Belagavi News In Kannada | News Belgaum

ಅಥಣಿ ಸಬ್ ರಿಜಿಸ್ಟ್ರಾರ್, 11 ಕ್ಕೂ ಹೆಚ್ಚು ಬಾಂಡ್ ರೈಟರ್ ಗಳ ಕಚೇರಿಗಳ ಮೇಲೆ ಎಸಿಬಿ ದಾಳಿ

🌐 Belgaum News :
ಅಥಣಿ: ಆಸ್ತಿ ನೋಂದಣಿಗಾಗಿ ಸಾರ್ವಜನಿಕರಿಂದ ಕಾನೂನು ಬಾಹಿರವಾಗಿ ಸಿಕ್ಕಾಪಟ್ಟೆ ಹಣ ಕೀಳುತ್ತಿರುವ ಬಗ್ಗೆ ದೂರುಗಳು ಹೆಚ್ಚಾಗಿ ಬಂದಿರುವ ಹಿನ್ನೆಲೆಯಲ್ಲಿ, ಅಥಣಿ ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ಪಟ್ಟಣದಲ್ಲಿನ 11 ಕ್ಕೂ ಬಾಂಡ್ ರೈಟರ್ ಗಳ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗೃಹ ದಳ (ಎಸಿಬಿ) ದ ವತಿಯಿಂದ ಇಂದು ಮಧ್ಯಾಹ್ನ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ಮುಂದುವರಿದಿದೆ.
ಎಸಿಬಿ (ಉತ್ತರ ವಲಯ) ಎಸ್ಪಿ ಬಿ.ಎಸ್.ನ್ಯಾಮಗೌಡರ ಮಾರ್ಗದರ್ಶನ ಹಾಗೂ ಡಿವೈಎಸ್ಪಿಗಳಾದ ಕರುಣಾಕರ ಶೆಟ್ಟಿ ಮತ್ತು ಮಂಜುನಾಥ ಗಂಗಲ ಇವರ ನೇತೃತ್ವದಲ್ಲಿ ಆರು ಮಂದಿ ಇನ್ಸಪೆಕ್ಟರ್ ಗಳು ಮತ್ತು 30 ಕ್ಕೂ ಅಧಿಕ ಸಿಬ್ಬಂದಿಯಿಂದ ದಾಳಿ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ನಡೆದಿರುವ ಅತಿದೊಡ್ಡ ದಾಳಿ ಇದಾಗಿದೆ ಎಂದು ಹೇಳಲಾಗುತ್ತಿದೆ.
ಇನ್ಸಪೆಕ್ಟರ್ ಗಳಾದ ಸುನಿಲಕುಮಾರ, ಅಡಿವೇಶ ಗುದಿಗೊಪ್ಪ, ವೀರಣ್ಣ ಹಳ್ಳಿ, ವಿಜಯ ಮಠಪತಿ, ಸಮೀರ್ ಮುಲ್ಲಾ ಮತ್ತು ಪರಮೇಶ್ವರ ಕವಟಗಿ ಹಾಗೂ ಸಿಬ್ಬಂದಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
📱 Read Top News, Belgaum News Updates, Belagavi News in Kannada, Latest News on News Belgaum