Belagavi News In Kannada | News Belgaum

ವೃತ್ತಿ ರಂಗಭೂಮಿಯ ಕಲಾವಿದರಿಂದ ಕಂಬನಿ

🌐 Belgaum News :
ಅಥಣಿ: ಕನ್ನಡ ನಾಡಿನ ಹೆಮ್ಮೆಯ ನಟ,ಪುನೀತರಾಜಕುಮಾರ ಅವರ ಅಕಾಲಿಕ ನಿಧನಕ್ಕೆ ರಾಜು ತಾಳಿಕೋಟಿ ಒಡೆತನದ ಶ್ರೀ ಗುರು ಖಾಸ್ಗತೇಶ್ವರ ನಾಟಕ ಕಂಪನಿಯ ಕಲಾವಿದರು ಒಂದು ದಿನದ ಪ್ರದರ್ಶನ ರದ್ದುಗೊಳಿಸಿ ಅಗಲಿದ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಸಂಚಾಲಕಿ ಪ್ರೇಮಾ ತಾಳಿಕೋಟಿ ರಾಜಕುಮಾರ ಅವರ ಬಳಿಕ ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತ ನಟ ಕನ್ನಡದ ಮೇರುನಟ ಪುನೀತರಾಜಕುಮಾರ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ಆದ ತುಂಬಲಾರದ ನಷ್ಟವಾಗಿದೆ.ರಾಜ್ಯಾದ್ಯಂತ ಹಲವೆಡೆ ವೃದ್ದಾಶ್ರಮ,ಅನಾಥಾಶ್ರಮ,ಮತ್ತು ಉಚಿತ ಶಾಲೆಗಳನ್ನು ನಡೆಸುವ ಮೂಲಕ ನಟ ಪುನೀತರಾಜಕುಮಾರ ಮಾದರಿಯಾಗಿದ್ದರು.
ಅವರ ಕಲೆಯ ಮೂಲಕ ಕನ್ನಡಿಗರ ಮನದಲ್ಲಿ ಅವರು ಅಚ್ಚಳಿಯದೆ ಉಳಿಯುತ್ತಾರೆ.ಕನ್ನಡ ನಾಡಿನಲ್ಲಿ ಅವರ ಹೆಸರು ಅಜರಾಮರವಾಗಿ ಉಳಿಯುತ್ತದೆ.ಅವರ ನಯ ವಿನಯ ಮತ್ತು ಸೃಜನಶೀಲತೆ ಮತ್ತೊಬ್ಬರಿಗೆ ಮಾದರಿಯಾಗಲಿದೆ.ನಲವತ್ತಾರನೆ ವಯಸ್ಸಿನಲ್ಲಿ ನಮ್ಮನ್ನು ಅವರು ಅಗಲಿದ್ದು ತೀವ್ರ ಆಘಾತವನ್ನು ಉಂಟುಮಾಡಿದೆ.ಆದ್ದರಿಂದ  ವೃತ್ತಿರಂಗಭೂಮಿಯ ಕಲಾವಿದರು ಇಂದು ನಾಟಕ ಪ್ರದರ್ಶನ ರದ್ದುಗೊಳಿಸಿ ಅವರ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇವೆ ಎಂದರು.
ಈ ವೇಳೆ ಕಲಾವಿದರಾದ ಭದ್ರಿ ಗೋಕಾಕ,ಅಂಜನಕುಮಾರ ಚಿತ್ರದುರ್ಗ,ಪಾಪು ಪ್ರೀಯಾ,ಚೈತ್ರಾ ಕುಂದಾಪುರ, ಭೀಮಾಶಂಕರ ಪಾಟೀಲ, ಆನಂದ ಮುಧೋಳ,ಕಿಟ್ಟು ಉಡುಪಿ,ಪ್ರವೀಣ ಗೋಕಾಕ,ದಾನೇಶ ಗದಗ,ಕುಮಾರ ಶೆಡ್ಲಿಗೇರಿ,ಮುನ್ನಾ ಕುಕನೂರ ಸೇರಿದಂತೆ ಹಲವು ಕಲಾವಿದರು ಉಪಸ್ಥಿತರಿದ್ದರು
📱 Read Top News, Belgaum News Updates, Belagavi News in Kannada, Latest News on News Belgaum