Belagavi News In Kannada | News Belgaum

ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚುವರಿ ಬಸ್ ಕಾರ್ಯಾಚರಣೆ

🌐 Belgaum News :

ಬೆಳಗಾವಿ, ಅ.30 : ನವೆಂಬರ್ 01 ರಂದು ಕರ್ನಾಟಕ ರಾಜ್ಯೋತ್ಸವ, 3 ರಂದು ನರಕಚತುರ್ದಶಿ, 4 ರಂದು ದೀಪಾವಳಿ ಅಮವಾಸ್ಯೆ ಹಬ್ಬದ ಹಾಗೂ ದಿನಾಂಕ: 05 ರಂದು ಶುಕ್ರವಾರ ಬಲಿಪಾಡ್ಯಮಿ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಚಿಕ್ಕೋಡಿ ವಿಭಾಗದ ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ ಹಾಗೂ ಗೋಕಾಕ, ಘಟಕಗಳಿಂದ ಸರ್ಕಾರದ ಕೋವಿಡ್ ನಿಯಮಾವಳಿಯ ಸುತ್ತೋಲೆಯನ್ವಯ ಈ ಕೆಳಕಂಡಂತೆ ಹೆಚ್ಚುವರಿ ವಾಹನಗಳ ಕಾರ್ಯಾಚರಣೆ ಮಾಡಿದೆ.
ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ ಮತ್ತು ಗೋಕಾಕ ಘಟಕಗಳಿಂದ ಕೋಲ್ಹಾಪುರ, ಪುಣೆ, ಮುಂಬಯಿ ಹಾಗೂ ಇತರೇ ಅಂತರರಾಜ್ಯ ಮಾರ್ಗಗಳಿಗೆ ಅಕ್ಟೋಬರ್ 30ರಿಂದ ನವೆಂಬರ್ 13ರವರೆಗೆ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು.
ನವೆಂಬರ್ 05. ಮತ್ತು 06. ರಂದು ವಿಭಾಗದ ನಿಪ್ಪಾಣಿ ಘಟಕದಿಂದ ನಿಪ್ಪಾಣಿ-ಇಚಲಕರಂಜಿ, ನಿಪ್ಪಾಣಿ-ಕೋಲ್ಹಾಪುರ ಮಾರ್ಗದಲ್ಲಿ ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುವುದು.
ಸಾರ್ವಜನಿಕ ಪ್ರಯಾಣಿಕರು ಈ ವಿಶೇಷ ಹೆಚ್ಚುವರಿ ಸಾರಿಗೆಗಳ ಪ್ರಯೋಜನ ಪಡೆಯಲು ವಾಕರಸಾಸಂಸ್ಥೆ, ಚಿಕ್ಕೋಡಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum