Belagavi News In Kannada | News Belgaum

ಕರವೇ ಕಾರ್ಯಕರ್ತರಿಂದ ನಟ ಪುನೀತ್‌ಗೆ ಶ್ರದ್ಧಾಂಜಲಿ ಕನ್ನಡ ರಾಜ್ಯೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲು ನಿರ್ಧಾರ

🌐 Belgaum News :
ಅಥಣಿ: ಕನ್ನಡ ನಾಡಿನ ಮೇರು ನಟ,ಪವರಸ್ಟಾರ್ ಪುನೀತ ರಾಜಕುಮಾರ ಅಕಾಲಿಕ ನಿಧನಕ್ಕೆ ಅಥಣಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೇಟ್ಟಿ ಬಣ) ಕಾರ್ಯಕರ್ತರು,ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು.
 ಈ ವೇಳೆ ಕರವೇ ತಾಲೂಕಾಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಪುನೀತ ರಾಜಕುಮಾರ ಅವರು ಅಕಾಲಿಕ ನಿಧನ ಹೊಂದಿರುವದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ರಾಷ್ಟç ಮಟ್ಟದ ಮತ್ತು ರಾಜ್ಯ ಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದ  ಅವರು ತಮ್ಮ ೪೬ನೇ ವಯಸ್ಸಿನಲ್ಲಿಯೇ ನಿಧನ ಹೊಂದಿರುವದು ನಾಡಿನ ಜನತೆಗೆ ಮತ್ತು ಅವರ ಅಭಿಮಾನಿಗಳಿಗೆ ಅತ್ಯಂತ ದುಃಖದ ಸಂಗತಿಯಾಗಿದೆ.ಅವರು ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಮತ್ತು ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
  ಕರವೇ ರಾಜ್ಯ ಕಾರ್ಯದರ್ಶಿ ರವಿ ಪೂಜಾರಿ ಮಾತನಾಡಿ ನಟ ಪುನೀತ್ ರಾಜಕುಮಾರ ಅವರು ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮಕ್ಕೆ ರಣವಿಕ್ರಮ ಸಿನೇಮಾ ಚಿತ್ರಿಕರಣಕ್ಕೆ ಬಂದಾಗ ನಮ್ಮ ಕರವೇ ಕಾರ್ಯಕರ್ತರನ್ನು ಬೇಟಿ ಮಾಡಿದಾಗ ಆತ್ಮೀಯತೆಯಿಂದ ಮಾತನಾಡಿದ್ದನ್ನು ಸ್ಮರಸಿಕೊಂಡ ಅವರು ಕನ್ನಡ ಚಿತ್ರರಂಗದ ಹೆಸರಾಂತ ನಟನನ್ನು ಕಳೆದುಕೊಂಡು ಅನೇಕ ಅಭಿಮಾನಗಳಿಗೆ ದುಃಖವಾಗಿದೆ. ಇಂತಹ ಉತ್ತಮ ನಟ ಮತ್ತೇ ಹುಟ್ಟಿ ಬರಲಿ ಎಂದು ಸಂತಾಪ ವ್ಯಕ್ತಪಡಿಸಿದರು.
ಕರವೇ ಜಿಲ್ಲಾ ಸಂಚಾಲಕ ಜಗನ್ನಾಥ ಭಾಮನೆ ಮಾತನಾಡಿ ನಟ ಪುನಿತ್ ಅವರು ಬಾಲ್ಯದಲ್ಲಿ ತಮ್ಮ ತಂದೆ ಡಾ.ರಾಜಕುಮಾರ ಅವರ ಜೊತೆಗೆ ಸಿನೇಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಿನೆಮಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ.ಅವರ ಅಕಾಲಿಕ ನಿಧನದಿಂದ ಚಿತ್ರರಂಗ ಬಡವಾಗಿಸಿದೆ ಎಂದು ಸಂತಾಪ ಸಲ್ಲಿಸಿದರು
   ಕರವೇ ಕಾರ್ಯಕರ್ತರು ನಟ ಪುನೀತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಿದರು. ಈ ವೇಳೆ ಕುಮಾರ ಬಡಿಗೇರ,ವಿಜಯ ಹುದ್ದಾರ,ಉದಯ ಮಾಕಾಣಿ, ಸುಕುಮಾರ ಮಾದರ,ಸತೀಶ ಯಲ್ಲಟ್ಟಿ, ರಮೇಶ ಬಾದವಾಡಗಿ, ಪ್ರಶಾಂತ ಹಿರೇಮನಿ,ಅಶೋಕ ಗೌರಗೊಂಡ, ಗಿರೀಶ ಬಾಮನೆ,ಸಿದ್ದು ಹಂಡಗಿ, ರಾಜು ತಂಗಡಿ ಇನ್ನೀತರರು ಉಪಸ್ಥಿತರಿದ್ದರು.
;;;;;;;;;;;
 ಸರಳ ರಾಜ್ಯೋತ್ಸವಕ್ಕೆ ನಿರ್ಧಾರ
ನಾಡಹಬ್ಬ ೬೬ನೇ ಕನ್ನಡ ರಾಜ್ಯೋತ್ಸವನ್ನು ಅತ್ಯಂತ ಸಂಭ್ರಮದಿAದ ಆಚರಿಸಲು ಕರವೇ ಕಾರ್ಯಕರ್ತರು ಮತ್ತು ಅನೇಕ ಕನ್ನಡಪರ ಸಂಘಟನೆಗಳು ಈಗಾಗಲೇ ನಿರ್ಧರಿಸಿದ್ದವು. ನಾಡಿನ ಮೇರು ನಟ ಅಕಾಲಿಕ ನಿಧನ ಹೊಂದಿರುವ ಹಿನ್ನಲೆಯಲ್ಲಿ ಮೆರವಣಿಗೆ ಮತ್ತು ಸಾಂಸ್ಕçತಿಕ ಕಾರ್ಯಕ್ರಮಗಳನ್ನು ರದ್ದುಮಾಡಿ ಸರಳ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ತಾಲೂಕಿನ ಗ್ರಾಮಿಣ ಪ್ರಧೇಶದಲ್ಲಿ ಕರವೇ ಕಾರ್ಯಕರ್ತರು ನಾಡದೇವಿ ಭುನವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳ ರೀತಿಯಲ್ಲಿ ರಾಜ್ಯೋತ್ಸವ ಆಚರಿಸಬೇಕು.
   -ಅಣ್ಣಾಸಾಬ ತೆಲಸಂಗ, ಅಧ್ಯತಕ್ಷರು ಕರವೇ,ಅಥಣಿ
📱 Read Top News, Belgaum News Updates, Belagavi News in Kannada, Latest News on News Belgaum