Belagavi News In Kannada | News Belgaum

ಹಾನಗಲ್ : ಹಕ್ಕು ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ

🌐 Belgaum News :

ಹಾನಗಲ್  : ಹಾನಗಲ್ ಉಪಚುನಾವಣೆ ಮತದಾನ ಶನಿವಾರ ಬೆಳಗ್ಗೆ ಆರಂಭವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ  ಮತಗಟ್ಟೆ ಆಗಮಿಸಿ ಮತಚಲಾಯಿಸಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕುಟುಂಬ ಹಾಗೂ ಕಾರ್ಯಕರ್ತರೊಂದಿಗೆ ಆಗಮಿಸಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಹಾನಗಲ್ ಮಾದರಿ ಕ್ಷೇತ್ರವಾಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದರು.

ಗೆದ್ದೇ ಗೆಲ್ಲುತ್ತೆ ಒಂದು ದಿನ ಗೆಲ್ಲಲೇಬೇಕು ಒಳ್ಳೆತನ ಎಂಬ ಭರವಸೆಯ ಮೇಲೆ ನಾನು ಮತ ಚಲಾಯಿಸಿದ್ದೇನೆ. ಮತದಾರರು ಸಹ ತಮ್ಮ ಹಕ್ಕುಚಲಾಯಿಸಿ ಎಂದು ಹೇಳಿದರು.//////

📱 Read Top News, Belgaum News Updates, Belagavi News in Kannada, Latest News on News Belgaum