Belagavi News In Kannada | News Belgaum

ನ್ಯಾಯಾಲಯದ ಮುಂದಿನ ಆದೇಶದ ವರೆಗೂ ಗ್ರಾಮಸ್ಥರು ಸಾಮ್ಯಮ ದಿಂದ ಇರಬೇಕು :ತಹಶೀಲ್ದಾರ್ ಸುಜಾತ

🌐 Belgaum News :

 

ಬೇತಮಂಗಲ:ಸಮೀಪದ ಸುಂದರಪಾಳ್ಯ ಗ್ರಾಪಂಯ ರಾಯಸಂದ್ರ ಗ್ರಾಮದ ಸರ್ವೆ ನಂ 85/4ರಲ್ಲಿನ 1 ಎಕರೆ ಜಮೀನಿನಲ್ಲಿ ಸುಮಾರು 35 ಗುಂಟೆಯನ್ನು ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಗ್ರಾಮಸ್ಥರು ಕಾನೂನು ರೀತಿಯಲ್ಲಿ ಸರ್ವೆ ಮಾಡಿ 35 ಗುಂಟೆ ಜಾಗವನ್ನು ದೇವಾಲಯಗಳಿಗೆ ಗುರುತಿಸಿರುವ ಜಾಗಕ್ಕೆ ನಕಲಿ ದಾಖಲೆಗಳನ್ನು ಸೃಷ್ಠಿಸಿ ನ್ಯಾಯಲಯದಲ್ಲಿ ಪ್ರಕರಣ ದಾಖಲು ಮಾಡುತ್ತಿರುವ ಜಯರಾಮ ರೆಡ್ಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ತಹಶೀಲ್ದಾರ್ ಮಾತನಾಡಿ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಒಬ್ಬ ವಕೀಲರು ಇರುತ್ತಾರೆ ಅವರು ತಮ್ಮ ಗ್ರಾಮದ ದೇವಾಲಯ ಜಮೀನಿನ ವಿವಾದವನ್ನು ನ್ಯಾಯಾಧೀಶ ರಿಗೆ ದಕಲೆಗಳೊಂದಿಗೆ ಕೊಡುತ್ತಾರೆ ಅವಾಗ ಈ ವಿವಾದಕ್ಕೆ ಪರಿಹಾರ ಮುಕ್ತವಾಗುತ್ತದೆ ಮತ್ತು ದೇವಾಲಯಗಳ ಹೆಸರಿನಲ್ಲಿಯೇ ಮುಂದುವರೆಯುವಂತೆ ಮಾಡುವುದಾಗಿ ಭರವಸೆ ಎಂದು ಗ್ರಾಮಸ್ಥರಿಗೆ ವಿವರವಾಗಿ ತಿಳಿಸಿದರು.

