Belagavi News In Kannada | News Belgaum

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ನೀಟ್‌ ಪರೀಕ್ಷೆ ಫಲಿತಾಂಶ ಪ್ರಕಟಿಸಲು ಸುಪ್ರೀಂ ಕೋರ್ಟ್‌ ಗ್ರೀನ್ ಸಿಗ್ನಲ್

🌐 Belgaum News :

ದೆಹಲಿ:  ದೇಶಾದ್ಯಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆದಿದ್ದ ನೀಟ್‌ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ಸುಪ್ರೀಂ ಕೋರ್ಟ್‌  ಅನುಮತಿ ನೀಡಿದೆ.

ನೀಟ್ ಪರೀಕ್ಷಾ ಫಲಿತಾಂಶವನ್ನು ಎನ್ ಟಿ ಎ ಘೋಷಿಸದಂತೆ ಮತ್ತು ಇಬ್ಬರು ಪರೀಕ್ಷಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವಂತೆ ಬಾಂಬೆ ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ನೀಟ್ ಫಲಿತಾಂಶವನ್ನು ಘೋಷಿಸುವಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ತಿಳಿಸಿದೆ.

ಇಬ್ಬರು ಪರೀಕ್ಷಾರ್ಥಿಗಳ ಪ್ರಶ್ನೆ ಪತ್ರಿಕೆಗಳು ಮತ್ತು ಒಎಂಆರ್‌ ಪ್ರತಿಗಳು ಪರೀಕ್ಷೆಗೂ ಮುನ್ನಾ ಪರೀಕ್ಷಾ ಕೇಂದ್ರದಲ್ಲಿ ಬೆರೆತು ಹೋಗಿದ್ದವು. ಹೀಗಾಗಿ ಅವರಿಗೆ ಮತ್ತೊಮ್ಮೆ ಅವಕಾಶ ಕೊಡಬೇಕು. ಈ ಇಬ್ಬರ ಪರೀಕ್ಷಾ ಫಲಿತಾಂಶವನ್ನು ಕೂಡ ಸೆಪ್ಟೆಂಬರ್‌ 12ರಂದು ನಡೆಸಿದ ಪರೀಕ್ಷೆಯ ಫಲಿತಾಂಶದ ಜತೆಗೇ ಪ್ರಕಟಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿತ್ತು.

ಈ ಹಿನ್ನೆಲೆಯಲ್ಲಿ ಎನ್ ಟಿ ಎ ಫಲಿತಾಂಶ ಘೋಷಿಸದಂತೆ ಕೋರ್ಟ್ ತಡೆ ನೀಡಿತ್ತು. ಇದೀಗ ಸುಪ್ರೀಂ ಕೋರ್ಟ್ ನೀಟ್ ಫಲಿತಾಂಶ ಘೋಷಣೆಗೆ ಅನುಮತಿ ನೀಡಿದೆ./////

📱 Read Top News, Belgaum News Updates, Belagavi News in Kannada, Latest News on News Belgaum