Belagavi News In Kannada | News Belgaum

ಸಚಿವ ಗೋವಿಂದ ಕಾರಜೋಳ ಅವರಿಂದ ಗೃಹ ರಕ್ಷಕ ದಳದ ಸಿಬ್ಬಂದಿಗೆ ಸಾಧಕರ ಸನ್ಮಾನ

🌐 Belgaum News :

 

ಬೆಳಗಾವಿ: ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷದ ಕರ್ನಾಟಕ ರಾಜ್ಯೋತ್ಸವ ಸರಳ ಹಾಗೂ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ ವತಿಯಿಂದ ನಗರದ ಸಿ.ಪಿ.ಎಡ್ ಮೈದಾನದಲ್ಲಿ ಸೋಮವಾರ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಧ್ವಜಾರೋಹಣ, ಪರೇಡ್, ಹಾಗೂ ಭಾಷಣ ಮೂಲಕ ಕಾರ್ಯಕ್ರಮವು ನಡೆಯಿತು. ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಅಧ್ಯಕ್ಷತೆ ವಹಿಸಿದ್ದರು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮಾಡಲಾಯಿತು. ಬೆಳಗಾವಿ ಜಿಲ್ಲೆಯ ಪತ್ರಕರ್ತರು, ಕನ್ನಡಪರ ಹೋರಾಟಗಾರರು, ಹಾಗೂ ವಿವಿಧ ಇಲಾಖೆಯಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಗೃಹರಕ್ಷಕ ದಳದ ಸಿಬ್ಬಂದಿಯಾದ ಹೊಳೆಪ್ಪ ನೇಸರಗಿ ಅವರನ್ನು ಕೂಡ ಜಿಲ್ಲಾಡಳಿತ ಸಾಧಕರೆಂದು ಪರಿಗಣಿಸಿ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಇವರಿಂದ ಸನ್ಮಾನ ಮಾಡಲಾಯಿತು.
ಗೃಹ ರಕ್ಷಕದಳದ ಕಮಾಂಡೆಂಟ್ ಕಿರಣ್ ರುದ್ರ ನಾಯಕ, ಘಟಕ ಅಧಿಕಾರಿ ಅನೀಲ ಶಿಂಗೆನ್ನವರ, ಗೋಕಾಕ್ ಘಟಕಾಧಿಕಾರಿ ಪರಸು ಶೆಟ್ಟಿ, ಬೆಳಗಾವಿ ಘಟಕಾಧಿಕಾರಿ ಎನ್. ಎಸ್ ಪಾಟೀಲ್, ಅಂಕಲಗಿ ಘಟಕ ಅಧಿಕಾರಿ ಜೈಪಾಲ ಅತ್ತುಗೊಳ ಅಭಿನಂದಿಸಿದರು.

📱 Read Top News, Belgaum News Updates, Belagavi News in Kannada, Latest News on News Belgaum