Belagavi News In Kannada | News Belgaum

SDMC ಅಧ್ಯಕ್ಷ ಸ್ಥಾನಕ್ಕಾಗಿ ಬಡಿದಾಡಿದ ಗ್ರಾಮಸ್ಥರು

🌐 Belgaum News :

ಬಳ್ಳಾರಿ : ಎಸ್ ಡಿಎಂಸಿ ಅಧ್ಯಕ್ಷ ಸ್ಥಾನಕ್ಕಾಗಿ ಗ್ರಾಮಸ್ಥರು ಕೈ ಕೈ ಮಿಲಾಯಿಸಿ ಬಡಿದಾಡಿದ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಗಾಳಮ್ಮನಗುಡ್ಡಿದಲ್ಲಿ ನಡೆದಿದೆ.

ಗ್ರಾಮ ಸರ್ಕಾರಿ ಶಾಲೆಗೆ ಎಸ್​​ಡಿಎಂಸಿ ಅಧ್ಯಕ್ಷ ನೇಮಕ ವಿಚಾರದ ವೇಳೆ ಈ ಜಗಳ ಸಂಭವಿಸಿದೆ. ಎಸ್‌ಡಿಎಂಸಿ ಅಧ್ಯಕ್ಷ ಸ್ಥಾನ ಬೇರೆಯವರಿಗೆ ಬಿಟ್ಟುಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆಗ ನಾನೇ ಮುಂದೆ ಎಸ್​​ಡಿಎಂಸಿ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ ಎಂದು ಸಿ.ಡಿ ಯಲ್ಲಪ್ಪಾ ಎಂಬುವರು ವಾಗ್ವಾದ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು, ಈಗಾಗಲೇ ಎರಡು ಬಾರಿ ಎಸ್​​ಡಿಎಂಸಿ ಅಧ್ಯಕ್ಷರಾಗಿದ್ದೀರಿ. ಮೂರನೇ ಅವಧಿಗೂ ನೀವೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಪಟ್ಟುಹಿಡಿದಿದ್ದೀರಿ. ಇದು ಸರಿಯಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.///////

📱 Read Top News, Belgaum News Updates, Belagavi News in Kannada, Latest News on News Belgaum