ಸರ್ವೆ ನಂ 85/4 ಜಾಗವು 1962ರಿಂದಲ್ಲೂ ದೇವಾಲಯಗಳ ಹೆಸರಿನಲ್ಲಿಯೇ ದಾಖಲೆಗಳು ಬರುತ್ತಿದೆ, ಪ್ರಸ್ತುತ ಸಹ ಪಹಣಿಯಲ್ಲಿ ದೇವಾಲಯದ ಹೆಸರಿನಲ್ಲಿಯೇ ಇದೆ, ಭೂಗಳ್ಳ ಜಯರಾಮರೆಡ್ಡಿ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಗ್ರಾಮಸ್ಥರ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿತ್ತಾ, ಪೊಲೀಸ್ ಠಾಣೆಯಲ್ಲಿ ದೂರು ನೀಡುವುದು, ಗ್ರಾಮಸ್ಥರ ಮೇಲೆ ದಬ್ಬಾಳಿಕೆ ಮಾಡಿ, ಬೆದರಿಕೆ ಹಾಕಿ, ರಾತ್ರಿ ವೇಳೆ ತಾವೇ ಜಾಗದಲ್ಲಿರುವ ಕೋಳಿ ಶೆಡ್‍ಗಳನ್ನು ನಾಶ ಮಾಡಿ ಗ್ರಾಮಸ್ಥರ ಮೇಲೆ ಆರೋಪಗಳ ಮೂಲಕ ಪ್ರಾಣ ಬೆದರಿಕೆ ಹಾಕುತ್ತಿರುವ ಜಯರಾಮ್ ರೆಡ್ಡಿ ವಿರುದ್ಧ ಶೀಘ್ರವಾಗಿ ಕಾನೂನು ಕ್ರಮ ಜರುಗಿಸಿ, ದೇವಾಲಯಗಳ ಆಸ್ತಿಯನ್ನು ಉಳಿಸಬೇಕೆಂದು ಗ್ರಾಮಸ್ಥರು ಮಂಗಳವಾರ ಗ್ರಾಮದಿಂದ ಕೆಜಿಏಫ್ ತಾಲ್ಲೂಕು ಕಚೇರಿ ವರೆಗೂ ಕಾಲ್ನಡಿಗೆಯಲ್ಲಿ ತೆರಳಿ ತಹಸೀಲ್ದಾರ್ ಕಚೇರಿ ಮುಂದೆ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದ ಹಿನ್ನಲೆ ಕೆಜಿಏಫ್ ತಹಸೀಲ್ದಾರ್ ಸುಜಾತ ಅವರು ಸ್ಥಳಕ್ಕೆ ಭೇಟಿ ನೀಡಿ ಕಾಲ್ನಡಿಗೆ ಜಾತವನ್ನು ಕೈಬಿಡಲು ಕೋರಿ ಕಾಲ್ನಡಿಗೆ ಜಾಥಾವನ್ನು ಕೈಬಿಟ್ಟರು, ಪುರತನ ಕಾಲದಿಂದಲ್ಲೂ ದೇವಾಲಯಗಳ ಆಸ್ತಿಯಲ್ಲಿ ಸಂಪ್ರದಾಯಕ ಕಾರ್ಯಕ್ರಮಗಳು ನಡೆಸಿಕೊಂಡು ಬರುತ್ತಿರುವ ಜಾಗವನ್ನು ಯಾರು ಒತ್ತುವರಿ ಮಾಡಿಕೊಳ್ಳದೆ ರಕ್ಷಣೆ ಮಾಡಬೇಕಿರುವ ಜವಾಬ್ದಾರಿ ಎಲ್ಲರ ಮೇಲಿದೆ, ನಾನು ಸಹ ಸರ್ವೆ ನಂ 85/4ರಲ್ಲಿನ 1 ಎರಕೆ ಜಾಗಕ್ಕೆ ಸೂಕ್ತ ಬಂದೋಬಸ್ತು ಮಾಡಿ ದೇವಾಲಯಗಳ ಹೆಸರಿನಲ್ಲಿಯೇ ಮುಂದುವರೆಯುವಂತೆ ಮಾಡುವುದಾಗಿ ಭರವಸೆ ನೀಡಿದ ಮೇಲೆ ಕಾಲ್ನಡಿಗೆ ಜಾತವನ್ನು ಗ್ರಾಮಸ್ಥರು ಕೈಬಿಟ್ಟರು.

ಕಾಲ್ನಡಿಗೆ ಜಾಥಾ ನೇತೃತ್ವವನ್ನು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಆರ್.ಹನುಮಂತಪ್ಪ, ಗ್ರಾಪಂ ಸದಸ್ಯ ಮುನಿಸ್ವಾಮಿ ರೆಡ್ಡಿ, ಗ್ರಾಮಸ್ಥರಾದ ಶ್ರೀನಿವಾಸ್ ರೆಡ್ಡಿ, ಶಿವ ಶಂಕರ್ ರೆಡ್ಡಿ, ಮಧುಸೂಧನ್ ರೆಡ್ಡಿ, ರಾಮಕೃಷ್ಣರೆಡ್ಡಿ, ಚಲಪತಿ, ನಾಗಭೂಷಣ್, ಚಂದ್ರ, ಸುರೇಶ್, ಪ್ರಭಾಕರ್, ವೆಂಕಟೇಶ್, ಚಂಗಪ್ಪ, ಮುನಿರಾಮಪ್ಪ, ಸುಬ್ಬಣ್ಣ, ನಾಗಪ್ಪ, ಸುಬ್ರಮಣಿ, ತಿಪ್ಪಣ್ಣ, ಮುನಿಸ್ವಾಮಿ, ಶ್ರೀನಿವಾಸಪ್ಪ, ಅನಂದ್, ಚಿಕ್ಕವೆಂಕಟರಾಮಪ್ಪ ಸೇರಿದಂತೆ ಗ್ರಾಮದ ಮುಖಂಡರು ವಹಿಸಿದರು.


ರಾಯಸಂದ್ರ ದೇವಾಲಯಗಳ ವಿವಾದ ಸ್ಥಳಕ್ಕೆ ತಹಸೀಲ್ಥಾರ್ ಸುಜಾತ, ಆರ್.ಐ ನಾರಾಯಣಸ್ವಾಮಿ, ಮುನಿವೆಂಕಟಸ್ವಾಮಿ, ಬೇತಮಂಗಲ ವೃತ್ತ ನಿರೀಕ್ಷಕ ವೆಂಕಟೇಶ್, ಜಿಪಂ ಸದಸ್ಯ ಜಯಪ್ರಕಾಶ್ ನಾಯ್ಡು ಗ್ರಾಮಸ್ಥರು ಅಧಿಕಾರಿಗಳು ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum