ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಬೆಳಗಾವಿ ಜಿಲ್ಲೆಯಲ್ಲಿನ 2000 ವಿದ್ಯಾರ್ಥಿನಿಯರಿಗೆ ಆಯ್ದ ಕನ್ನಡ ಗೀತೆಗಳನ್ನು ಕಲಿಸುವ ಮಹತ್ವಪೂರ್ಣ ಕಾರ್ಯವನ್ನು ಮರಾಠಿ ಶಿಕ್ಷಕರಾದ ಹಾಗೂ ಸಮೂಹ ಗಾಯನದ ಮಾಸ್ಟರ್ ಎಂದು ಪ್ರಸಿದ್ಧರಾದ ವಿನಾಯಕ ಮೋರೆಯವರು ಮಾಡಿದ್ದಾರೆ.
ಅ.28 ರಂದು ನಡೆಯಲಿರುವ ಸಮೂಹ ಗೀತಗಾಯನ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಇದರಲ್ಲಿ 1000 ವಿದ್ಯಾರ್ಥಿಗಳು ಸುವರ್ಣ ಸೌಧದಲ್ಲಿ ಹಾಗೆಯೇ ಇನ್ನುಳಿದವರು ಬೇರೆ ಬೇರೆ ಕಡೆ ಹಾಡಲಿದ್ದಾರೆ. ಸಂಗೀತ ಶಿಕ್ಷಕ ವಿನಾಯಕ ಮೋರೆ ಅವರು ನಗರದ ಎಲ್ಲ ಬಿ.ಎಡ್. ಕಾಲೇಜಿನ ಹಾಗೂ ಶಾಲೆಯ ವಿದ್ಯಾರ್ಥಿಗಳಿಗೆ ಈ ಹಾಡುಗಳನ್ನು ಕಲಿಸಿದ್ದಾರೆ.
ಸರ್ಕಾರಿ ಬಿ.ಎಡ್ ಕಾಲೇಜು, ಎಮ್.ಎನ್.ಆರ್.ಎಸ್ ಕಾಲೇಜು, ಸಾಗರ ಬಿ.ಎಡ್ ಕಾಲೇಜು, ಕೆ.ಎಸ್.ಆರ್ ಕಾಲೇಜು, ಶೇಖ್ ಕಾಲೇಜು, ಸಿದ್ದರಾಮೇಶ್ವರ ಚಂದ್ರಗಿರಿ ಮಹಿಳಾ ಕಾಲೇಜು, ಸಂಗೊಳ್ಳಿ ರಾಯಣ್ಣ ಡಿಗ್ರಿ ಕಾಲೇಜು, ಪಂಡಿತ್ ನೆಹರು ಕಾಲೇಜು, ಜೀವನ ಜ್ಯೋತಿ ಶಾಲೆ, ಲವ್ ಡೇಲ್ ಸೆಂಟ್ರಲ್ ಸ್ಕೂಲ್, ಉಷಾತಾಯಿ ಗೊಗಟೆ ಹೈಸ್ಕೂಲ್ ಹೀಗೆ ಹಲವು ಶಾಲೆಗಳಲ್ಲಿ ಗೀತಗಾಯನ ನಡೆಯಲಿದೆ.
ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಕ್ಷಕ ವಿನಾಯಕ ಮೋರೆ ಇವರ ಸಂಗೀತದ ಯೋಗದಾನವಿರುತ್ತದೆ. ವಿಶ್ವ ಕನ್ನಡ ಸಮ್ಮೇಳನದಲ್ಲಿ ಅವರು ಕಲಿಸಿದ ನಾಡ ಗೀತೆಯು ಇಂದಿಗೂ ಎಲ್ಲರಿಗೂ ನೆನಪಿನಲ್ಲಿದೆ.
ಸಂಗೀತ ಶಿಕ್ಷಕ ಮೋರೆ ಅವರಿಗೆ ಕನ್ನಡ ಮಾತನಾಡಲು ಬರುವುದಿಲ್ಲ ಮರಾಠಿ ಭಾಷಿಕರಾದರು ಸಹ ಕನ್ನಡ ಗೀತೆಗಳನ್ನು ಅತ್ಯಂತ ಪ್ರೀತಿಯಿಂದ ಪ್ರಭಾವ ಪೂರ್ವಕವಾಗಿ ಸ್ವತಃ ಹಾಡುತ್ತಾರೆ. ವಿದ್ಯಾರ್ಥಿಗಳಿಗೂ ಕಲಿಸುತ್ತಾರೆ.

📱 Read Top News, Belgaum News Updates, Belagavi News in Kannada, Latest News on News Belgaum