Belagavi News In Kannada | News Belgaum

ಬೆಳಗಾವಿ ನೆಲದ ಹೋರಾಟ ಪರಂಪರೆಗೆ ಸಂದ ಗೌರವವಾಗಿದೆ” ಹಿರೇಮಠದ ಚಂದ್ರಶೇಖರ ಅಭಿಪ್ರಾಯ

🌐 Belgaum News :

ಬೆಳಗಾವಿ :ಕನ್ನಡ ನಾಡು, ನುಡಿ, ಗಡಿ, ಜಲ ರಕ್ಷಣೆಗಾಗಿ ಕರ್ನಾಟಕ ಏಕೀಕರಣದ ಸಂದರ್ಭದಿಂದಲೂ ಹೋರಾಟಗಳು ನಿರಂತರವಾಗಿ ನಡೆಯುತ್ತಿವೆ. ಮೂರನೇ ತಲೆಮಾರಿನ ಪ್ರಮುಖ ಹೋರಾಟಗಾರರಾದ ಅಶೋಕ ಚಂದರಗಿಯವರನ್ನು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಸಭಾಭವನದಲ್ಲಿ ಸಭಾಪತಿಗಳಾದ ಬಸವರಾಜ ಹೊರಟ್ಟಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜಂಟಿ ಅಧ್ಯಕ್ಷತೆಯಲ್ಲಿ ಜರುಗಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗೌರವಿಸುತ್ತಿರುವುದು ಬೆಳಗಾವಿ ನೆಲದ ಹೋರಾಟ ಪರಂಪರೆಗೆ ಸಂದ ಗೌರವವಾಗಿದೆ” ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.

ಭಾನುವಾರ ನಗರದ ಹುಕ್ಕೇರಿ ಹಿರೇಮಠದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಬೆಂಗಳೂರಿನಲ್ಲಿ ಸೋಮವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಪದಾಧಿಕಾರಿಗಳೊಂದಿಗೆ ಹೊರಟ ಅಶೋಕ ಚಂದರಗಿ ಹಾಗೂ ಅವರ ತಂಡವನ್ನು ಅಭಿನಂದಿಸಿ ಬೀಳ್ಕೊಟ್ಟು ಮಾತನಾಡಿದ ಅವರು,

“ಬೆಳಗಾವಿಯ ‘ನಡೆದಾಡುವ ಕನ್ನಡ ಕೋಶ’ ಎಂದೇ ಕರೆಯಲ್ಪಡುವ ಚಂದರಗಿಯವರು ಕಳೆದ ಮೂವತ್ತು ವರ್ಷಗಳಿಂದ ಗಡಿ ಸಮಸ್ಯೆ, ಮಹಾಜನ ವರದಿ, ಜಲ ವಿವಾದ, ಕಿತ್ತೂರು ಕರ್ನಾಟಕ ಹೋರಾಟ ಹಾಗೂ ಕನ್ನಡ ಅನುμÁ್ಠನದ ವಿಷಯಗಳ ಬಗ್ಗೆ ಆಳವಾದ ಅಧ್ಯಯನಾತ್ಮಕ ದೃಷ್ಟಿಕೋನದಿಂದ ಹೋರಾಟಗಳನ್ನು ಮುನ್ನಡೆಸಿದ್ದಾರೆ.

ಬೆಳಗಾವಿ ನೆಲದ ಗಡಿಭಾಗದ ಕನ್ನಡ ಶಾಲೆಗಳ ಸುಧಾರಣೆಗಾಗಿ ಸರ್ಕಾರಕ್ಕೆ ‘ಚಂದರಗಿ ವರದಿ’ ಸಲ್ಲಿಸುವ ಮೂಲಕ ಸರ್ಕಾರಿ ಶಾಲೆಗಳ ಸುಧಾರಣೆಗೆ ಕಾರಣರಾಗಿದ್ದಾರೆ. ಕನ್ನಡ ನಾಡು-ನುಡಿಗೆ ಧಕ್ಕೆ ಬಂದರೆ ಯಾವುದೇ ಮುಲಾಜಿಲ್ಲದೆ ಎಂಥವರನ್ನೂ ಎದುರು ಹಾಕಿಕೊಳ್ಳಬಲ್ಲ ಎದೆಗಾರಿಕೆ ಹೊಂದಿರುವ ಅವರು ಕನ್ನಡ ಚಳುವಳಿಯ ರಥವನ್ನು ಯಾವ ದಿಕ್ಕಿನಲ್ಲಿ ಎಳೆದೊಯ್ಯಬೇಕೆಂದು ಇಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅಂಥ ಕನ್ನಡ ಹೋರಾಟಗಾರರಿಗೆ ಈ ಮೊದಲೇ ರಾಜ್ಯೋತ್ಸವ ಪ್ರಶಸ್ತಿ ಬರಬೇಕಾಗಿತ್ತು. ಅದೇನೇ ಇರಲಿ ಈಗ ಅಂಥ ಅಪ್ರತಿಮ ಕನ್ನಡ ಕಟ್ಟಾಳುಗಳಿಗೆ ಸಂವಿಧಾನಾತ್ಮಕ ಗೌರವ ಸಲ್ಲಿಸುತ್ತಿರುವುದು ತಾಯಿ ಭುವನೇಶ್ವರಿಗೆ ಸಲ್ಲಿಸುತ್ತಿರುವ ಗೌರವವಾಗಿದೆ. ಕನ್ನಡ ಕಾಯಕದಲ್ಲಿ ಅವರು ಇನ್ನೂ ಹೆಚ್ಚಿನ ಸಾಧನೆ ಸಲ್ಲಿಸುವಂತಾಗಲಿ” ಎಂದು ಹೇಳಿದರು.

ಶ್ರೀಮಠದ ಗೌರವ ಸ್ವೀಕರಿಸಿ ಪ್ರತಿಕ್ರಿಯಿಸಿದ ಚಂದರಗಿಯವರು ಸರ್ಕಾರದ ಉನ್ನತ ಗೌರವ ಸ್ವೀಕರಿಸಲು ಹೊರಟ ತಂಡಕ್ಕೆ ಆಶೀರ್ವದಿಸಿ ಬೀಳ್ಕೊಟ್ಟ ಕನ್ನಡದ ಪೂಜ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಬೆಂಗಳೂರಿಗೆ ಹೊರಟ ಕ್ರಿಯಾ ಸಮಿತಿ ತಂಡದಲ್ಲಿ ಶಿವಪ್ಪ ಶಮರಂತ, ಮೈನುದ್ದಿನ್ ಮಕಾನದಾರ, ಶಂಕರ ಬಾಗೇವಾಡಿ, ವೀರೇಂದ್ರ ಗೋಬರಿ, ಮಂಜುನಾಥ ಹಾಗೂ ಡಿ.ಕೆ. ಪಾಟೀಲ ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum