Belagavi News In Kannada | News Belgaum

ಫಲ ನೀಡಿದ ಬೈ ಎಲೆಕ್ಷನ್: ಎರಡು ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡ ಜೆಡಿಎಸ್‍

🌐 Belgaum News :

ಬೆಂಗಳೂರು: ರಾಜ್ಯ ಪ್ರಾದೇಶಿಕ ಪಕ್ಷವಾದ  ಜೆಡಿಎಸ್‍ ಗೆ   ಹಾನಗಲ್,   ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸೋಲಾಗಿದ್ದು, ಭಾರೀ ನಿರಾಸೆಯನ್ನುಂಟುಮಾಡಿದೆ.ಒಂದು ಕ್ಷೇತ್ರದಲ್ಲಾದರೂ  ಜೆಡಿಎಸ್‍ ಪೈಟ್ ಆಗಬೇಕಿತ್ತು  ಎಂದು ನಾಯಕರು ಅಸಮಾಧಾನ ಹೊರಹಾಕಿದ್ದಾರೆ.

ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ನಿರೀಕ್ಷಿತ ಮತಗಳು ಜೆಡಿಎಸ್‍ಗೆ ಲಭಿಸಿಲ್ಲ. ಹೀಗಾಗಿ ಜೆಡಿಎಸ್ ನಾಯಕರಿಗೆ ಭಾರೀ ನಿರಾಸೆಯಾಗಿದೆ.

ಹಾನಗಲ್ ಕ್ಷೇತ್ರದಲ್ಲಿ ನಿಯಾಜ್ ಶೇಖ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದರು. ಸಿಂಧಗಿ ಕ್ಷೇತ್ರದಲ್ಲಿ ಅಂಗಡಿ ನಾಜಿಯಾ ಜೆಡಿಎಸ್‍ನಿಂದ ಕಣಕ್ಕಿಳಿದಿದ್ದರು. ಹಾನಗಲ್‍ಗಿಂತ ಹೆಚ್ಚಾಗಿ ಸಿಂಧಗಿಯಲ್ಲಿ ಹೆಚ್ಚಿನ ಶ್ರಮ ವಹಿಸಿ ಪ್ರಚಾರ ಮಾಡಲಾಗಿತ್ತು.   ಜೆಡಿಎಸ್ ಅನುಸರಿಸಿದ ಚುನಾವಣಾ ತಂತ್ರ ನಿರೀಕ್ಷಿತ ಫಲ ನೀಡಲಿಲ್ಲ. ಎರಡೂ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜೆಡಿಎಸ್ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದೆ ಎಂಬ ಕಾಂಗ್ರೆಸ್ ಆರೋಪವನ್ನು ಜೆಡಿಎಸ್ ನಾಯಕರು ಅಲ್ಲಗಳೆದರು.//////

📱 Read Top News, Belgaum News Updates, Belagavi News in Kannada, Latest News on News Belgaum