Belagavi News In Kannada | News Belgaum

ಕರವೇ ಕಾರ್ಯಕರ್ತರಿಂದ ನಟ ಪುನೀತ್‌ಗೆ ಶ್ರದ್ಧಾಂಜಲಿ

🌐 Belgaum News :
ಅಥಣಿ: ಕನ್ನಡ ನಾಡಿನ ಮೇರು ನಟ,ಪವರ ಸ್ಟಾರ್ ಪುನೀತ ರಾಜಕುಮಾರ ಅಕಾಲಿಕ ನಿಧನಕ್ಕೆ ಅಥಣಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡ ಬಣ) ಕಾರ್ಯಕರ್ತರು,
ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು.
 ಈ ವೇಳೆ ಕರವೇ ತಾಲೂಕಾಧ್ಯಕ್ಷ  ಬಸನಗೌಡ ಬಮನಾಳ ಮಾತನಾಡಿ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಪುನೀತ ರಾಜಕುಮಾರ ಅವರು ಅಕಾಲಿಕ ನಿಧನ ಹೊಂದಿರುವದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ರಾಷ್ಟ್ರ ಮಟ್ಟದ ಮತ್ತು ರಾಜ್ಯ ಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದ  ಅವರು ತಮ್ಮ ೪೬ನೇ ವಯಸ್ಸಿನಲ್ಲಿಯೇ ನಿಧನ ಹೊಂದಿರುವದು ನಾಡಿನ ಜನತೆಗೆ ಮತ್ತು ಅವರ ಅಭಿಮಾನಿಗಳಿಗೆ ಅತ್ಯಂತ ದುಃಖದ ಸಂಗತಿಯಾಗಿದೆ.ಅವರು ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಮತ್ತು ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ಈ ವೇಳೆ ಅಥಣಿ ಪಿ ಎಸ್ ಐ ಕುಮಾರ ಹಾಡಕಾರ ಮಾತನಾಡಿ ನಟ ಪುನೀತ್ ರಾಜಕುಮಾರ ಅವರು ತಮ್ಮ ನಲವತ್ತಾರನೆ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದಾರೆ. ಕನ್ನಡ ಚಿತ್ರರಂಗದ ಹೆಸರಾಂತ ನಟನನ್ನು ಕಳೆದುಕೊಂಡು ಅವರ ಅನೇಕ ಅಭಿಮಾನಗಳಿಗೆ ದುಃಖವಾಗಿದೆ.ಅವರ ಸಿನೆಮಾಗಳನ್ನು ನೋಡಿ ಎಷ್ಟೊ ಜನ ಐಎಎಸ್,ಐಪಿಎಸ್ ನಂತಹ ಹುದ್ದೆ ಸೇರಲು ಪ್ರೇರಣೆ ಸಿಕ್ಕಿತ್ತು.ಅವರ ಸಿನೆಮಾಗಳು ಸಾಮಾಜಿಕ ಕಳಕಳಿಯಿಂದ ಕೂಡಿರುತ್ತಿದ್ದವಲ್ಲದೆ ಇಡೀ ಕುಟುಂಬದ ಜನರು ಒಟ್ಟಿಗೆ ಕುಳಿತು ನೋಡುವಂತೆ ಇದ್ದವು. ಇಂತಹ ಉತ್ತಮ ನಟನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಈ ವೇಳೆ ಸಾಮಾಜಿಕ ಹೋರಾಟಗಾರ ದೀಪಕ ಶಿಂಧೆ ಮಾತನಾಡಿ ನಟ ಪುನಿತ್ ಅವರು ಬಾಲ್ಯದಲ್ಲಿ ತಮ್ಮ ತಂದೆ ಡಾ.ರಾಜಕುಮಾರ ಅವರ ಜೊತೆಗೆ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ.ಹತ್ತಾರು ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡಿದ್ದ ಅತ್ಯುತ್ತಮ ನಟನ ಅಕಾಲಿಕ ನಿಧನದಿಂದ ಚಿತ್ರರಂಗವನ್ನು ಬಡವಾಗಿಸಿದೆ.ಕನ್ನಡ ಚಿತ್ರರಂಗದ ಜೊತೆಗೆ ಕನ್ನಡಿಗರಿಗೆ ಆದ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ಸಲ್ಲಿಸಿದರು
ಈ ವೇಳೆ ಕರವೇ ಕಾರ್ಯಕರ್ತರು,ಹಾಗೂ ಅಭಿಮಾನಿಗಳು ನಟ ಪುನೀತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಿದರು.
ಈ ವೇಳೆ ಕರವೇ ನಾರಾಯಣ ಗೌಡ ಬಣದ ಕಾರ್ಯಕರ್ತರು,ಮತ್ತು  ದಿಗ್ವಿಜಯಸಿಂಗ ಪವಾರ ದೇಸಾಯಿ, ಸುನೀಲ ಸಂಕ, ಮಹಂತೇಶ್ ಬಾಡಗಿ,ಶಿವಾನಂದ ಸೌದಾಗರ,ಮಂಜು ಹೊಳಿಕಟ್ಟಿ,ಪ್ರಕಾಶ ಕಾಂಬಳೆ,ರಾಕೇಶ್ ಮೈಗೂರ,ಶಂಕರ,ಸಂಜು ಮಾಳವ್ವಗೋಳ,ಪ್ರಕಾಶಪಾಟೀಲ,ಶಬ್ಬೀರ ಸಾತಬಚ್ಚೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
📱 Read Top News, Belgaum News Updates, Belagavi News in Kannada, Latest News on News Belgaum