Belagavi News In Kannada | News Belgaum

ಸೂಕ್ತ ಸಮಯಕ್ಕೆ ಬಸ್ ಬಿಡುವಂತೆ ಒತ್ತಾಯಿಸಿ ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆ: ಪಾಲಕರು ಸಾಥ್

🌐 Belgaum News :

ಗೋಕಾಕ:  ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಬಸ್ ಬಿಡುವಂತೆ ಒತ್ತಾಯಿಸಿ  ನೂರಾರು ವಿದ್ಯಾರ್ಥಿಗಳು ಕೊಣ್ಣೂರು ಪಟ್ಟಣದಲ್ಲಿ ಗುರುವಾರ ರಸ್ತೆ ತಡೆದು  ಪ್ರತಿಭಟನೆ ನಡೆಸಿದ್ದಾರೆ.

ತಾಲ್ಲೂಕಿನ ಕೊಣ್ಣೂರ ಪಟ್ಟಣದ ವಿದ್ಯಾರ್ಥಿಗಳು ರಸ್ತೆ ತಡೆದು  ಗೋಕಾಕ   ಕೆಎಸ್ ಆರ್ ಟಿಸಿ (ಡಿಪೋ) ಅಧಿಕಾರಿಗಳ ವಿರುದ್ದ ಆಕ್ರೋಶ ಹೋರಹಾಕಿದರು.  ಕೆಲವು ಸಮಯದವರೆಗೂ ರಸ್ತೆ ಮೇಲೆ ಕುಳಿತುಕೊಂಡು ಧರಣಿ ನಡೆಸಿದ್ದಾರೆ.

ಈ ವೇಳೆ ವಿದ್ಯಾರ್ಥಿಗಳು ಮಾತನಾಡಿ,”  ಬೆಳಗಿನ ಜಾವ ಶಾಲಾ-ಕಾಲೇಜಗಳು ಹಾಗೂ ಟ್ಯೂಷನ್ ಗಳು ಆರಂಭಗೊಳ್ಳುತ್ತವೆ. ಸಮಯಕ್ಕೆ ಸರಿಯಾಗಿ ಬಸ್ ಗಳು ಬರುವುದಿಲ್ಲ. ಈಗಾಗಲೇ ಗೋಕಾಕ  ಡಿಪೋ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಸ್ಪಂಧಿಸಿಲ್ಲ, ಅಧಿಕಾರಿಗಳ ನಿರ್ಲಕ್ಷ್ಯದಿಂದ  ಶಾಲಾ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಬೀದಿಗಿಳಿದು ಪ್ರತಿಭಟನೆ ಮಾಡುವುದು ಅನಿರ್ವಾಯವಾಗಿದೆ ” ಎಂದು ವಿದ್ಯಾರ್ಥಿಗಳು ಅಸಮಾದಾನ ಹೊರಹಾಕಿದ್ದಾರೆ.

ಬಸ್ ಗಳ ಕೊರತೆ:- ತಾಲ್ಲೂಕಿಗೆ ಡಿಪೋ ಆದರೂ, ಬಸ್ ಗಳ  ಕೊರತೆ ಕಾಡುತ್ತಿದೆ.  ಕೊಣ್ಣೂರು ಪಟ್ಟಣ ವ್ಯಾಪ್ತಿಯ  ಮಾರ್ಗವಾಗಿ ಸಾವಳಗಿ, ಶಿವಾಪೂರ, ದುಪದಾಳ, ಘೋಡಗೇರಿ, ಗೋಕಾಕ ರೋಡ ಗ್ರಾಮಗಳಿಗೆ, ಈ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು, ಕೃಷಿಕರು ಹಾಗೂ ವ್ಯಾಪಾರಿಗಳು ಬಸ್ ಗಳ ಮೇಲೆ ಅವಲಂಭಿತರಾಗಿದ್ದಾರೆ.

ಬಸ್ ಗಳ  ವಿಳಂಬದಿಂದ ನಿತ್ಯವೂ  ಶಾಲಾ ಮಕ್ಕಳು ಸಮಸ್ಯೆ ಅನುಭವಿಸಬೇಕಾಗಿದೆ. ಗೋಕಾಕಗೆ  ತೆರಳಲು  ಸೂಕ್ತ ಸಮಯಕ್ಕೆ ಅಧಿಕಾರಿಗಳು ಬಸ್ ಗಳ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡರು.

ಗೋಕಾಕ ಕೆಎಸ್ ಆರ್ ಟಿಸಿ ( ಡಿಪೋ )   ಈ ಮಾರ್ಗದಿಂದ ಹೆಚ್ಚು ಆದಾಯ ಬರುತ್ತದೆ. ಆದರೂ, ಬಸ್ ವ್ಯವಸ್ಥೆ ಕಲ್ಪಿಸಲು ಸಾರಿಗೆ ಅಧಿಕಾರಿಗಳು ತೀರಾ ನಿರ್ಲಕ್ಷ್ಯ ವಹಿಸುತ್ತಿರುವ ವಿದ್ಯಾರ್ಥಿಗಳಿಗೆ ಬೇಸರ ತಂದಿದೆ.  ಈ  ಪ್ರತಿಭಟನೆ ಮರು ಕಳಿಸದಂತೆ  ಅಧಿಕಾರಿಗಳು ಎಚ್ಚರಿಕೆ ಕಾರ್ಯನಿರ್ವಸಬೇಕೆಂದು ಎಚ್ಚರಿಕೆ ನೀಡಿದರು.

ಗುಜರಿ ಬಸ್ ಬೇಡ : ಆದಾಯದ  ಉದ್ದೇಶದಿಂದ ಹಬ್ಬ-ಹರಿ ದಿನಗಳಲ್ಲಿ ಹೆಚ್ಚುವರಿ  ಬಸ್ ಗಳನ್ನು ಬಿಡಲಾಗುತ್ತದೆ. ಈ ವೇಳೆ ಯಲ್ಲಿ ನಮ್ಮ ಕಾಲೇಜಗಳು ರಜೆ ಇರುತ್ತವೆ  ವಿದ್ಯಾರ್ಥಿಗಳಿಗೆ ಉಪಯೋಗ ಆಗುವುದಿಲ್ಲ. ಶಾಲೆಗಳ ಪ್ರಾರಂಭವಾಗ ಸುಸುಜ್ಜಿತ ಬಸ್ ಬರುವುದಿಲ್ಲ. ಗ್ರಾಮಗಳಿಗೆ 5-6 ಬಸ್ ಗಳ ಪೈಕಿ ಮೂರು ಬಸ್ ಗುಜರಿ ಬಸ್ ಗಳು ಬಿಡಲಾಗುತ್ತದೆ. ಕಾಲೇಜ ಹೋಗುವ ದಾರಿ ಮಧ್ಯದಲ್ಲಿ ಬಸ್ ಕೆಟ್ಟು ನಿಂತುಹೋಗುತ್ತವೆ. ಅಧಿಕಾರಿಗಳು ಸುಸುಜ್ಜಿತ ಬಸ್ ಗಳನ್ನು ಬಿಡಬೇಕೆಂದು ಕಳವಳ ವ್ಯಕ್ತಪಡಿಸಿದರು.//////

📱 Read Top News, Belgaum News Updates, Belagavi News in Kannada, Latest News on News Belgaum