Belagavi News In Kannada | News Belgaum

‘ಮಾತಾಡ್ ಮಾತಾಡ್ ಕನ್ನಡ ಸ್ಪರ್ಧೆಯಲ್ಲಿ ಡಾ. ಸಂಜಯಗೆ ಪ್ರಥಮ ಸ್ಥಾನ

🌐 Belgaum News :

ಮೂಡಲಗಿ: ತಾಲ್ಲೂಕು ಆಡಳಿತದಿಂದ ಏರ್ಪಡಿಸಿದ್ದ ಅನ್ಯ ಭಾಷೆ ಪದಗಳನ್ನು ಬಳಸದೇ ೪ ನಿಮಿಷ ಕನ್ನಡದಲ್ಲಿ ಮಾತನಾಡುವ  ‘ಮಾತಾಡ್ ಮಾತಾಡ್ ಕನ್ನಡ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಡಾ. ಸಂಜಯ ಎ. ಶಿಂಧಿಹಟ್ಟಿ ಪಡೆದುಕೊಂಡಿರುವರು.

ದ್ವಿತೀಯ ಸ್ಥಾನವನ್ನು ಅಪೇಕ್ಷಾ ಮುರುಗೇಶ ಕತ್ತಿ ಮತ್ತು ತೃತೀಯ ಸ್ಥಾನವನ್ನು ಶಿವಾನಂದ ತೋರಣಗಟ್ಟಿ ಪಡೆದುಕೊಂಡಿರುವರು.

ಸ್ಪರ್ಧೆಯಲ್ಲಿ ಒಟ್ಟು ೭ ಜನರು ಭಾಗವಹಿಸಿದ್ದರು. ವಿಜೇತರಿಗೆ ನ. ೧ರಂದು ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದು ಸಂಘಟರು ತಿಳಿಸಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum