Belagavi News In Kannada | News Belgaum

ರಾಜ್ಯೋತ್ಸವ ಆಚರಣೆ ಕುರಿತು ತಿಳಿಸಿ ಕೊಟ್ಟ: ಜಯ ಮೃತ್ಯುಂಜಯ ಸ್ವಾಮಿಜಿ

🌐 Belgaum News :

ಬೆಳಗಾವಿ: ನಗರದ ಸಾರಥಿನಗರದಲ್ಲಿ
ನಗರದ ರಹವಾಸಿ ಗಳಿಂದ ಕರ್ನಾಟಕ
ರಾಜ್ಯೋತ್ಸವ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮ
ಆಶ್ರಯ ಕಾಲೋನಿ ಸಾರಥಿ ನಗರ ಪೆÇಲೀಸ್
ಕಾಲೋನಿ ಏರಿಗೇಶನ್ ಕಾಲೋನಿ ವಿದ್ಯಾನಗರ
ಡಿ ಗ್ರುಪ್ ಕಾಲೋನಿ ಪ್ರವಾಸಿಗಳಿಂದ ಈ
ವರ್ಷ ಪ್ರಥಮವಾಗಿ ಪ್ರಥಮ ವರ್ಷವನ್ನಾಗಿ
ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಿದರು.
ಮೊದಲಿಗೆ ದಿವಂಗತ
ಪುನೀತ್ ರಾಜಕುಮಾರ್ ಹಾಗೂ ಕನ್ನಡ
ಮೌನೇಶ್ವರಿ ಫೆÇೀಟೋ ಪೂಜೆ ಮುಖಾಂತರ
ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಿದರು
ಈ ಕಾರ್ಯಕ್ರಮಕ್ಕೆ
ಜಯ ಮೃತ್ಯುಂಜಯ ಸ್ವಾಮಿಗಳು
ಕೂಡಲಸಂಗಮ ಆಗಮಿಸಿದ್ದರು ಅವರು
ಮಾತನಾಡಿ ಭಾಷಾವಾರು ಆಧಾರದ ಮೇಲೆ
ರಾಜ್ಯಗಳ ರಚನೆಯಾದವು.
ಬಾಂಬೆ, ಮದ್ರಾಸ್, ಹೈದರಾಬಾದ್
ಭಾಗಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ
ಮಾತನಾಡುವ ಪ್ರಾಂತ್ಯಗಳನ್ನು ಒಗ್ಗೂಡಿಸಿ
1956 ರ ನವೆಂಬರ್ 1 ರಂದು ಮೈಸೂರು
ರಾಜ್ಯದ ರಚನೆಯಾಯಿತು. ಆ ನೆನಪಿಗಾಗಿ
ಪ್ರತಿವರ್ಷ ನವೆಂಬರ್ 1 ರಂದು ಕನ್ನಡ
ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ
ಆಚರಿಸುತ್ತಾ ಬಂದಿದ್ದೇವೆ.
ಆನಂತರ ನವೆಂಬರ್ 1, 1973
ರಂದು ಮೈಸೂರು ರಾಜ್ಯದ ಹೆಸರನ್ನು
ಬದಲಿಸಿ “ಕರ್ನಾಟಕ” ಎಂದು ನಾಮಕರಣ
ಮಾಡಲಾಯಿತು.
ಬೆಳಗಾವಿ ಎಂದರೆ ರಾಜ್ಯೋತ್ಸವ
ಹಬ್ಬವನ್ನು ಬೆಳಗಾವಿಯಲ್ಲಿ ಹೆಚ್ಚಾಗಿ
ಆಚರಿಸುತ್ತಾರೆ ಆದರೆ ಈ ಬಾರಿ ನಮ್ಮ ಕನ್ನಡ
ನಟ ನಮ್ಮನ್ನೆಲ್ಲಾ ಅಗಲಿ ಈ ಭೂಮಿಯ
ತಾಯಿ ಮಡಿಲು ಸೇರಿದ್ದಾರೆ ನಮ್ಮನ್ನೆಲ್ಲಾ
ಅಗಲಿ ತಾಯಿಯ ಮಡಿಲು ಸೇರಿದ್ದರಿಂದ
ಸರಳವಾಗಿ ರಾಜ್ಯೋತ್ಸವನ್ನು ಆಚರಿಸಬೇಕಾಗಿದೆ
ಅದಕ್ಕಾಗಿ ನಾವೆಲ್ಲರೂ ಶಾಂತರೀತಿಯಿಂದ
ಸರಳವಾಗಿ ಕಾರ್ಯಕ್ರಮವನ್ನು ಆಚರಿಸೋಣ
ಎಂದು ಅವರು ಹೇಳಿದರು
ಕಾರ್ಯಕ್ರಮದಲ್ಲಿ ಶಾಸಕರಾದ ಲಕ್ಷ್ಮಿ
ಹೆಬ್ಬಾಳ್ಕರ್ ಪುತ್ರ ಮುರನಾಳ ಹಾಗೂ
ನಗರದ ಹಿರಿಯರು ಕನ್ನಡ ಅಭಿಮಾನಿಗಳು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum