Belagavi News In Kannada | News Belgaum

ಜಿಯೋ ನೆಕ್ಸ್ಟ್ 1,999 ಸುಲಭ ಇಎಂಐನಲ್ಲಿ ದೀಪಾವಳಿಯಿಂದ ಲಭ್ಯ

🌐 Belgaum News :

ಬೆಳಗಾವಿ :ಜಿಯೋ ಮತ್ತು ಗೂಗಲ್ ಸಹಯೋಗದಲ್ಲಿ ಜಂಟಿಯಾಗಿ ವಿನ್ಯಾಸಗೊಳಿಸಲಾದ ಬಹುನಿರೀಕ್ಷಿತ ಮೇಡ್-ಫಾರ್-ಇಂಡಿಯಾ ಸ್ಮಾರ್ಟ್‍ಫೆÇೀನ್ ಆದ ಜಿಯೋಫೆÇೀನ್ ನೆಕ್ಸ್ಟ್ ಇದೇ ದೀಪಾವಳಿಯಿಂದ ಅಂಗಡಿಗಳಲ್ಲಿ ಲಭ್ಯವಿರಲಿದ್ದು, ದೇಶದಲ್ಲಿ ಹಬ್ಬದ ಮೆರುಗನ್ನು ಹೆಚ್ಚಿಸಲಿದೆ ಎಂದು ಜಿಯೋ ಘೋಷಿಸಿವೆ.
1,999 ಪ್ರಾರಂಭಿಕ ಬೆಲೆ ಹಾಗೂ ಉಳಿದ ಮೊತ್ತವನ್ನು 18/24 ತಿಂಗಳುಗಳಲ್ಲಿ ಇಎಂಐನಲ್ಲಿ ಸುಲಭ ಮೂಲಕ ಪಾವತಿಸುವ ಆಯ್ಕೆಯೊಂದಿಗೆ ಇದು ಪ್ರಪಂಚದಾದ್ಯಂತ ಅತ್ಯಂತ ಕೈಗೆಟುಕುವ ಬೆಲೆಯ ಸ್ಮಾರ್ಟ್‍ಫೆÇೀನ್ ಆಗಲಿದೆ. ಈ ವರ್ಗದಲ್ಲಿರುವ ಸಾಧನಕ್ಕಾಗಿ ಇದೇ ಮೊದಲ ಬಾರಿಗೆ ಈ ರೀತಿಯ ಅನನ್ಯ ಹಣಕಾಸು ಆಯ್ಕೆಯನ್ನು ಪರಿಚಯಿಸಲಾಗುತ್ತಿದ್ದು, ಆ ಮೂಲಕ ಹೆಚ್ಚಿನ ಸಂಖ್ಯೆಯ ಬಳಕೆದಾರರಿಗೆ ಇದರ ಪ್ರಯೋಜನವನ್ನು ವಿಸ್ತರಿಸಲಾಗುತ್ತಿದೆ. ಈ ವರ್ಗದ ಯಾವುದೇ ಫೆÇೀನ್‍ನಲ್ಲಿ ಅಭೂತಪೂರ್ವವೆನಿಸುವ ವೈಶಿಷ್ಟ್ಯಗಳೊಂದಿಗೆ, ದೇಶಾದ್ಯಂತ ರಿಲಯನ್ಸ್ ರಿಟೇಲ್‍ನ ವ್ಯಾಪಕವಾದ ಜಿಯೋಮಾರ್ಟ್ ಡಿಜಿಟಲ್ ರಿಟೇಲ್ ಲೊಕೇಶನ್‍ಗಳಲ್ಲಿ ಜಿಯೋಫೆÇೀನ್ ನೆಕ್ಸ್ಟ್ ಲಭ್ಯವಿರಲಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಡಿ ಅಂಬಾನಿ, ಕೋವಿಡ್ ಜಾಗತಿಕ ಸೋಂಕಿನಿಂದ ಉಂಟಾದ ಪ್ರಸ್ತುತ ಜಾಗತಿಕ ಸಪ್ಲೈ ಚೈನ್ ಸವಾಲುಗಳ ನಡುವೆಯೂ, ಭಾರತೀಯ ಗ್ರಾಹಕರಿಗೆ ಈ ಅದ್ಭುತ ಸಾಧನವನ್ನು ಹಬ್ಬದ ಋತುವಿನಲ್ಲೇ ತಲುಪಿಸುವಲ್ಲಿ ಗೂಗಲ್ ಮತ್ತು ಜಿಯೋ ತಂಡಗಳು ಯಶಸ್ವಿಯಾಗಿರುವುದು ನನಗೆ ಖುಷಿ ತಂದಿದೆ. ಡಿಜಿಟಲ್ ಕ್ರಾಂತಿಯ ಶಕ್ತಿಯಲ್ಲಿ ನನಗೆ ಯಾವಾಗಲೂ ದೃಢ ನಂಬಿಕೆಯಿದೆ. ಜಿಯೋಫೆÇೀನ್ ನೆಕ್ಸ್ಟ್‍ನ ಅನೇಕ ಸಮೃದ್ಧ ವೈಶಿಷ್ಟ್ಯಗಳ ಪೈಕಿ, ನನ್ನನ್ನು ಹೆಚ್ಚು ಪ್ರಭಾವಿಸಿರುವುದು ಮತ್ತು ಸಾಮಾನ್ಯ ಭಾರತೀಯರನ್ನು ಹೆಚ್ಚು ಸಶಕ್ತಗೊಳಿಸುವುದು ಹಾಗೂ ಅವರ ಡಿಜಿಟಲ್ ಪ್ರಯಾಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಹಾಗೂ ಭಾರತ’ ಪ್ರಗತಿ ಓಎಸ್‍ನ ಜೊತೆಗೆ ಡಿಜಿಟಲ್ ಪ್ರಗತಿಯನ್ನು ಸಾಧಿಸಲಿದೆ ಎಂದರು.

 

📱 Read Top News, Belgaum News Updates, Belagavi News in Kannada, Latest News on News Belgaum