Belagavi News In Kannada | News Belgaum

ಸತೀಶ ಜಾರಕಿಹೊಳಿಯವರ ಹುಟ್ಟೂರಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಶ್ರೀನಿವಾಸ್ ಮಾನೆಯವರ ಗೆಲುವಿನ ಸಂಭ್ರಮಾಚರಣೆ

🌐 Belgaum News :

ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಹುಟ್ಟೂರು ಗೋಕಾಕನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾನಗಲ್ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆಯವರ ಗೆಲುವಿನ ಸಂಭ್ರಮಾಚರಣೆ ಮಾಡಿದರು.

ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಸೇರಿದ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಕಾಂಗ್ರೆಸ್ ಹಾಗೂ ಸತೀಶ ಜಾರಕಿಹೊಳಿಯವರ ಪರ ಜೈಘೋಷಗಳನ್ನು ಕೂಗಿದರು. ಸಿಹಿ ಹಂಚಿ ಸಂಭ್ರಮಿಸಿದರು.

ಮುಖಂಡರಾದ ವಿವೇಕ ಜತ್ತಿ, ಇಮ್ರಾನ್ ತಪಕೀರ್, ರೆಹಮಾನ ಮೊಕಾಶಿ, ಪ್ರವೀಣ ಗುಡ್ಡಾಕಾಯು, ಸುನೀಲ ಕೊಟಬಾಗಿ, ಮುನೀರ ಖತೀಬ್, ಮುಸ್ತಪಾ ಪುಲ್ತಾಂಬೆ, ಕಲ್ಪನಾ ಜೋಶಿ, ರವಿ ನಾವಿ, ಶಬ್ಬೀರ್ ಮುಜಾವರ್, ಸುನೀಲ ಗುಡ್ಡಾಕಾಯು ಸೇರಿ ನೂರಾರು ಕಾರ್ಯಕರ್ತರು ಹಾಜರಿದ್ದರು. /////

📱 Read Top News, Belgaum News Updates, Belagavi News in Kannada, Latest News on News Belgaum