Belagavi News In Kannada | News Belgaum

ನುಡಿ ಜಾನಪದ’ ಕೃತಿ ಗಡಿನಾಡ ಸಾಂಸ್ಕøತಿಕ ಅಧ್ಯಯನಕ್ಕೆ ಆಕರ : ಬಿ.ವಿ. ವಸಂತಕುಮಾರ

🌐 Belgaum News :

 

ಬೆಳಗಾವಿ, ದಿ. ನ.31: ನಿವೃತ್ತ ಪ್ರಾಚಾರ್ಯರು, ಸಾಹಿತಿಗಳು ಆದ ಬಿ.ಎ. ಜಂಬಗಿ ಅವರು ರಚಿಸಿದ ‘ನುಡಿ ಜಾನಪದ’ ಕೃತಿಯ ಲೋಕಾರ್ಪಣೆಯ ಸಮಾರಂಭ ಇಂದು (ದಿ.31/10/2021) ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಬಿ.ಎ. ದರೂರು ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ಜರುಗಿತು.

ಹಾರೂಗೇರಿಯ ಹಿರಿಯ ನಾಗರಿಕರ ಕಲ್ಯಾಣ ಸಂಸ್ಥೆ ಹಾಗೂ ಬಿ.ಎ.ದರೂರ ಸಂಶೋಧನ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡು ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಬಿ.ವಿ. ವಸಂತಕುಮಾರ ಅವರು ಕೃತಿ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಸಂತಕುಮಾರ ಅವರು, ಬಿ.ಎ. ಜಂಬಗಿ ಅವರು ತಮ್ಮ ದೀರ್ಘ ಅಧ್ಯಯನದಿಂದ ರಚಿಸಿ ‘ನುಡಿ ಜಾನಪದ’ ಕೃತಿ ಭಾಷಾ ವೈಶಿಷ್ಟ್ಯ ಹಾಗೂ ಸಾಂಸ್ಕøತಿ ವಿಶೇಷತೆ ಸೂಚಿಸುವುದರಿಂದ ಗಡಿ ಭಾಗದ ಸಾಂಸ್ಕøತಿಕ ಅಧ್ಯಯನಕ್ಕೆ ಪ್ರಮುಖ ಆಕರ ಗ್ರಂಥವಾಗಲಿದೆ. ಜಾನಪದ ಬದುಕು ನಗರ ಜೀವನದ ಮುಚ್ಚಿದ ಸಂಸ್ಕøತಿ ಎಲ್ಲ. ತೆರೆದ ಪುಸ್ತಕ ಇದ್ದಂತೆ. ಈ ಸಾಂಸ್ಕøತಿಕ ಅಧ್ಯಯನ ಗಡಿ ಭಾಗದಲ್ಲಿ ಹೆಚ್ಚು ನಡೆಯಬೇಕಾಗಿದ್ದು, ಮುಂದಿನ ತಲೆಮಾರಿಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಡಾ. ಎಚ್. ಐ. ತಿಮ್ಮಾಪೂರ ವಹಿಸಿದ್ದು, ಬಿ.ಎ.ಜಂಬಗಿ ಅವರ ಕೃತಿ ಕೇವಲ ಶಬ್ದಾರ್ಥ ಸೂಚಿಸುವ ನಿಘುಂಟವಾಗಿರದೆ, ಭಾಷೆ ವಿಭಿನ್ನ ಮಗ್ಗಲುಗಳನ್ನು ಅರ್ಥೈಯಿಸುವುದರಿಂದ ಜಾನಪದ ಲೋಕದ ಬಹುಮುಖಿ ಸಾಂಸ್ಕøತಿಕ ವೈಶಿಷ್ಟ್ಯತೆಯ ಅಧ್ಯಯನಕ್ಕೆ ಮುಖ್ಯ ಆಧಾರವಾಗಲಿದೆ ಎಂದು ಹೇಳಿದರು.

ಸವದತ್ತಿ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಚಾರ್ಯ ವೈ.ಎಂ. ಯಾಕೊಳ್ಳಿ ಕೃತಿ ಪರಿಚಯಿಸಿದರು. ಸಮಾರಂಭದಲ್ಲಿ ಕೃತಿಕಾರರಾದ ಬಿ.ಎ. ಜಂಬಗಿ, ವ್ಹಿ..ಎಸ್. ಮಾಳಿ, ಸಿದ್ದಣ್ಣ ಉತ್ನಾಳ, ಗುಡಸಿ, ಘನಶ್ಯಾಮ ಭಾಂಡಗೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum