Belagavi News In Kannada | News Belgaum

ನಟ ಪುನೀತ್​ಗೆ ಹೃದಯಾಘಾತ ಬೆನ್ನಲ್ಲೇ ಬೆಚ್ಚಿಬಿದ್ದ ಸಿಟಿ ಜನ: ಹಾರ್ಟ್​ ಚೆಕಪ್​ಗೆ ಆಸ್ಪತ್ರೆಗೆ ದೌಡು

🌐 Belgaum News :

ಬೆಂಗಳೂರು: ಖ್ಯಾತ ನಟ ಪುನೀತ್ ರಾಜ್​ಕುಮಾರ್​ ಅವರಿಗೆ ಹೃದಯಾಘಾತವಾಗಿ ಸಡನ್​ ಡೆತ್​ ಸಂಭವಿಸಿದ್ದರಿಂದ ಸಿಟಿ ಜನರು ಬೆಚ್ಚಿ ಬಿದಿದ್ದಾರೆ.

ಇದರಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ತಪಾಸಣೆ, ಚಿಕಿತ್ಸೆಗೆ ಬರುತ್ತಿರುವ ಜನರ ಸಂಖ್ಯೆ ಏರುಗತಿಯಲ್ಲಿದೆ. ನಟ ಪುನೀತ್ ನಿಧನದಿಂದ ಭಯ ಬಿದ್ದಿರೊ ಸಿಲಿಕಾನ್ ಸಿಟಿ ಜನರು ಆರೋಗ್ಯದ ತಪಾಸಣೆಗೆ ಹೃದಯ ಚಿಕಿತ್ಸೆ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ.

ಇದೇ ವೇಳೆ ಇಷ್ಟು ದಿನ ವ್ಯಾಯಾಮ ಕಸರತ್ತು ಮಾಡಿಕೊಂಡಿರುತ್ತಿದ್ದ ಜನರೂ ಜಿಮ್​ಗಳಿಂದ ವಿಮುಖರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಸಣ್ಣಪುಟ್ಟ ಹೃದಯ ಸಮಸ್ಯೆ ಇರುವವರು ಸಹ ಹೃದಯ ಚಿಕಿತ್ಸೆಗೆಂದು ಬರ್ತಿದ್ದಾರೆ. ಜಯದೇವ ಆಸ್ಪತ್ರೆಯ ಓಪಿಡಿಯಲ್ಲಿ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ದಿಢೀರ್ ಏರಿಕೆಯಾಗಿದೆ.

ಯುವ ಜನತೆಗೆ ಹೆಚ್ಚಾಗಿ ಕಾಡ್ತಿದ್ಯಾ ಹೃದಯ ಸಂಬಂಧಿ ಸಮಸ್ಯೆ? ಜಿಮ್​ನಲ್ಲಿ ಹೆವಿ ವರ್ಕೌಟ್ ಗೀಳಿನಿಂದ ಜೀವಕ್ಕಿದ್ಯಾ ಗಂಡಾಂತರ? ಸಿಕ್ಸ್ ಪ್ಯಾಕ್ ಮುಖ್ಯನಾ.. ಬಾಡಿ ಫಿಟ್ ಆಗಿರೋದು ಮುಖ್ಯನಾ? ಆರೋಗ್ಯವಂತರಾಗಿರಲು ವರ್ಕೌಟ್ ಎಷ್ಟಿರಬೇಕು.. ಹೇಗಿರಬೇಕು..? ಸ್ವಲ್ಪ ಎಚ್ಚರ ತಪ್ಪಿದ್ರು ‘ಹೃದಯ’ದ ಮಾತೇ ನಿಂತೋಗುತ್ತಾ..? ಎಂದು ಜನ ತಮ್ಮ ತಮ್ಮಲ್ಲೇ ಪಿಸುಗುಟ್ಟುತ್ತಿದ್ದಾರೆ.//////

📱 Read Top News, Belgaum News Updates, Belagavi News in Kannada, Latest News on News Belgaum