Belagavi News In Kannada | News Belgaum

ಡೆಸ್ಕ್-ಬೆಂಚ್‍ಗಳ ಒದಗಣೆ – ಸಾಗಾಟವಾಹನಕ್ಕೆಹಸಿರು ನಿಶಾನೆ

🌐 Belgaum News :

 

ಧರ್ಮಸ್ಥಳ :ಶ್ರೀ ಕ್ಷೇತ್ರ ಧರ್ಮಸ್ಥಳಗ್ರಾಮಾಭಿವೃದ್ಧಿಯೋಜನೆಯ ಸಮುದಾಯಅಭಿವೃದ್ಧಿಕಾರ್ಯಕ್ರಮದ ವತಿಯಿಂದ ಬೆಳಗಾವಿ, ಹಾವೇರಿ ಹಾಗೂ ಉತ್ತರಕನ್ನಡಜಿಲ್ಲೆಯ 311 ಶಾಲೆಗಳಿಗೆ ಡೆಸ್ಕ್-ಬೆಂಚ್‍ಒದಗಣೆಯಸಾಗಾಟವಾಹನಕ್ಕೆಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದಬಿ.ಸಿ. ನಾಗೇಶ್‍ರವರು ಧರ್ಮಸ್ಥಳದಲ್ಲಿ ಇಂದುಹಸಿರು ನಿಶಾನೆ ತೋರಿಸಿದರು. ಈ ಸಂದರ್ಭದಲ್ಲಿ ಮಾತನಾಡಿರುವಅವರು ಪೂಜ್ಯ ಹೆಗ್ಗಡೆಯವರು ಸಾಮಾಜಿಕ ಕಳಕಳಿಯಿಂದ ಸರಕಾರದಜೊತೆ ಕೈ ಜೋಡಿಸಿ ಅನೇಕ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುತ್ತಾರೆ.

 

ಸಮಾಜದಅಭಿವೃದ್ಧಿಯಲ್ಲಿಎಲ್ಲೆಲ್ಲಿಕೊರತೆಯಿದೆಯೋಅಲ್ಲಲ್ಲಿ ಸಹಾಯಹಸ್ತಚಾಚುತ್ತಾ ಸರಕಾರವೂ ಮಾಡಲಾಗದ ಕೆಲಸಗಳನ್ನು ಮಾಡಿ ಮಾದರಿಯಾಗಿರುತ್ತಾರೆ. ಇದರಂತೆಇಂದು ಬೆಳಗಾವಿ, ಹಾವೇರಿ ಮತ್ತುಉತ್ತರಕನ್ನಡಜಿಲ್ಲೆಯ 311 ಶಾಲೆಗಳಿಗೆ 2370 ಜೊತೆಡೆಸ್ಕ್-ಬೆಂಚ್‍ಗಳನ್ನು ಒದಗಿಸಿ ಶಿಕ್ಷಣ ಇಲಾಖೆಗೆ ಬಹುದೊಡ್ಡಕೊಡುಗೆಯನ್ನು ನೀಡಿರುತ್ತಾರೆ. ಇದಕ್ಕಾಗಿ ಇಲಾಖೆ ವತಿಯಿಂದಅಭಿನಂದನೆ ಸಲ್ಲಿಸಬಯಸುತ್ತೇನೆಎಂದರು.

ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡುತ್ತಾಜ್ಞಾನದೀಪ ಶಿಕ್ಷಣ ಕಾರ್ಯಕ್ರಮದ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಳೆದ ಹಲವಾರು ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶಿಕ್ಷಕರ ಕೊರತೆಯಿರುವಸರಕಾರಿ ಹಾಗೂ ಆಯ್ದಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಸ್ವಯಂಸೇವಕ ಶಿಕ್ಷಕ/ಶಿಕ್ಷಕಿಯರನ್ನು ಒದಗಿಸಿ, ಸಂಸ್ಥೆಯ ವತಿಯಿಂದ ನೆರವು ನೀಡಲಾಗುತ್ತಿದೆ. ಇದರಂತೆ ಈ ವರ್ಷವೂ ಸುಮಾರು600ಗೌರವ ಶಿಕ್ಷಕರ ನಿಯೋಜನೆ ಮಾಡಲಾಗುತ್ತಿದೆ.

 

ಇದಲ್ಲದೆಶಾಲಾ ಕಟ್ಟಡರಚನೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಶಾಲಾ ಶೌಚಾಲಯಗಳ ರಚನೆ, ಶಾಲಾ ಕಟ್ಟಡ ದುರಸ್ತಿ, ಶಾಲಾ ಆವರಣ ನಿರ್ಮಾಣ, ಶಾಲಾ ಆಟದ ಮೈದಾನರಚನೆಮೊದಲಾದವುಗಳಿಗಾಗಿ ಪೂರಕಅನುದಾನ ನೀಡಲಾಗುತ್ತಿದೆ. ಇದಕ್ಕಾಗಿಯೇಈವರೆಗೆಒಟ್ಟುರೂ. 20.70 ಕೋಟಿ ಪೂರಕಅನುದಾನವನ್ನು ನೀಡಲಾಗಿದೆ.

