Belagavi News In Kannada | News Belgaum

ಶೈಕ್ಷಣಿಕವಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ-2021 (ನೀಟ್-2021)ಯಲ್ಲಿ ಅತ್ಯುತ್ತಮ ಸಾಧನೆ

🌐 Belgaum News :

ಬೆಳಗಾವಿ ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ-2021 (ನೀಟ್-2021)ಯಲ್ಲಿ ಅತ್ಯುತ್ತಮ ಸಾಧನೆ ಗೈದಿದ್ದಾರೆ.

2021 ಸಪ್ಟಂಬರ್ ಮಾಹೆಯಲ್ಲಿ ವೈದ್ಯಕೀಯ ಕೋರ್ಸುಗಳಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (ನೀಟ್ – 2021) ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಮಹಮ್ಮದ ಕೈಪ್ ಮುಲ್ಲಾ, 720ಕ್ಕೆ 691 ಅಂಕಪಡೆದು ಅಖಿಲ ಭಾರತ ಮಟ್ಟದಲ್ಲಿ 384ನೇ ರ್ಯಾಂಕ್ ಹಾಗೂ ತನ್ನ ಪ್ರವರ್ಗದಲ್ಲಿ ರಾಷ್ಟ್ರಮಟ್ಟದಲ್ಲಿ 88ನೇ ರ್ಯಾಂಕ್ ಸಂಪಾದಿಸಿ ಕಾಲೇಜಿನ ಪ್ರಶಂಸೆಗೆ ಪಾತ್ರನಾಗಿದ್ದಾನೆ, ಅದೇ ರೀತಿಯಾಗಿ ರಶ್ಮಿ ಜಿ. ಪಾಟೀಲ 665 ಅಂಕ ಪಡೆದು 2039ನೇ ರ್ಯಾಂಕ್, ಮಿಸ್ಬಾ ಪಠಾಣ 662 ಗುಣಗಳನ್ನು ಪಡೆದು 10512ನೇ ರ್ಯಾಂಕ್, ತರುಣ ಕೌಲಗುಡ್ 532 ಅಂಕಪಡೆದು 58848ನೇ ರ್ಯಾಂಕ್ ಮತ್ತು ಸೋಹಮ್ ಚಿಪ್ರೆ 532 ಅಂಕಪಡೆದು 59177ನೇ ರ್ಯಾಂಕ್‍ಗಳನ್ನು ಅಖಿಲ ಭಾರತ ಮಟ್ಟದಲ್ಲಿ ಪಡೆದು ಕಾಲೇಜಿನ ಗೌರವಕ್ಕೆ ಪಾತ್ರರಾಗಿ ಮುಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ.

ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಎಲ್ಲ ನಿರ್ದೇಶಕರು, ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ. ಎಲ್.ವ್ಹಿ. ದೇಸಾಯಿ ಮತ್ತು ಸದಸ್ಯರು, ಆಜೀವ ಸದಸ್ಯರಾದ ಶ್ರೀ. ಎಸ್.ಜಿ. ನಂಜಪ್ಪನವರ ಅವರು, ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ. ವ್ಹಿ.ಸಿ. ಕಾಮಗೊಳ, ಬೋಧಕ – ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಭಾವಚಿತ್ರದಲ್ಲಿ: ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳೊಂದಿಗೆ ಪ್ರಾಚಾರ್ಯರು, ಉಪಪ್ರಾಚಾರ್ಯರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum