Belagavi News In Kannada | News Belgaum

ಯುವರತ್ನ ಪುನೀತ್‌ ಸಮಾಧಿಗೆ ಕುಟುಂಬಸ್ಥರಿಂದ ಹಾಲು-ತುಪ್ಪ ಶಾಸ್ತ್ರ

🌐 Belgaum News :

ಬೆಂಗಳೂರು : ದೊಡ್ಡ ಮನೆಯ ಮಗ ಪುನೀತ್‌ ರಾಜ್‌ ಕುಮಾರ್‌ ನಿಧನರಾಗಿ ಇಂದಿಗೆ 5ನೇ ದಿನ. ಈ ಹಿನ್ನಲೆಯಲ್ಲಿ ಪುನೀತ್‌ ರಾಜ್‌ ಕುಮಾರ್‌ ಅವರ ಸಮಾಧಿ ಇರುವಂತ ಕಂಠೀರವ ಸ್ಟುಡಿಯೊಗೆ ತೆರಳಿ ಕುಟುಂಬಸ್ಥರಿಂದ 5ನೇ ದಿನದ ಹಾಲು- ತುಪ್ಪ ಬಿಡುವ ಶಾಸ್ತ್ರ ನೇರವೇರಲಿದೆ.

ಕಳೆದ ಶುಕ್ರವಾರದಂದು ಹೃದಯಾಘಾತದಿಂದ ಕನ್ನಡದ ಯುವ ರತ್ನ ಅಪ್ಪು ನಿಧನರಾದರು. ನಟ ಪುನೀತ್ ರಾಜ್‌ ಕುಮಾರ್‌ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಿ ನಂತರ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಇದಾದ ಬಳಿಕ ನಡೆಯುವಂತಹ ಶಾಸ್ತ್ರ ಹಾಲು-ತುಪ್ಪ ಬಿಡುವಂತ ಶಾಸ್ತ್ರ. ಈ ಶಾಸ್ತ್ರವನ್ನು ನಿಧನರಾದ 5ನೇ ದಿನಕ್ಕೆ ಮಾಡುವುದರಿಂದ ಇಂದು ಈ ಹಾಲು-ತುಪ್ಪ ಬಿಡುವಂತ ಶಾಸ್ತ್ರ ನೆರವೇರಲಿದೆ. ಇದಕ್ಕಾಗಿ ಕಂಠೀರವ ಸ್ಟುಡಿಯೋಗೆ ದೊಡ್ಡ ಮನೆ ಕುಟುಂಬಸ್ತರು ತೆರಳಲಿದ್ದು. ಸಿದ್ಧತೆಯ ಕಾರ್ಯ ನಡೆಯುತ್ತಿದೆ./////

📱 Read Top News, Belgaum News Updates, Belagavi News in Kannada, Latest News on News Belgaum