ಗ್ರಾಮೀಣ ಶಾಲೆಗಳಲ್ಲಿಪೀಠೋಪಕರಣಗಳ ಕೊರತೆಯಿಂದ ಮಕ್ಕಳು ನೆಲದ ಮೇಲೆ ಕುಳಿತುಕೊಳ್ಳುವ ಪರಿಸ್ಥಿತಿಯನ್ನು ಗಮನಿಸಿಪೀಠೋಪಕರಣಗಳ ಕೊರತೆಯಿರುವ ಸರಕಾರಿ ಶಾಲೆಗಳಿಗೆ ಡೆಸ್ಕ್ ಬೆಂಚ್‍ಗಳನ್ನು ನೀಡಲಾಗುತ್ತಿದೆ. ಪ್ರಸ್ತುತ ಫೈಬರ್ ಮಾದರಿಯಡೆಸ್ಕ್ ಬೆಂಚ್‍ಗಳನ್ನು ಪೂರೈಕೆ ಮಾಡುತ್ತಿದ್ದು, ಅಧಿಕ ಬಾಳಿಕೆ ಹಾಗೂ ಕಡಿಮೆ ಭಾರವನ್ನು ಹೊಂದಿರುತ್ತದೆ. ಅನೇಕ ಗ್ರಾಮೀಣ ಶಾಲೆಗಳಲ್ಲಿ ಡೆಸ್ಕ್ ಬೆಂಚುಗಳ ಕೊರತೆಯನ್ನು ಗಮನಿಸಿ ಶ್ರೀ ಕ್ಷೇತ್ರದಿಂದ ಈ ವಿಶೇಷ ಕೊಡುಗೆಯನ್ನುನೀಡಲಾಗುತ್ತಿದೆ. ಇದರಂತೆ ಶಾಲೆಗಳಿಗೆ 8 ರಿಂದಗರಿಷ್ಟ 10 ಜೊತೆಡೆಸ್ಕ್ ಬೆಂಚುಗಳನ್ನು ಒದಗಿಸಲಾಗುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದಲೇ ಶಾಲೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಪ್ರಸ್ತುತ ವರ್ಷರಾಜ್ಯದ ಹಾವೇರಿ, ಬೆಳಗಾಂ, ಮತ್ತುಉತ್ತರಕನ್ನಡಜಿಲ್ಲೆಯ ವಿವಿಧ ತಾಲೂಕುಗಳ 311 ಶಾಲೆಗಳಿಗೆ 2370 ಜೊತೆಡೆಸ್ಕ್-ಬೆಂಚ್‍ಗಳನ್ನು ವಿತರಣೆ ಮಾಡಲಾಗುತ್ತಿದ್ದುಇದರಿಂದ ಸುಮಾರು 9500 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಇದುವರೆಗೆ ಶ್ರೀ ಕ್ಷೇತ್ರದಿಂದಒಟ್ಟು30 ಜಿಲ್ಲೆಗಳ 9,776 ಶಾಲೆಗಳಿಗೆ 63,553 ಜೊತೆಡೆಸ್ಕ್-ಬೆಂಚನ್ನು ಪೂರೈಕೆ ಮಾಡಿದ್ದು, ಒಟ್ಟುರೂ. 20.17ಕೋಟಿವಿನಿಯೋಗಿಸಲಾಗಿದೆ. ಇದರಿಂದಾಗಿ ಸುಮಾರು 2,54,212 ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಒದಗಿಸಿದಂತಾಗಿದೆ.
ಪ್ರಸ್ತುತಶೈಕ್ಷಣಿಕವರ್ಷಯಾವುದೇ ಅಡೆತಡೆಗಳಿಲ್ಲದೇ ಪೂರೈಸಲಿ ಹಾಗೂ ಎಲ್ಲಾ ಮಕ್ಕಳಿಗೂ ಶುಭವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್‍ಪೂಂಜರವರು, ಯೋಜನೆಯಕಾರ್ಯನಿರ್ವಾಹಕ ನಿರ್ದೇಶಕರಾದಡಾ| ಎಲ್.ಹೆಚ್, ಮಂಜುನಾಥ್, ಮುಖ್ಯಕಾರ್ಯನಿರ್ವಹಣಾಧಿಕಾರಿಯವರಾದಅನಿಲ್ ಕುಮಾರ್‍ಎಸ್.ಎಸ್., ಸಮುದಾಯಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದಆನಂದ ಸುವರ್ಣ, ಸಮುದಾಯಅಭಿವೃದ್ಧಿ ವಿಭಾಗದಯೋಜನಾಧಿಕಾರಿ ಪುಷ್ಪರಾಜ್, ಲಕ್ಷ್ಮೀ ಇಂಡಸ್ಟ್ರೀಸ್‍ನ ಮಾಲಕರಾದ ಮೋಹನ್‍ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum